ಚೆಂಡು ಹೂವಿನ ಬೆಳೆ ಹೆಚ್ಚು ಲಾಭದಾಯಕ . ತುಷಾರ್ ಕಾಂತಿ ಬೆಹೇರಾ.
ಪಾವಗಡ : ಕೃಷಿ ಅಭಿವೃದ್ಧಿಗಾಗಿ ಐ.ಐ.ಎಚ್. ರ್ ಮತ್ತು ಐ.ಸಿ.ಎ .ಆರ್ ಸಂಸ್ಥೆ ಗಳು ಅನೇಕ ರೀತಿಯ ತಳಿಗಳನ್ನು ರೂಪಿಸಿದೆಯೆಂದು ಬೆಂಗಳೂರಿನ ಐ. ಐ. ಹೆಚ್. ರ್ ಮತ್ತು ಐ.ಸಿ.ಎ. ಆರ್ ನ ನಿರ್ದೇಶಕರಾದ ತುಷಾರ್ ಕಾಂತಿ ಬೆಹಾರ್ ತಿಳಿಸಿದರು.
ತಾಲ್ಲೂಕಿನ ನೀಲಮ್ಮನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಚೆಂಡು ಹೂವಿನ ಹೈಬ್ರಿಡ್ ತಳಿಯ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಯಲ್ಲಿ ಬೆಳೆ ವೈವಿಧ್ಯತೆ ಅತಿ ಮುಖ್ಯವೆಂದು, ರಾಸಾಯನಿಕ ಗೊಬ್ಬರಗಳನ್ನು ಸಾಧ್ಯವಾದಷ್ಟು ನಿಯಂತ್ರಣ ಮಾಡಿ, ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರುವಂತಹ ಬೆಳೆಗಳನ್ನು ಬೆಳೆಯಬೇಕೆಂದು ರೈತರಿಗೆ ಸಲಹೆ ನೀಡಿದರು.
ರೈತರು ಟೊಮೇಟೊ, ಮತ್ತು ಇನ್ನಿತರೆ ಬೆಳೆಗಳನ್ನು ಬೆಳೆದಾಗ ತೋಟದ ಸುತ್ತಲೂ ಚೆಂಡು ಹೂ ಸಸಿಗಳನ್ನು ಬೆಳೆಸುವುದರಿಂದ ದುಂಡು ಹುಳುಗಳ ನಿಯಂತ್ರಣ ಮಾಡಬಹುದೆಂದರು.
ರೈತರಿಗೆ ಹೂವಿನ ಬೆಳೆಗಳು ಹೆಚ್ಚು ಲಾಭದಾಯಕವೆಂದು ತಿಳಿಸಿದರು
ಕಾರ್ಯಕ್ರಮ ಉದ್ದೇಶಿಸಿ ಹೂ ಮತ್ತು ಔಷಧಿ ಬೆಳೆಗಳ ವಿಭಾಗದ ಐ.ಸಿ. ಎ.ಆರ್ ಮತ್ತು ಐ.ಐ. ಹೆಚ್ ಆರ್ ಬೆಂಗಳೂರಿನ ಪ್ರಧಾನ ವಿಜ್ಞಾನಿಯಾದ ಡಾಕ್ಟರ್ ತೇಜಸ್ವಿನಿ ಪ್ರಕಾಶ್ ಮಾತನಾಡಿ.ಚೆಂಡು ಹೂವಿನಲ್ಲಿ ಅಭಿ, ಭಾನು ಶುಭಾ ಎಂಬ ಒಂಬತ್ತಕ್ಕೂ ಹೆಚ್ಚು ರೀತಿಯ ತಳಿಗಳಿವೆ ಎಂದರು.
ಐಐಎಆರ್ ಮತ್ತು ಐ ಸಿ ಎ ಆರ್ ಸಂಸ್ಥೆಗಳಿಂದ ತಯಾರಾದ ಉತ್ತಮ ಹೈಬ್ರಿಡ್ ಬೀಜಗಳ ಚೆಂಡು ಹೂಗಳು ಪ್ಲಾಸ್ಟಿಕ್ ಹೂವಿನಂತೆ ಹಲವು ದಿನಗಳ ಕಾಲ ಇರುವಂತಹ ಸಾಮರ್ಥ್ಯ ಹೊಂದಿವೆ ಎಂದು ತಿಳಿಸಿದರು.ರೈತರು ಮಾರುಕಟ್ಟೆಗಳನ್ನು ನಿಯಂತ್ರಿಸುವ ರೀತಿ ಇರಬೇಕು.
ಚೆಂಡು ಹೂವಿನ ಗಿಡ ದಪ್ಪ ಬಂದಾಗ ಹೂಗಳು ಜಾಸ್ತಿ ಬಿಡುತ್ತವೆ ಎಂದು, ಗಿಡಗಳಿಗೆ ಕಾಲಕ್ಕೆ ತಕ್ಕಂತೆ ಗೊಬ್ಬರ ಹಾಕಿದಾಗ ಹೆಚ್ಚು ದಿನಗಳವರೆಗೆ ಹೂ ಬಿಡುತ್ತದೆ ಎಂದು ತಿಳಿಸಿದರು.
ಐ ಐ ಹೆಚ್ ಆರ್ ಮತ್ತು ಐಸಿಎಆರ್ ನ ಪ್ರಧಾನ ವಿಜ್ಞಾನಿಯಾದ ಡಾ. ವಿಕೆ ಜಯರಾಘವೇಂದ್ರ ರಾವ್ ಮಾತನಾಡಿ,ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ದಸರಾ, ದೀಪಾವಳಿ , ಸಂಕ್ರಾಂತಿ ಹಬ್ಬಗಳಿಗೆ ಚೆಂಡು ಹೂ ಬರುವಂತೆ ರೈತರು ಯೋಜನೆ ರೂಪಿಸಿಕೊಳ್ಳಬೇಕು ಎಂದರು.
ಕಡಿಮೆ ಹೂಡಿಕೆಯೊಂದಿಗೆ ಅಲ್ಪಾವಧಿಯಲ್ಲಿ ಹೆಚ್ಚು ಲಾಭ ಗಳಿಸಬಹುದು ಎಂದರು.
ಚೆಂಡುಹೂವುಗಳು ಆಕಾರ ಮತ್ತು ಬಣ್ಣದಲ್ಲಿ ಆಕರ್ಷಕವಾಗಿವೆ.
ಚೆಂಡುಹೂವು ಬಿತ್ತನೆಯನ್ನು ವರ್ಷವಿಡೀ ಮಾಡಬಹುದು. ಮಳೆಗಾಲದಲ್ಲಿ, ಜೂನ್ ಮಧ್ಯದಲ್ಲಿ ಬಿತ್ತನೆ ಮಾಡಿ ಮತ್ತು ಜುಲೈ ಮಧ್ಯದಲ್ಲಿ ನಾಟಿ ಮಾಡಿ. ಚಳಿಗಾಲದಲ್ಲಿ, ಸೆಪ್ಟೆಂಬರ್ ಮಧ್ಯದಲ್ಲಿ ಮತ್ತು ಅಕ್ಟೋಬರ್ ಮಧ್ಯದಲ್ಲಿ ಬಿತ್ತನೆ ಮಾಡಿ, ಸಂಪೂರ್ಣ ನಾಟಿ ಮಾಡಿ ಮುಗಿಸಬಹುದೆಂದರು.
ಟೊಮೊಟೊಗೆ ರೋಗ ಬಂದಾಗ ಬೊದವೆಗಳಲ್ಲಿ ಚೆಂಡು ಹೂವಿನ ಗಿಡಗಳನ್ನು ಹಾಕುವುದರಿಂದ ರೋಗ ನಿಯಂತ್ರಣ ಸಾಧ್ಯವೆಂದರು.
ಕಾರ್ಯಕ್ರಮದಲ್ಲಿ ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಕೆಎನ್ ಜಗದೀಶ್ ಪ್ರಶಾಂತ ಜಿಎಂ, ಡಾಕ್ಟರ್ ನವೀನ್ , pdo ಚಿನ್ನಯ್ಯ ಮತ್ತು ಪ್ರಗತಿಪರ ರೈತ ಲಕ್ಷ್ಮೀನಾರಾಯಣ್ ರೆಡ್ಡಿ, ಕಾಮನದುರ್ಗ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸುನಿತ,
ಗ್ರಾ.ಪಂ ಸದಸ್ಯರಾದ ಸಣ್ಣಪ್ಪ, ಚನ್ನರಾಯಪ್ಪ,ನಾಗರಾಜು, ಈರಣ್ಣ,ವೀರಾಂಜಿ ಹಾಗೂ ರೈತರು ಹಾಜರಿದ್ದರು.
ವರದಿ : ಶ್ರೀನಿವಾಸಲು. A