IMG 20241124 WA0004

ಪಾವಗಡ : ಶಾಂತಿಯುತವಾಗಿ ನಡೆದ ಗ್ರಾಮ ಪಂಚಾಯತಿಗಳ ಉಪ ಚುನಾವಣೆ….!

DISTRICT NEWS ತುಮಕೂರು

ಶಾಂತಿಯುತವಾಗಿ ನಡೆದ ಗ್ರಾಮ ಪಂಚಾಯತಿಗಳ
ಉಪ ಚುನಾವಣೆ.

ಪಾವಗಡ: ತಾಲ್ಲೂಕಿನ ಮೂರು ಗ್ರಾಮ ಪಂಚಾಯಿತಿಗಳ ಕ್ಷೇತ್ರಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದ ನಾಲ್ಕು ಗ್ರಾಮಗಳಿಗೆ ಉಪ ಚುನಾವಣೆ ಶನಿವಾರ ಶಾಂತವಾದ ರೀತಿಯಲ್ಲಿ ಮತದಾನ ಮತದಾನ ನಡೆಯಿತು.

ಬ್ಯಾಡನೂರು ಗ್ರಾಮ ಪಂಚಾಯಿತಿಯ ಬ್ಯಾಡನೂರು.
ಕಾಮನದುರ್ಗ ಗ್ರಾಮ ಪಂಚಾಯಿತಿಯ
ಸೂಲನಾಯಕನಹಳ್ಳಿ,
ವದನಕಲ್ಲು ಗ್ರಾಮ ಪಂಚಾಯಿತಿಯ.ಕ್ಯಾತಗಾನಹಳ್ಳಿ ಮತ್ತು
ಕೊಡಮಡಗು ಗ್ರಾಮ ಪಂಚಾಯಿತಿಯ ಕಡಮಲಕುಂಟೆ ಕ್ಷೇತ್ರಗಳಿಗೆ ಶಾಂತಿಯುತವಾಗಿ ಮತದಾನ ನಡೆದಿದೆ

ಈ ಉಪಚುನಾವಣೆ ಬೆಳಿಗ್ಗೆ 07 ರಿಂದ ಸಂಜೆ 05 ಗಂಟೆಯ ವರೆಗೆ ಮತದಾನ ನಡೆಯಿತು.

ಬ್ಯಾಡನೂರು ಗ್ರಾಮದಲ್ಲಿ ಶೇಕಡಾ 72.99 % ರಷ್ಟು, ಸೂಲನಾಯಕನಹಳ್ಳಿಯಲ್ಲಿ ಶೇಕಡಾ 69.55% ರಷ್ಟು ಕ್ಯಾತಗಾನಹಳ್ಳಿಯಲ್ಲಿ 68.57 ರಷ್ಟು ಮತ್ತು ಕಡಮಲಕುಂಟೆ ಗ್ರಾಮದಲ್ಲಿ 69.57% ರಷ್ಟು ಮತದಾನವಾಗಿದೆ

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 2938 ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು, ಇದರಲ್ಲಿ 1415, ಮಹಿಳಾ ಮತದಾರರು, 1523 ಪುರುಷ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು

ಈ ಚುನಾವಣೆಗಳ ಮತ ಎಣಿಕೆ ಕಾರ್ಯ 26-11-2024 ರ ಮಂಗಳವಾರ ನಡೆಯಲಿದೆ. ಎಂದು ತಿಳಿದು ಬಂದಿದ್ದು.

ಯಾವುದೇ ಅಹಿತಕರ ಘಟನೆಗಳು ನಡೆದಂತೆ ಪೊಲೀಸ್ ಇಲಾಖೆ ಮತ್ತು ತಾಲ್ಲೂಕು ಚುನಾವಣೆ ಶಾಖೆ ಕಟ್ಟೆಚ್ಚರ ವಹಿಸಿತ್ತು.

ವರದಿ : ಶ್ರೀನಿವಾಸಲು. A

Leave a Reply

Your email address will not be published. Required fields are marked *