ಕೊಡಿಗೇನಹಳ್ಳಿ ಹೋಬಳಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಗಂಗಾಪೂಜೆ ಕಾರ್ಯಕ್ರಮ….
ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಹೋಬಳಿ ಮೈದನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು 21 ಲಕ್ಷದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ನೂತನಕೊಠಡಿಗಳ ಉದ್ಘಾಟನೆ ಹಾಗೂ ಮೈದನಹಳ್ಳಿ ಕೆರೆ ತುಂಬಿ ಕೊಡಿ ಹೋಗಿರುವುದರಿಂದ ಕೆರೆಯ ಕೋಡಿ ಹತ್ತಿರ ಗಂಗಾಪೂಜೆ ಪೂಜೆ ನೆರವೇರಿಸಿದರು. ತದನಂತರ ಸಿಂಗನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು 8 .20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ನೂತನ ಕಟ್ಟಡಗಳನ್ನು ಉದ್ಘಾಟನೆ ಮಾಡಿದರು.
ನಂತರ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಭಾಸ್ಕರ ರೆಡ್ಡಿ ಕೊಡಿಗೇನಹಳ್ಳಿಯಿಂದ ಸಿಂಗನಹಳ್ಳಿ ಗ್ರಾಮದವರಿಗೂ ರಸ್ತೆ ತುಂಬಾ ಅಧಗೆಟ್ಟು ತುಂಬಾ ಹಾಳಾಗಿತ್ತು ಸಾರ್ವಜನಿಕರು ಮತ್ತು ಶಾಲಾ ವಿದ್ಯಾರ್ಥಿಗಳು ಓಡಾಡಲು ತುಂಬಾ ತೊಂದರೆ ಆಗುತ್ತಿತ್ತು ಇದನ್ನು ಅರಿತು ನಾವುಗಳು ಶಾಸಕರಾದ ಎಂ.ವಿ .ವೀರಭದ್ರಯ್ಯನವರಲ್ಲಿ ಮನವಿ ಮಾಡಿದಾಗ ಅವರು ತಕ್ಷಣ ಸ್ಪಂಧಿಸಿ ಮೈದನಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಕೊಡಿಗೇನಹಳ್ಳಿಯಿಂದ ಸಿಂಗನಹಳ್ಳಿಗೆ ಹೋಗುವ ರಸ್ತೆಗೆ. ಸುಮಾರು 3 ಕೋಟಿ ರೂಪಾಯಿಗಳ ವೆಚ್ಚದ.ಅನುದಾನವನ್ನು ಮಂಜೂರು ಮಾಡಿಸಿ ಈ ಕಾಮಗಾರಿಗಳು ತುರ್ತಾಗಿ ನಡೆಯಬೇಕೆಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು ಅದರಂತೆಯೇಕಾಮಗಾರಿಗಳು ಆದಷ್ಟು ಬೇಗನೆಮುಗಿಸಿ ಈ ದಿನ ಉದ್ಘಾಟನೆ ಮಾಡುತ್ತಿರುವುದು ನಮಗೆ ತುಂಬಾ ಸಂತೋಷವಾಗಿದೆ ಎಂದರು.
ಜನರು ಕೂಡ ಮಾತನಾಡುತ್ತಿದ್ದಾರೆ ಶಾಸಕರು ತುಂಬಾ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಸಿಂಗನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಸಂಜೀವಮ್ಮ ತಾಲೂಕು ಜೆಡಿಎಸ್ ನ ಎಸ್ಸಿ ಘಟಕದ ಅಧ್ಯಕ್ಷರಾದ ಶಿವಣ್ಣ ಕೊಡಿಗೇನಹಳ್ಳಿ ಹೋಬಳಿ ಜೆಡಿಎಸ್ ಘಟಕದ ಅಧ್ಯಕ್ಷರಾದ ಲಕ್ಷ್ಮೀನರಸಿಂಹ ರೆಡ್ಡಿ. ಸಿಂಗನಹಳ್ಳಿ ನಾಗರಾಜು .ರಮೇಶ್ .ನಾಸೀರ್ ಸೈಯದ್ ಗೌಸ, ಗಂಗಾಧರ್. ಆನಂದ್. ಶ್ರಾವಂತಿಕಮಣಿ. ಪಿಡಬ್ಲ್ಯೂಡಿ ಇಲಾಖೆಯ ಪ್ರಭಾರ ಸಹಾಯಕ ಕಾರ್ಯ ಪಾಲಕ ಇಂಜಿನಿಯರಾದ ದೀಪಕ. ಶಾಲೆಯಮುಖ್ಯೋಪಾಧ್ಯಾಯರು ಶಿಕ್ಷಕರುಗಳು ವಿದ್ಯಾರ್ಥಿಗಳು ಮುಖಂಡರುಗಳು ಕಾರ್ಯಕರ್ತರು ಗ್ರಾಮಸ್ಥರು ಹಾಜರಿದ್ದರು
ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು