ಯಡಿಯೂರಪ್ಪ ರಾಜಿನಾಮೆ ಗೆ ಕಾಂಗ್ರೆಸ್ ಆಗ್ರಹ…
ನವದೆಹಲಿ: ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ರಾಗಿ ಸುಂದೀಂದ್ರರಾವ್ ಅವರ. ನೇಮಕ ವೇಳೆ ಬ್ರಹ್ಮಾಂಡ ಭ್ರಷ್ಟಾಚಾರ ವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರ ಕುಟುಂಬ ಮಾಡಿದೆ ಎಂದು ಶಾಸಕ ಹಾಗು ಕಾಂಗ್ರೆಸ್ ನ ತಮಿಳುನಾಡು ಉಸ್ತುವಾರಿ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಸುಧೀಂದ್ರ ರಾವ್ ಅವರನ್ನು 2019ರ ಡಿಸೆಂಬರ್ 30 ರ ನೇಮಕದ ವೇಳೆ ₹16 ಕೋಟಿ ಲಂಚದ ಬೇಡಿಕೆಯ ಒಪ್ಪಂದ ನಡೆದಿತ್ತು.
ಈ ಡೀಲ್ ನ ಮೊದಲ ಭಾಗವಾಗಿ ಸುಧೀಂದ್ರ ರಾವ್ ಅವರು ₹9.75 ಕೋಟಿ ಯನ್ನು ಮುಖ್ಯಮಂತ್ರಿ ಗಳ ಸಂಬಂಧಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಮರಿಸ್ವಾಮಿ ನೀಡಿದ್ದಾರೆ.
ಸುಧೀಂದ್ರ ರಾವ್ ಅವರನ್ನು ಬಿಎಸ್ ವೈ ಕುಟುಂಬಕ್ಕೆ ಮರಿಸ್ವಾಮಿ ಅವರು ಪುತ್ರ ವಿಜಯೇಂದ್ರ,,ಮೊಮ್ಮಗ ಶಶಿಧರ ಮರಡಿ ಹಾಗೂ ಸೋದರ ಸಂಬಂಧಿ ಸಂಜಯ್ ಅವರಿಗೆ ರಾವ್ ಅವರನ್ನು ಪರಿಚಯಿಸುತ್ತಾರೆ.
ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನಕ್ಕಾಗಿ 16 ಕೋಟಿ ಗಳ ಡೀಲ್ ಆಗುತ್ತೆ ಅದರ ಭಾಗವಾಗಿ ಮೊದಲು 10 ಕೋಟಿ ನೀಡಲು ತಿಳಿಸುತ್ತಾರೆ. ಸುಧೀಂದ್ರ ರಾವ್ ಅವರು ತಮ್ಮ ಆಸ್ತಿ ಗಳ ಜೊತೆ ಬ್ಯಾಂಕ್ ಲೋನ್ ಪಡೆದು ₹9.75 ಕೋಟಿ ಹಣವನ್ನು ಮರಿಸ್ವಾಮಿಯವರಿಗೆ ನೀಡಿದ್ದಾರೆ,ಖಾಸಗಿ ವಾಹಿನಿಗೆ ಸುಧೀಂದ್ರ ರಾವ್ ತಿಳಿಸಿದ್ದಾರೆ ಎಂದು ದಿನೇಶ್ ಗುಂಡೂರಾವ್ ಅವರು ತಿಳಿಸಿದರು.
ರಾವ್ ಅವರ ಅಂದಾಜಿನಂತೆ ಈ ಮೂವರು ಸಿಎಂ ಕುಟುಂಬ ಸದಸ್ಯರು ಲಂಚವಾಗಿ ಸುಮಾರು ₹60 ಕೋಟಿಯಷ್ಟು ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಸುಧೀಂದ್ರ ರಾವ್ ಹೇಳುವಂತೆ
ಸಿಎಂ ಅವರು,ತಮ್ಮ ಕುಟುಂಬ ಸದಸ್ಯರು ದಾವೋಸ್ ಮತ್ತು ಮಾರಿಷಸ್ ಪ್ರವಾಸಕ್ಕೆ ತೆರಳಿದ್ದು, ಮೊಲೆಕ್ಸ್ ಕಂಪನಿ ಅವರ ಪ್ರಯಾಣದ ಅಷ್ಟೂ ಖರ್ಚು ನೋಡಿಕೊಳ್ಳುತ್ತಿದೆ. ಅದಕ್ಕೆ ಸಂಬಂಧಿಸಿದ ಕಡತಗಳನ್ನು ಕೂಡಲೇ ತೆರವು ಮಾಡಬೇಕು ಎಂದಿದ್ದಾರೆ. ಅದರಂತೆ ಅವರು ಆ ಕೆಲಸ ಮುಗಿಸಿ ಕೊಟ್ಟಿದ್ದಾರಂತೆ ಸುದೀಂದ್ರರಾವ್.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ರಾಜೀನಾಮೆ ನೀಡಬೇಕು. ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ಗೆ ವಹಿಸಬೇಕೆಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.
–