ಪಾವಗಡ : T N ಬೆಟ್ಟ ತಪ್ಪಲ್ಲಿ ಸಿಕ್ಕಿದವು 19 ನೇ ಶತಮಾನದ ನಾಣ್ಯಗಳು….!
ಪಾವಗಡ ತಾಲ್ಲೂಕಿನ ಟಿ ಎನ್ ಬೆಟ್ಟದ ತಪ್ಪಲಿನಲ್ಲಿರುವ ಸನಾತನ ಪುಷ್ಕರಣಿಯಲ್ಲಿ ಐತಿಹಾಸಿಕ 18,19 ನೇ ಶತಮಾನದ ನಾಣ್ಯಗಳು ದೊರೆತಿರುವ ಅಪರೂಪದ ಹಾಗೂ ಪ್ರತಿಯೊಬ್ಬರನ್ನ ಚಕಿತಗೊಳಿಸುವ ಘಟನೆ ನಡೆದಿದೆ.
ಹೌದು ಪಾವಗಡ ತಾಲ್ಲೂಕಿನ ಗುಜ್ಜುನಡು ವ್ಯಾಪ್ತಿಯಲ್ಲಿ ಬರುವ ಟಿ ಎನ್ ಬೆಟ್ಟದಲ್ಲಿ ತಿಮ್ಮಪ್ಪನ ದೇಗುಲವಿದೆ. ಇದಕ್ಕೆ ಎರಡನೇ ತಿರುಪತಿ ಎಂಬ ಸ್ಥಳೀಯರ ಹೇಳಿಕೆ ಕೂಡ ಆಗಿದೆ.
ಶ್ರಾವಣ ಮಾಸದಲ್ಲಿ ದೂರದೂರುಗಳಿಂದ ಸಾವಿರಾರು ಭಕ್ತರು ಇಲ್ಲಿ ನೆಲೆನಿಂತು ಭಕ್ತರಿಗೆ ಒಳಿತು ಮಾಡುತ್ತಿರುವ ತಿಮ್ಮಪ್ಪನ ದರ್ಶನ ಪಡೆಯಲು ಬರುತ್ತಾರೆ. ಆ ವೇಳೆ ಇಲ್ಲಿನ ಪುರಾತನ ಕಾಲದ ಪುಷ್ಕರಣಿಯಲ್ಲಿ ಬಂದಂತ ಭಕ್ತರು ಹರಕೆ ಮಾಡಿಕೊಂಡು ನಾಣ್ಯಗಳನ್ನು ಭಕ್ತಿಯಿಂದ ಹಾಕಿದರೆ ತಮ್ಮ ಹರಕೆಗಳು ಈಡೇರಿರುತ್ತವೆ ಅನ್ನುವ ಅಪಾರ ನಂಬಿಕೆ ಇಲ್ಲಿನ ಜನರದ್ದಾಗಿದೆ.
ಆಗಾಗಿ ಇದನ್ನು ತಿಮ್ಮಪ್ಪನ ದೊಣೆಯೆಂತಲೂ ಕರೆಯಲಾಗುತ್ತದೆ. ಇದನ್ನು ಸ್ಥಳೀಯ ಗ್ರಾಮಸ್ಥರು ಸ್ವಚ್ಚಗೊಳಿಸೋ ವೇಳೆ ವಿಜಯನಗರ ಅರಸರ ಮತ್ತು ಮೈಸೂರು ಅರಸರ, ಬ್ರಿಟಿಷರ ಕಾಲದ ನಾಣ್ಯಗಳು ದೊರೆತಿವೆ. ಇವೆಲ್ಲವೂ 18 ಮತ್ತು 19 ನೇ ಶತಮಾನದಲ್ಲಿ ಟಂಕಿಸಲಾದ ನಾಣ್ಯಗಳು ಅನ್ನೊದು ಕಂಡು ಬಂದಿರೋದು ಸ್ಥಳೀಯರಲ್ಲಿ ಕೂತೂಹಲಾ ಹೆಚ್ಚಿಸಿದೆ.
ಇತಿಹಾಸಯುಳ್ಳ ಪುರಾತನ ನಾಣ್ಯಗಳ ಗೋಚರಿಕೆಯಿಂದ ಸುತ್ತಾಮುತ್ತಲ ಜನರು ಆಶ್ಚರ್ಯಚಕಿತರಾಗಿ ನೋಡಲು ಮುಗಿಬಿದ್ದಿದ್ದಾರೆ.
ಪ್ರತಿಯೊಬ್ಬರನ್ನು ಆಶ್ಚರ್ಯಚಕಿತರನ್ನಾಗಿಸುವ ರೀತಿಯಲ್ಲಿ ನಾಣ್ಯಗಳು ದೊರೆತಿರುವ ಈ ಪುಣ್ಯಸ್ಥಳಕ್ಕೆ ಲಿಖಿತ ರೂಪದ ಇತಿಹಾಸದ ಉಲ್ಲೇಖಗಳಿಲ್ಲ ಆದರೂ ದೊರೆತಿರುವ ನಾಣ್ಯಗಳ ಲಾಂಛನಗಳ ವಿನ್ಯಾಸ ಹಾಗೂ ಯಾವ ಶತಮಾನದಲ್ಲಿ ಟಂಕಿಸಲಾಗಿದೆ ಎನ್ನುವ ಇಸವಿಗಳ ಆಧಾರದಲ್ಲಿ. ಇವುಗಳು ಪಕ್ಕಾ 18 ಮತ್ತು 19 ನೇ ಶತಮಾನದ ವಿಜಯನಗರದ ಅರಸರ ಮತ್ತು ಮೈಸೂರು ಅರಸರ ಕಾಲದ್ದು ಅಂತ ತಿಳಿಯಬಹುದು.
ಇದನ್ನ ಮುಂದಿಟ್ಟುಕೊಂಡು ಗಮನಿಸುವುದಾದರೆ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಈ ತಿಮ್ಮಪ್ಪನ ಕ್ಷೇತ್ರ ಇತಿಹಾಸ ಪ್ರಸಿದ್ದವಾಗಿತ್ತು. ಆಗ ನಿಡಗಲ್ ಪ್ರಾಂತ್ಯವನ್ನು ಹೊಟ್ಟಣ್ಣನಾಯಕ ಆಳ್ವಿಕೆ ನಡೆಸುತ್ತಿರುತ್ತಾನೆ. ಆ ವೇಳೆಯಲ್ಲಿ ಪ್ರಾಂತೀಯ ಒಡೆಯ ತಿಮ್ಮನಾಯಕ ವಿಜಯನಗರ ಸಾಮ್ರಾಜ್ಯದ ಅಧೀನ ನಾಯಕನಾಗಿ ಆಳ್ವಿಕೆ ನಡೆಸಿರಬಹುದು ಎನ್ನುವ ಹೋಲಿಕೆ ಆಧಾರದಲ್ಲಿ ಹೇಳಲಾಗುತ್ತದೆ. ತಿಮ್ಮನಾಯಕನ ಆಳ್ವಿಕಾವಧಿಯಲ್ಲಿ ತಿಮ್ಮಪ್ಪನ ಜಾತ್ರೋತ್ಸವ ತುಂಬಾ ಅದ್ದೂರಿಯಾಗಿ ನಡೆದಿತ್ತೇನೊ ಆಗಾಗಿಯೇ ಇಂದಿಗೂ ಜಾತ್ರೆ ಕೈಂಕರ್ಯಗಳು ಶ್ರಧ್ದ ಭಕ್ತಿ ವಿಜೃಂಭಣೆಯಿಂದ ನಡೆಯುತ್ತಿದೆ..ಜೊತೆಗೆ ಇಲ್ಲಿರುವ ಕೆರೆ ಕುಂಟೆ ಕಟ್ಟೆಗಳು, ಹಾಗೆ ಭಕ್ತರಿಗೆ ಕುಡಿಯಲು ಈ ಪುಷ್ಕರಣಿಯನ್ನ ತಿಮ್ಮನಾಯಕನ ಕಾಲದಲ್ಲಿಯೇ ನಿರ್ಮಾಣವಾಗಿರಬಹುದು ಎಂದು ಸಾಹಿತಿ ಸಣ್ಣ ನಾಗಪ್ಪ ತಿಳಿಸಿದರು.
ಏನೇ ಇರ್ಲಿ ಇತಿಹಾಸದ ಸಾರವನ್ನ ತನ್ನ ಒಡಲ ಲ್ಲಿಟ್ಟುಕೊಂಡಿರುವ ಈ ತಿಮ್ಮಪ್ಪನ ಬೆಟ್ಟವನ್ನು ಪುರಾತತ್ವ ಇಲಾಖೆ ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ರಕ್ಷಿಸಿ ಇತಿಹಾಸವನ್ನ ಸಂರಕ್ಷಿಸಬೇಕಿದೆ.
ವರದಿ: ನವೀನ್ ಕಿಲಾರ್ಲಹಳ್ಳಿ