ಪಾವಗಡ ತಾಲ್ಲೂಕಿನ ನಿಡಗಲ್ ಗ್ರಾಮದಲ್ಲಿ ವಾಲ್ಮೀಕಿ ಜಾಗೃತಿ ವೇದಿಕೆ ಹಾಗೂ ಮಹರ್ಷಿ ವಾಲ್ಮೀಕಿ ಆಶ್ರಮದ ನೇತೃತ್ವದಡಿಯಲ್ಲಿ ನಿಡಗಲ್ ದಸರಾ ಉತ್ಸವ ವನ್ನು ವಿಶೇಷವಾಗಿ ಆಚರಿಸಲಾಯಿತು.
ಹಿಂದೆ ರಾಜ ಮಹಾರಾಜರ ಕಾಲದಿಂದಲೂ ನಿಡಗಲ್ ಸಂಸ್ಥಾನದಲ್ಲಿ ನಿಡಗಲ್ ದಸರಾ ಉತ್ಸವ ಪ್ರಾತಿನಿಧ್ಯ ಪಡೆದುಕೊಂಡಿತ್ತು.ಆದರೆ ಕಾಲಕ್ರಮೇಣ ಈ ಒಂದು ಉತ್ಸವ ಕಣ್ಮರೆಯಾಗತೊಡಗಿತ್ತು. ಇಂದು ಸಾಂಪ್ರದಾಯಿಕವಾಗಿ ನಡೆಸಲಾದ ನಿಡಗಲ್ ದಸರಾ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶ್ರೀ ವಾಲ್ಮೀಕಿ ಆಶ್ರಮದ ಪೀಠಾಧ್ಯಕ್ಷರು ಸಂಜಯ್ ಕುಮಾರ ಸ್ವಾಮೀಜಿಗಳು ದಸರಾ ನವರಾತ್ರಿ ಉತ್ಸವಕ್ಕೆ ವಿಶೇಷ ಸ್ಥಾನಮಾನವಿದೆ. ಕಾಮ, ಕ್ರೋದ , ಮದ ಮತ್ಸ, ಮೋಹ, ಲೋಭ ಹೀಗೆ ಅರಿಷಡ್ವರ್ಘಳನ್ನು ಒಂದೊಂದಾಗಿ ನಮ್ಮಿಂದ ವರ್ಜಿಸಿ ನಾಡಿನ ಕಲ್ಯಾಣದಲ್ಲಿ ಜಯಿಸುವುದೇ ಈ ವಿಜಯ ದಶಮಿಯ ಸಾಂಕೇತಿಕ ಆಚರಣೆಯಾಗಿದೆ ಎಂದು ತಿಳಿಸಿದರು.
ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಪಾಳೆಗಾರ್ ಲೋಕೇಶ್ ರವರು ಮಾತನಾಡುತ್ತ ಹಿಂದೆ ನಡೆಯುತ್ತಿದ್ದ ನಿಡಗಲ್ ಉತ್ಸವದ ಆಚರಣೆಯನ್ನು ಇಂದು ಚಾಲನೆಗೊಳಿಸಿ ಸರಳವಾಗಿ ಆಚರಿಸಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ನಿಡಗಲ್ ದುರ್ಗದಲ್ಲಿನ ಸರ್ವಧರ್ಮದ ಮೂರ್ತಿಗಳು ವಿಶೇಷ ದಸರಾ ಉತ್ಸವದ ಮೂರ್ತಿಗಳನ್ನಾಗಿಸಿ ಪೂಜಿಸುಲಾಗುತ್ತದೆ ಎಂದು ಬೆಂಬಲಿಸಿದ ಗ್ರಾಮದ ಎಲ್ಲರಿಗೂ ಕೃತಜ್ಞತೆಯನ್ನ ಅರ್ಪಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ರವಿ ವೆಂಕಟಾಪುರ, ಮಾಳಮ್ಮ, ಸುಬ್ಬರಾಯಪ್ಪ, ಶಿವಪ್ಪ, ನರಸಿಂಹಲು ಮುಖಂಡರಾದ ಮಹಾರಾಜು, ಓಂಕಾರ ನಾಯಕ, ಭಾಸ್ಕರ್ ನಾಯಕ, ಪಾಲಯ್ಯ,ರಾಮಪ್ಪ, ಅನಂತ ಸೇರಿದಂತೆ ಹಲವರಿದ್ದರು.
ವರದಿ: ನವೀನ್ ಕಿಲಾರ್ಲಹಳ್ಳಿ*