ಬಿಜೆಪಿ ದೇಶ ಒಡೆಯುವ ಕೆಲಸ ಮಾಡುತ್ತಿದೆ, ಎ.ಐ.ಸಿ.ಸಿ ಕಾರ್ಯದರ್ಶಿ ಮಯೂರ್ ಜಯಕುಮಾರ ಆರೋಪ
ಪಾವಗಡ: ಬಿಜೆಪಿ ಸರ್ಕಾರ ದೇಶದಲ್ಲಿ ಕೋಮಗಲಭೆಯನ್ನು ಸೃಷ್ಟಿಸುವ ಕೆಲಸ ಮಾಡುತ್ತಿದೆ, ಧರ್ಮದ ಹೆಸರಿನಲ್ಲಿ ಜನರ ಮಧ್ಯೆ ವೈರತ್ವ ಬೆಳೆಸುತ್ತಿದೆ, ಎಂದು ಎ.ಐ.ಸಿ.ಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಆರೋಪಿಸಿದರು.
ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಬುಧವಾರ ಏರ್ಪಡಿಸಿದ್ದ, ಭಾರತ್ ಜೋಡೊ ಯಾತ್ರೆಯ ಪೂರ್ವಬಾವಿ ಸಭೆಯಲ್ಲಿ ಅವರು ಕಾರ್ಯಕರ್ತರು, ಮುಖಂಡರನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಹುಲ್ ಗಾಂದಿಯವರು ದೇಶದ ಐಕ್ಯತೆಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3500 ಕಿ.ಮೀ ಪಾದಯಾತ್ರೆ ಆರಂಭಿಸಿದ್ದಾರೆ . ಬಿಜೆಪಿಯ ಯಾವೊಬ್ಬ ನಾಯಕನೂ ಕಾಂಗ್ರೆಸ್ ನಾಯಕರ ರೀತಿ ಸ್ವತಂತ್ರಕ್ಕಾಗಿ ಹೋರಾಟ ಮಾಡಿಲ್ಲ, ಬ್ರಿಟಿಷರಿಗೆ ಗುಲಾಮರ ರೀತಿ ಕೆಲಸ ಮಾಡಿ ಅವರು ಕೊಟ್ಟಿದ್ದನ್ನು ಸ್ವೀಕರಿಸುವವರಿಗೆ ಗೌರವ ಕೊಡುವ ಅವಶ್ಯಕತೆ ಇಲ್ಲ ,ಆದ್ದರಿಂದ ಸಾವರ್ಕರ್ ಅವರನ್ನು ಸ್ವತಂತ್ರ ಹೋರಾಟಗಾರ ಎಂದು ಹೇಳಲು ಸಾಧ್ಯವಿಲ್ಲ ಎಂದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಭಾರತ್ ಜೋಡೊ ಪಾದಯಾತ್ರೆ ಬಿಜೆಪಿಯವರಿಗೆ ಸಿಂಹ ಸ್ವಪ್ನವಾಗಿದೆ. ಹೀಗಾಗಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೇಸ್ ಗ್ರಾಮೀಣ ಘಟಕದ ಅಧ್ಯಕ್ಷ ಎಚ್. ವಿ. ವೆಂಕಟೇಶ್ ಮಾತನಾಡಿ, ಚಳ್ಳಕೆರೆಯಿಂದ ಮೊಣಕಾಲ್ಮೂರು ವರೆಗೆ ನಡೆಯುವ ಪಾದಯಾತ್ರೆಯಲ್ಲಿ ತಾಲ್ಲೂಕಿನ 10 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು, ಜಿಲ್ಲೆಯಲ್ಲಿನ ಕಾಂಗ್ರೆಸ್ ಶಕ್ತಿಯನ್ನು ಕಾರ್ಯಕರ್ತರು, ಮುಖಂಡರು ಪ್ರದರ್ಶಿಸಲಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ, ತಾಲ್ಲೂಕು ನಗರ ಘಟಕದ ಅಧ್ಯಕ್ಷ ಸುದೇಶ್ ಕುಮಾರ್ ಮಾತನಾಡಿದರು.
ಮಾಜಿ ಶಾಸಕ ಸೋಮ್ಲಾನಾಯ್ಕ, ಚಂದ್ರಶೇಖರಗೌಡ, ಟಿ.ನರಸಿಂಹಯ್ಯ, ಶಶಿಹುಲಿಕುಂಟೆ, ಪುರಸಭೆ ಅಧ್ಯಕ್ಷ ವೇಲುರಾಜು, ಉಪಾಧ್ಯಕ್ಷೆ ಶಶಿಕಲಾ, ಸದಸ್ಯ ರಾಜೇಶ್, ರವಿ, ಪಾಪಣ್ಣ, ಗುರಪ್ಪ, ವಕೀಲ ವೆಂಕಟರಾಮರೆಡ್ಡಿ, ನರಸಿಂಹಪ್ಪ, ನಾಗರಾಜು, ನಿಸಾರ್ ಉಪಸ್ಥಿತರಿದ್ದರು.