IMG 20230206 WA0069

ಮಧುಗಿರಿ:1.20 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ…!

DISTRICT NEWS ತುಮಕೂರು

ಮಧುಗಿರಿ : ಮುಂದಿನ ದಿನಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ರೈತಪರ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಪಂಚರತ್ನ ಯೋಜನೆ ಅನುಷ್ಠಾನಗೊಂಡು ನಾಡಿನ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ತಾಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿಯಲ್ಲಿ ನೂತನ ಗ್ರಾ.ಪಂ.ಕಟ್ಟಡ, ಸತ್ತಿಗೇನಹಳ್ಳಿ ಹಾಗೂ ಬೆನಕನಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಅಂಬೇಡ್ಕರ್ ಭವನ, ಲಕ್ಲಿಹಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವಸೇತುವೆ ಕಾಮಗಾರಿ ಸೇರಿದಂತೆ. ಕಡಗತ್ತೂರಿನಲ್ಲಿ ಸೇತುವೆಯ ಒಟ್ಟು 1.20 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಾಡಿನಲ್ಲಿ ಬಡವರು ಸಂಕಷ್ಟದಲ್ಲಿದ್ದಾರೆ. ಇದನ್ನು ಮನಗಂಡಿರುವ ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಪಂಚರತ್ನ ಯೋಜನೆ ಜಾರಿಗೊಳಿಸಲು ಮುಂದಾಗಿದ್ದಾರೆ. ಇದರಂತೆ 1 ರಿಂದ 12ನೇ ತರಗತಿಯವರೆಗೂ ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ, ಸ್ವಕ್ಷೇತ್ರದಲ್ಲೇ ಉದ್ಯೋಗ, ಉಚಿತವಾಗಿ ಮನೆ ನಿರ್ಮಾಣ ಸೇರಿದಂತೆ. ವಿಧವೆಯರಿಗೆ 2500 ಹಾಗೂ ವೃದ್ಧರಿಗೆ 5 ಸಾವಿರ ಮಾಶಾಸನ ಹಾಗೂ ರೈತ ಚೈತನ್ಯ ಯೋಜನೆಯನ್ನು ನೀಡುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಕನಿಷ್ಟ 123 ಶಾಸಕರ ಬಲದ ಅಗತ್ಯವಿದ್ದು ರಾಜ್ಯಾದ್ಯಂತ ಸಂಚರಿಸಿ ಮತದಾರರಲ್ಲಿ ಮನವಿ ಮಾಡಿದ್ದು ಜನರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು ಮಧುಗಿರಿಯಲ್ಲೂ ಮತ್ತೊಮ್ಮೆ ನನಗೆ ಆಶೀರ್ವಾದ

ಮಾಡುವಂತೆ ಮನವಿ ಮಾಡಿದರು.
6 ಕೋಟಿ ವೆಚ್ಚದಲ್ಲಿ ಮೇವು : ನನ್ನ ಅವಧಿಯ ಮೊದಲ ವರ್ಷದಲ್ಲಿ ಕುಮಾರಸ್ವಾಮಿ ಸರ್ಕಾರವಿದ್ದು ಭೀಕರ ಬರಗಾಲ ಬಂದರೂ 6 ಕೋಟಿ ವೆಚ್ಚದಲ್ಲಿ ಮನೆ ಮನೆಗೆ ಮೇವನ್ನು ನೀಡಿದ್ದೇವೆ. ತಾಲೂಕಿನ ರೈತರು ಪಡೆದಿರುವ1 ರಿಂದ 2 ಲಕ್ಷವರೆಗಿನ ಸಾಲವನ್ನು ಮನ್ನಾ ಮಾಡಿದರು.ಕುಮಾರಸ್ವಾಮಿ
ಸರ್ಕಾರವನ್ನು ಕುತಂತ್ರದಿಂದ ಬೀಳಿಸಲಾಯಿತು. ನಂತರ 3 ವರ್ಷ ಕರೊನಾ ಭಯದಿಂದ ಬಿಜೆಪಿ ಸರ್ಕಾರ ಅನುದಾನ ನೀಡವುದನ್ನೇ ನಿಲ್ಲಿಸಿ ತಾರತಮ್ಯ ಮಾಡಿದ್ದು, ಅಧಿಕಾರಿ ಮಿತ್ರರ ಸಹಕಾರದಿಂದ ಇಲ್ಲಿಯವರೆಗೂ ಸಾಕಷ್ಟು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ. ಹಿಂದಿನಿಂದಲೂ ಅಧಿಕಾರಿಗಳಿಗೆ ಹೇಳುವ ಮಾತು ಒಂದೆ. ಜನರ ತೆರಿಗೆ ಹಣದಿಂದ ನಾವೆಲ್ಲ ಸಂಬಳ ಪಡೆಯುತ್ತಿದ್ದು ಯಾವುದೇ ಕಾರಣಕ್ಕೂ ಜನರಿಗೆ ಸಿಗುವ ಮೂಲಭೂತ ಸೌಕರ್ಯವನ್ನು ಕಡೆಗಣಿಸದೆ ಪ್ರಾಮಾಣಿಕತೆಯಿಂದ ಕೆಲಸ ಮಾಡುವಂತೆ ತಿಳಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜು ಮಾತನಾಡಿ, ಕ್ಷೇತ್ರಕ್ಕೆ ಸುಮಾರು 1500 ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿರುವ ಶಾಸಕರ ಆಡಳಿತವು ಪಾರದರ್ಶಕತೆಯಿಂದ ಕೂಡಿದ್ದು, ಹೇಳಿದಂತೆ ನಡೆಯುವ ವ್ಯಕ್ತಿ ನಮ್ಮ ಶಾಸಕರು. ಸರಳತೆಯಲ್ಲೇ ಬದುಕು ಸಾಗಿಸುತ್ತಿರುವ ಇವರು ಮುಂದೆಯೂ ಕ್ಷೇತ್ರದ ಶಾಸಕರು ಜನತೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾ.ಪಂ. ಇಓ ಲಕ್ಷ್ಮಣ್, ಗ್ರಾ.ಪಂ. ಅಧ್ಯಕ್ಷರಾದ ನಾಗಮ್ಮ, ಪ್ರೇಮಲತಾ, ಉಪಾಧ್ಯಕ್ಷರಾದ ಮಂಜುಳಾ, ಸುರೇಶ್, ಮುಖಂಡರಾದ ದತ್ತಣ್ಣ, ಮಂಜಣ್ಣ, ಪಿಡಿಓ ರಜನಿ, ಹೊನ್ನೇಶ್, ಸದಸ್ಯರು ಗ್ರಾಮಸ್ಥರು ಹಾಗೂ ಜೆಡಿಎಸ್ ಕಾರ್ಯಕರ್ತರು ಇದ್ದರು.

ವರದಿ. ಲಕ್ಷ್ಮಿಪತಿ ದೊಡ್ಡ ಯ ಲ್ಕೂರು