IMG 20220207 WA0070

ಪಾವಗಡ:ಬಸ್ ಸೌಕರ್ಯ ಕಲ್ಪಿಸುವಂತೆ ತಹಸೀಲ್ದಾರ್ ಗೆ ಮನವಿ…

DISTRICT NEWS ತುಮಕೂರು

ಬಸ್ ಸೌಕರ್ಯ ಕಲ್ಪಿಸುವಂತೆ ತಹಸೀಲ್ದಾರ್ ಗೆ ಮನವಿ...

ಪಾವಗಡ:  ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ಬಸ್ ಸೌಕರ್ಯವಿಲ್ಲದೆ ಜನತೆ  ಪರದಾಡುವ ಪರಿಸ್ಥಿತಿ ಉಂಟಾಗಿದೆ ಅದರಿಂದ ಆಟೊ, ಇತರೆ ವಾಹನಗಳ ಮೊರೆ ಹೋಗಬೇಕಿದೆ.  ಎಂದು ರೈತ ಸಂಘದ ಪದಾಧಿಕಾರಿಗಳು ಸೋಮವಾರ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿದರು.                ಮೂಲಭೂತ ಸೌಕರ್ಯವಾದ ಬಸ್ ವ್ಯವಸ್ಥೆಯು ಇಲ್ಲದಿದ್ದರೆ ಶಾಲೆಗೆ ಹೋಗುವ ಮಕ್ಕಳು, ದೈನಂದಿನ ಕೆಲಸಗಳಿಗಾಗಿ ಪಟ್ಟಣಕ್ಕೆ ಬರುವ ಜನರು ಹೆಚ್ಚಿನ ತೊಂದರೆಯನ್ನು ಅನುಭವಿಸುತ್ತಿದ್ದಾರೆ.             ಬಸ್ ವ್ಯವಸ್ಥೆ ಇಲ್ಲದ ಕಾರಣ ಶಾಲಾ ವಿದ್ಯಾರ್ಥಿಗಳು ಹಾಗೂ ನಾಗರಿಕರು ನಿಗದಿಗಿಂತ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಟೋಗಳಲ್ಲಿ ಪ್ರಯಾಣಮಾಡಿ ಅಪಘಾತವಾಗಿ ಮರಣ ಹೊಂದಿರುವ ಬೇಕಾದಷ್ಟು ಉದಾಹರಣೆಗಳಿವೆ ಎಂದರು.  ಕೆಲ ಗ್ರಾಮಗಳಿಗಂತೂ ಆಟೋಗಳೂ ಹೋಗುವುದಿಲ್ಲ ಅಂತಹ ಜನತೆ ಕಾಲ್ನಡಿಗೆ ಮೂಲಕವೇ ಓಡಾಡಬೇಕಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.ಶಾಲಾ, ಕಾಲೇಜಿನ ಮಕ್ಕಳು ಓಡಾಡುವ ವೇಳೆಗೆ ಬಸ್ ಗಳು ಇಲ್ಲದ ಕಾರಣ ಸರಿಯಾದ ವೇಳೆಗೆ ಶಾಲಾ-ಕಾಲೇಜುಗಳಿಗೆ ಬರಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ ಹಾಗೂ ಇದರಿಂದ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾಗುತ್ತಿದೆ. ಈ ಹಿಂದೆ ಶಾಲಾ ಕಾಲೇಜಿನ ಅವಧಿಗೆ ತಕ್ಕಂತೆ ಬಸ್ ಸೌಕರ್ಯ ಕಲ್ಪಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಗ್ರಾಮಗಳಿಗೆ ಸಕಾಲಕ್ಕೆ ಬಸ್ ಸೌಲಭ್ಯ ಇಲ್ಲ ಎಂದು ದೂರಿದರು.  ನಿಡಗಲ್, ವೈ.ಎನ್.ಹೊಸಕೋಟೆ, ಕಸಬಾ, ನಾಗಲಮಡಿಕೆ ಹೋಬಳಿಗಳ ಗ್ರಾಮಗಳ ಪಟ್ಟಿ ಮಾಡಿಕೊಂಡು ಸಮೀಕ್ಷೆ ನಡೆಸಿ ಸಾರ್ವಜನಿಕರು, ಶಾಲಾ ಕಾಲೇಜಿನ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ಸೌಕರ್ಯ ಕಲ್ಪಿಸಬೇಕು. ಪಾವಗಡ ಘಟವನ್ನು ಮತ್ತೆ ತುಮಕೂರು ವಿಭಾಗಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದರು.  ಕರ್ನಾಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ, ಕಾರ್ಯದರ್ಶಿ ಶಿವರಾಜು, ಪದಾಧಿಕಾರಿಗಾದ ಸದಾಶಿವಪ್ಪ, ಛಲಪತಿ, ಶಿವು, ವೆಂಕಟಸ್ವಾಮಿ, ಚಿಕ್ಕಣ್ಣ, ಓಬಳಪ್ಪ, ನಲಿಗಾನಹಳ್ಳಿ ಮಂಜುನಾಥ್, ಶ್ರೀನಿವಾಸ್, ಕೃಷ್ಣಮೂರ್ತಿ, ಕೆ.ಎಚ್.ಮಂಜುನಾಥ್ ಉಪಸ್ಥಿತರಿದ್ದರು

ವರದಿ: ಶ್ರೀನಿವಾಸುಲು ಎ