IMG 20220207 WA0046

ಪಾವಗಡ:ಸಿಸಿ ರಸ್ತೆ ಗಳ ಕಾಮಗಾರಿಗೆ ಚಾಲನೆ…..!

DISTRICT NEWS ತುಮಕೂರು

ಸಿಸಿ ರಸ್ತೆ ಗಳ ಕಾಮಗಾರಿಗೆ ಚಾಲನೆ…….. ಪಾವಗಡ.. ತಾಲ್ಲೂಕಿನ ಕೊಡಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಸುಂಕರ್ಲ್ಲ ಕುಂಟೆ  ಗ್ರಾಮದಲ್ಲಿ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಬಡಾವಣೆಗಳ ಸಿ ಸಿ ರಸ್ತೆಯ ಕಾಮಗಾರಿಗೆ ಶಾಸಕ ವೆಂಕಟರಮಣಪ್ಪ ಚಾಲನೆ ನೀಡಿದರು.                                                            ನಂತರ ಮಾತನಾಡಿದ ಅವರು ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ, ಕಾಂಟ್ರಾಕ್ಟರ್ ಗಳು ಉತ್ತಮ ಗುಣಮಟ್ಟದ ಸಿಸಿ ರಸ್ತೆಗಳನ್ನು ಹಾಕಬೇಕು, ಅದರಿಂದ ಬಡಾವಣೆಯ ನಿವಾಸಿಗಳು ಅನುಕೂಲ ಪಡೆಯುವಂತಾಗಬೇಕು ಎಂದರು. 

ಕಾರ್ಯಕ್ರಮದಲ್ಲಿ  ಶಾಸಕ ವೆಂಕಟರಮಣಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾ ಕುಮಾರಿ ಶಿವಪ್ಪ . ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ  ಶಿವಾನಂದ ಸತಿಹಾಳ್  ಇಂಜಿನಿಯರ್ ಅನಿಲ್ ಕುಮಾರ್ ,ಕಡಮಲಕುಂಟೆ ಶೇಷಗಿರಿ , ಗ್ರಾಮ ಪಂಚಾಯಿತಿ ಸದಸ್ಯ ರಾದ ಸುನಂದ ನಾರಾಯಣ  ರಾಮಂಜಿ ಹಾಗೂ ತಿಮ್ಮರೆಡ್ಡಿ ಪ್ರಸನ್ನ  ರಮೇಶ ಇತರೆ ಗ್ರಾಮಸ್ಥರು ಭಾಗವಹಿಸಿದ್ದರು .

ವರದಿ: ಶ್ರೀನಿವಾಸುಲು ಎ