IMG 20220922 WA0000

ಮಧುಗಿರಿ:ಭಾರತ ಐಕ್ಯತಾ ಯಾತ್ರೆಯ ಪೂರ್ವಭಾವಿ ಸಭೆ..!

DISTRICT NEWS ತುಮಕೂರು

*ಭಾರತ ಐಕ್ಯತಾ ಯಾತ್ರೆಯ ಪೂರ್ವಭಾವಿ ಸಭೆಯ ಸಮಾರಂಭ ಹಾಗೂ ದಿವಂಗತ ಎಸ್ ಆರ್ ರಾಜಗೋಪಾಲ್ ಅವರ ಪುಣ್ಯ ಸ್ಮರಣೆಯ ಕಾರ್ಯಕ್ರಮ* ……

ಮಧುಗಿರಿ : ಪಟ್ಟಣದ ಎಂ ಎನ್ ಕೆ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಭಾರತ ಐಕ್ಯತ ಯಾತ್ರೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಯೂರ ಜಯ ಕುಮಾರ್ ರವರು ಸಭೆಯನ್ನು ಉದ್ಘಾಟಿಸಿ ಮಾತನಾಡಿ.ಕೇಂದ್ರ
ಸರಕಾರವು ಅಂಬಾನಿ , ಅದಾನಿರವರುಗಳಿಗೆ ನೀಡುತ್ತಿರುವ ಸವಲತ್ತುಗಳನ್ನು ದೇಶದ ಬಡಜನರಿಗೆ ಒದಗಿಸುವಲ್ಲಿ ಮೋದಿ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ
ಎಂದರು.

ಬಿಜೆಪಿ ಪಕ್ಷವು ಜಾರಿಗೊಳಿಸುತ್ತಿರುವ ಕಾನೂನುಗಳಿಂದ ಜನ ಸಾಮಾನ್ಯರಿಗೆ ಅನಾನುಕೂಲವಾಗುತ್ತಿದ್ದೂ ಇವರ ಕಾನೂನುಗಳಿಂದಾಗಿ ಅಂಬಾನಿ ಮತ್ತು ಅದಾನಿ ರವರುಗಳು ಮಾತ್ರ ಅಭಿವೃದ್ಧಿ ಕಾಣುತ್ತಿದ್ದಾರೆ.

ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಕೇಂದ್ರ ಸರಕಾರದ ಒಡೆತನದಲ್ಲಿದ್ದ ಅನೇಕ ಸರಕಾರಿ ಸಂಸ್ಥೆಗಳು ಇಂದೂ ಖಾಸಗೀಕರಣಕ್ಕೆ ಒಳಪಡುತ್ತಿವೆ . ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವಂತೆ ಅದಾನಿ ಪ್ರಪಂಚದ 2 ನೇ ಶ್ರೀಮಂತರಾಗಿದ್ದಾರೆ

IMG 20220922 WA0002

ಇಡೀ ದೇಶದ ಜನತೆ ರಾಹುಲ್ ಗಾಂಧಿಯವರ ಪಾದಯಾತ್ರೆಗೆ ಬೆಂಬಲಿಸುತ್ತಿದ್ದಾರೆ ದೇಶವನ್ನು ಒಡೆಯಲು ಹೊರಟಿರುವ ಬಿಜೆಪಿ ಯವರು ಮಾತ್ರ ಭಾರತ್ ಜೋಡೋ ಯಾತ್ರೆಯನ್ನು ಭಾರತ್ ತೋಡೊ ಯಾತ್ರೆಯೆಂದು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕೈಗೊಂಡಿರುವ ರಾಹುಲ್ ಗಾಂಧೀಯವರ 3500 ಕಿ.ಮೀ ಪಾದಯಾತ್ರೆಗೆ ದೇಶದಾದ್ಯಂತ ಭರ್ಜರಿ ಜನ ಬೆಂಬಲ ವ್ಯಕ್ತವಾಗುತ್ತಿದ್ದು, ಕರ್ನಾಟಕದಲ್ಲಿಯೂ ಜನತೆ ಯನಿರೀಕ್ಷೆಗೂ ಮೀರಿ ಬೆಂಬಲಿಸುವ ವಿಶ್ವಾಸವಿದೆ.

ಕರ್ನಾಟಕದಲ್ಲಿ ಶೇಕಡ.40 % ಕಮೀಷನ್ ಸರ್ಕಾರ ಆಡಳಿತ ನಡೆಸುತ್ತಿದೆ, ಇವರ ಆಡಳಿತದ ವಿರುದ್ದ ರಾಜ್ಯದ ಜನತೆ ಅಸಮಾಧಾನಗೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಬೃಹತ್ ಪಾದಯಾತ್ರೆಯಿಂದ ಕರ್ನಾಟಕದ ಬಿಜೆಪಿ ನಾಯಕರಿಗೆ ನಡುಕ ಉಂಟಾಗಿದೆ ಎಂದರು.

ಅಂದೂ ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ ನಡೆಸಿತ್ತು. ದೇಶದ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಹುಲ್ ಗಾಂಧಿ ಭಾರತ ಜೋಡಣೆಯ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ಆರ್.ಎಸ್.ಎಸ್. ನವರು ಯಾರು ಸ್ವಾತಂತ್ರ್ಯಕ್ಕಾಗಿ
ಪ್ರಾಣತ್ಯಾಗ ಮಾಡಲಿಲ್ಲ.‌ ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಜವಹರಲಾಲ್ ನೆಹರೂ ರವರ ಭಾವಚಿತ್ರವನ್ನು ಸರ್ಕಾರದ ವತಿಯಿಂದ ಹಮ್ಮಿಕೊಂಡಿದ್ದ 75 ನೇ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಕಿರಿದಾದ ನೆಹರು ರವರ ಭಾವ ಚಿತ್ರವನ್ನು ಅಳವಡಿಸುವ ಮೂಲಕ ಮಾಜಿ ಪ್ರಧಾನಿಯವರನ್ನು ಅವಮಾನಿಸಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಮಾತನಾಡಿ. ಅ.11 ರಂದು ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆಯು ಕಳ್ಳಂಬೆಳ್ಳ ತಲುಪಲಿದೆ ಅಂದೂ ನಮ್ಮ ತಾಲೂಕಿನಿಂದ ಸುಮಾರು 1 ಸಾವಿರ ದ್ವಿಚಕ್ರ ವಾಹನಗಳ ಸವಾರರು ಹಾಗೂ ಕ್ಷೇತ್ರದಿಂದ ಸುಮಾರು 5 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಆಚರಣೆಯ ಸಮಿತಿಗೂ.ನನ್ನನ್ನು ಅಧ್ಯಕ್ಷರನ್ನಾಗಿಸಿದ್ದು ಹಾಗೂ ತಾಲೂಕಿನಿಂದ ಸಾವಿರಾರು ಜನರು ಸ್ವ ಇಚ್ಛೆಯಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರ ಮಾದರಿಯಲ್ಲಿಯೇ ರಾಹುಲ್ ಗಾಂಧಿಯವರ ಐತಿಹಾಸಿಕ ಭಾರತ್ ಜೋಡೋ ಯಾತ್ರೆಯಲ್ಲೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಎಂದರು

ಈ ಯಾತ್ರೆಯಲ್ಲಿ ಭಾಗವಹಿಸುವ ಅದೃಷ್ಟ ನಮಗೆ ಸಿಕ್ಕಿರುವುದು ನಮ್ಮ ಸುದೈವ. ನಮ್ಮ ಜೀವನದಲ್ಲಿ ಮತ್ತೆ ಇಂತಹ ಅವಕಾಶಗಳು ದೊರೆಯುವುದಿಲ್ಲ. ನಮ್ಮ ಕ್ಷೇತ್ರದಿಂದ ಅತೀ ಹೆಚ್ಚು ಜನ ಭಾಗವಹಿಸಿದ ಯಶಸ್ಸಿನ ಕೀರ್ತಿ ನಮಗೆ ದೊರೆಯುವಂತಾಗಬೇಕು ಎಂದರು.

ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಜಿಲ್ಲೆಯಲ್ಲಿ ಕನಿಷ್ಠ 8 ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗುವಂತೆ ಕಾರ್ಯಕರ್ತರು ಶ್ರಮವಹಿಸಬೇಕು ಎಂದರು.

IMG 20220922 WA0003

ಕುವೆಂಪುರವರು ಹೇಳಿದಂತೆ ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ನಮ್ಮದು ಗಾಂಧೀ ಹಿಂದುತ್ವವಾದರೆ ಬಿಜೆಪಿಯವರದ್ದು ಗೋಡ್ಸೆ ಹಿಂದುತ್ವ ವಾಗಿದೆ. ಎಲ್ಲಾ ಜಾತಿಯ ಬಡವರ ಪರವಾಗಿ ಕೆಲಸ ಮಾಡುವುದು ಕಾಂಗ್ರೆಸಿನ ಧ್ಯೇಯ.
ಅದಾನಿಯನ್ನು ದೇಶದ 2 ನೇ ಶ್ರೀಮಂತರನ್ನಾಗಿ ಮಾಡಿದ್ದೇ ಬಿಜೆಪಿಯವರ ಸಾಧನೆಯಾಗಿದೆ.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮುಕ್ತ ಭಾರತ ಮಾಡಲು ನಾವೆಲ್ಲ ಪಣ ತೊಡಬೇಕು. ದೇಶದಲ್ಲಿ ಮತೀಯ ಗಲಭೆಗಳನ್ನು ಕದಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಭಾರತ್ ಜೋಡೋ ಕಾರ್ಯಕ್ರಮದ ನಮ್ಮ ರಾಜ್ಯದ ಉಸ್ತುವಾರಿಯನ್ನು ಕೆಪಿಸಿಸಿ ಅಧ್ಯಕ್ಷರಾದ
ಡಿ.ಕೆ.ಶಿವಕುಮಾರ್ ರವರಿಗೆ ವಹಿಸಿದ್ದು ಅವರ ನೇತೃತ್ವದಲ್ಲಿ ಈ ಯಾತ್ರೆಯು ಯಶಸ್ವಿ ಯಾಗುತ್ತದೆ ಎಂಬ ಭಯ ಮತ್ತು ಆತಂಕದಿಂದ ಕೇಂದ್ರ ಸರಕಾರವು ಇ.ಡಿ. ಇಲಾಖೆಯ ಅಸ್ತ್ರ ಬಳಸಿ ಡಿ.ಕೆ.ಶಿ ಅವರಿಗೆ ಮಾನಸಿಕ ಹಿಂಸೆ ನೀಡಿ ಅವರನ್ನು ಕಟ್ಟಿಹಾಕಲು ಯತ್ನಿಸುತ್ತಿರುವ ಕ್ರಮ ಸರಿಯಲ್ಲ ಎಂದರು…
ಮಾಜಿ ಸಂಸದರಾದ ಬಿ . ಎನ್. ಚಂದ್ರಪ್ಪ. ಕೆಪಿಸಿಸಿ ಡಿಜಿಟಲ್ ಉಸ್ತುವಾರಿ ಶ್ರೀನಾಥ್. ಮಧುಗಿರಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಎಸ್ ಮಲ್ಲಿಕಾರ್ಜುನಯ್ಯ. ಎಐಸಿಸಿ ಕೋಆರ್ಡಿನೇಟರ್ ಶ್ರೀನಿವಾಸ್ ಕೆಪಿಸಿಸಿ ಕಾರ್ಯದರ್ಶಿ ಬಾಲಕೃಷ್ಣ ಕೆಪಿಸಿಸಿ ಸದಸ್ಯ ಮುನಿ ಚೆನ್ನಮ್ಮ .ಜಿಲ್ಲಾಧ್ಯಕ್ಷ ರಾಮಕೃಷ್ಣ. ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ .ಹಿರಿಯ ಮುಖಂಡರುಗಳಾದ ಜಿ .ಜೆ ರಾಜಣ್ಣ. ಎನ್ ಗಂಗಣ್ಣ. ಎಂ. ಕೆ ನಂಜುಂಡಯ್ಯ. ಆದಿ ನಾರಾಯಣ ರೆಡ್ಡಿ .ಈರಣ್ಣ. ಪಿಟಿ ಗೋವಿಂದಪ್ಪ ಗೋಪಾಲಯ್ಯ .ಸುವರ್ಣಮ್ಮ ಮರಿಯಣ್ಣ .ಇಂದಿರಾ ದೇನೆ ನಾಯಕ್. ತಿಮ್ಮರಾಜು .ಆಯುಬ್ ನರಸಿಯಪ್ಪ .ಚಿನ್ನಪ್ಪ
ಸಿದ್ದಗಂಗಪ್ಪ ಪುರಸಭಾ ಸದಸ್ಯರಾದ ಎಮ್ .ಎಸ್ ಚಂದ್ರಶೇಖರ್. ಆನಂದ್ ಕುಮಾರ್. ಆಚಾರಿ ಮಂಜು .ರಾಮಣ್ಣ .ಅಲೀಮ್ ಮುಲ್ಲಾ. ಗೋವಿಂದರಾಜು ಹಲವಾರು ಪ್ರಮುಖ ಹಿರಿಯ ಮುಖಂಡರು ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ ಲಕ್ಷ್ಮಿಪತಿ ದೊಡ್ಡ ಯಲ್ಕೂರು