ಮನುಕುಲ ಆರೋಗ್ಯಕರವಾಗಿರಲು ಸಸ್ಯ ಸಂಪತ್ತು ಬೆಳಸಿ ಉಳಿಸಿ ಯೋಜನಾಧಿಕಾರಿ ನಂಜುಂಡಿ ಸಲಹೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪಾವಗಡ ತಾಲ್ಲೂಕು ಮುಗದಾಳ ಬೆಟ್ಟ ಗ್ರಾಮದ ರಾಷ್ಟ್ರ ಪ್ರಗತಿ ಪ್ರೌಢ ಶಾಲಾ ಆವರಣದಲ್ಲಿ ಸಸಿಗಳನ್ನು ಯೋಜನೆ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಪರಿಸರ ಸಂರಕ್ಷಣೆ ಮತ್ತು ವನ ಬೆಳೆಸುವುದು ದೇಶದ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಮತ್ತು ಮುಂದಿನ ಪೀಳಿಗೆಗೆ ನಾವು ಕೊಡುವ ಕೊಡುಗೆ ಎಂದರೆ ಸಸ್ಯ ಸಂಪತ್ತು ಕೊಡಬೇಕು ಅಂತಹ ವಾತಾವರಣ ಬೆಳೆದ ಮಕ್ಕಳು ಉತ್ತಮ ಗಾಳಿ ಬೆಳಕು ನೀರು ಆರೋಗ್ಯ ಮತ್ತು ಉತ್ತಮ ಶಿಕ್ಷಣದ ಕಡೆ ಪ್ರಭಾವಿತರಾಗುತ್ತಾರೆ ನಾವು ನಮ್ಮ ಕೈಲಾದಷ್ಟು ತಮ್ಮ ತಮ್ಮ ಸುತ್ತ ಮುತ್ತ ಮತ್ತು ಖಾಲಿ ಜಾಗ ಇರುವ ಕಡೆಗಳಳೆಲ್ಲ ಗಿಡ ನೆಡುವ ಕಾರ್ಯಕ್ರಮ ಮಾಡಬೇಕು ಎಂದು ಯೋಜನಾಧಿಕಾರಿ ನಂಜುಂಡಿ ಮನವಿ ಮಾಡಿದರು
ಶಾಲಾ ಮುಖ್ಯ ಶಿಕ್ಷಕ ಶಿವರಾಜ್ ರವರು ಮಾತನಾಡಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯ ಮತ್ತು ದೇಶಕ್ಕೆ ಸ್ವಾವಲಂಬನೆ ಬದುಕು ಕೊಟ್ಟಿದ್ದಲ್ಲದೆ ಕೋಟ್ಯಂತರ ಜನರ ಜೀವನವನ್ನು ಸುಗಮಗೊಳಿಸಿದೆ ಆರ್ಥಿಕವಾಗಿ ಸಾಮಾಜಿಕ ಶೈಕ್ಷಣಿಕ ಜೊತೆಗೆ ತನ್ನ ಕುಟುಂಬದ ಪೋಷಣೆಗೆ ಅಗತ್ಯವಾದ ಆರ್ಥಿಕ ನೆರವು ನೀಡಿ ಮಹತ್ತರ ಕಾರ್ಯಕ್ರಮ ಸಮಗ್ರವಾಗಿ ನಿಭಾಯಿಸುತ್ತಿದೆ ಇದಕ್ಕೆಲ್ಲ ದೈವ ಸಂಭೂತ ಸಂಕಲ್ಪ ಮಾನವ ಬಡವರಲ್ಲಿ ದೇವರನ್ನು ಕಾಣುವ ಪರಮ ಪೂಜ್ಯ ಡಾ ವೀರೇಂದ್ರ ಹೆಗ್ಗಡೆ ಸರ್ ರವರಿಗೆ ಕೋಟಿ ಕೋಟಿ ನಮನ ಸಲ್ಲಿಕೆ ಮಾಡಬೇಕು ಎಂದರು ನಮ್ಮ ಶಾಲೆಗೆ ಕೊಟ್ಟ ಸಸಿಗಳನ್ನು ಬೆಳೆಸಿ ಉಳಿಸಿ ಪೋಷಣೆ ಮಾಡಿ ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಕಲ್ಪಿಸುತ್ತೇವೆ ಜೊತೆಗೆ ಯೋಜನೆಯ ಕಾರ್ಯಕ್ರಮ ಸಮಗ್ರವಾಗಿ ಮುಂದುವರೆಯಲು ಸಹಕಾರ ಮಾಡಿ ನಾವು ನಮ್ಮ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತೇವೆ ಎಂದರು ಕಾರ್ಯಕ್ರಮದಲ್ಲಿ ಕೋಟಗುಡ್ಡ ಮೇಲ್ವಿಚಾರಕ ಸುಭಾಷ್ ಹಿರಿಯ ಮುಖಂಡ ಡಿ ರಾಮಯ್ಯ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಅಂಜನನಾಯಕ ಹೆಂಜಾರಪ್ಪ ಬಂಗೇಪ್ಪ ಮಹೇಶ್ ಗಿರಿಜಮ್ಮ ಮೂಡಲಗಿರಿಯಪ್ಪ ರಾಜ್ಯ ಸಂಪನ್ಮೂಲ ವ್ಯಕ್ತಿ ಆರ್ ಎನ್ ಲಿಂಗಪ್ಪ ನರಸಿಂಹ ಮೂರ್ತಿ ಮಂಜುನಾಥ್ ಮತ್ತು ಸಿಬ್ಬಂದಿ ವರ್ಗ ಮತ್ತು ಗ್ರಾಮದ ಹಿರಿಯರು ಹಾಜರಿದ್ದರು
ವರದಿ: ಬುಲೆಟ್ ವೀರಸೇನಯಾದವ್