ಆನೇಕಲ್: ಕನ್ನಡ ಸಾಹಿತ್ಯ ಪರಿಷತ್ತು ಆನೆಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಕಾವೇರಿ ಕಾಲೇಜಿ ನಲ್ಲಿ ಶಾಸಕ ಬಿ.ಶಿವಣ್ಣ ಗಿಡ ನೆಡುವುದರ ಮೂಲಕ ಉದ್ಘಾಟಿಸಿದರು ಕ.ಸಾ.ಪ ಅಧ್ಯಕ್ಷರಾದ ಆದೂರು ಪ್ರಕಾಶ್, ಕೆ ಚಂದ್ರಶೇಖರ್ ರಾಜೇಂದ್ರಪ್ರಸಾದ್ ಚೆಲುವರಾಜ್ ಡಾ ರವಿ ಕೃಷ್ಣಮೂರ್ತಿ ಇದ್ದರು
ಶಾಸಕ ಬಿ. ಶಿವಣ್ಣ ಮಾತನಾಡಿ ಮರ ಗಿಡಗಳ ಸಮಾಧಿಯ ಮೇಲೆ ನಗರಗಳು ನಿರ್ಮಾಣವಾಗುತ್ತಿವೆ ಎಂದು ಆತಂಕವನ್ನು ವ್ಯಕ್ತಪಡಿಸಿದರು. ಪ್ರತಿಯೊಬ್ಬ ಮನುಷ್ಯನು ಕಡ್ಡಾಯವಾಗಿ ಮನೆಗೊಂದು ಗಿಡ ನೆಟ್ಟು ಪರಿಸರವನ್ನು ಬೆಳೆಸಿದರೆ ಮಾತ್ರ ಮನುಕುಲ ಉಳಿಯಲು ಸಾಧ್ಯವಾಗುತ್ತದೆ ಇಲ್ಲವಾದರೆ ಮುಂದಿನ ಪೀಳಿಗೆ ಉತ್ತಮ ಗಾಳಿಯಿಲ್ಲದ ದಿನಗಳು ಬರುತ್ತವೆ ಅದಕ್ಕಾಗಿ ನಾವು ಪ್ರಕೃತಿಯ ಮೇಲೆ ದೌರ್ಜನ್ಯವನ್ನು ನಿಲ್ಲಿಸಬೇಕು ಮರಗಿಡಗಳು ನಮ್ಮ ಬದುಕಿನ ಒಂದು ಭಾಗವಾಗಿವೆ ಅವುಗಳಿಲ್ಲದೆ ಮನುಷ್ಯನ ಜೀವನ ಒಂದು ಕ್ಷಣವೂ ನಡೆಸಲು ಸಾಧ್ಯವಾಗುವುದಿಲ್ಲ ಪರಿಸರದ ಸಾಧಕರನ್ನು ಕಾಲಕಾಲಕ್ಕೆ ಉತ್ತೇಜಿಸುವ ಕೆಲಸಗಳು ಸರ್ಕಾರ ಮಾಡಬೇಕು ಆ ರೀತಿ ಮಾಡಿದಾಗಲೇ ಪರಿಸರ ರಕ್ಷಣೆ ಮಾಡುವ ಕೆಲಸ ಸಮಾಜದಲ್ಲಿ ಹೆಚ್ಚಾಗುತ್ತದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕರಾದ ರಾಜೇಂದ್ರ ಪ್ರಸಾದ್ ಮಾತನಾಡಿ ಪ್ರಕೃತಿಯನ್ನು ನಾವು ಎಷ್ಟು ಹಾಳು ಮಾಡಿದ್ದೇವೆ ಎಂದರೆ ಹಾವು ಕಚ್ಚಿದರೆ ಮನುಷ್ಯ ಸಾಯುವುದಿಲ್ಲ ಆದರೆ ಮನುಷ್ಯ ಕಚ್ಚಿದರೆ ಹಾವು ಸಾಯುತ್ತದೆ ಅಷ್ಟು ವಿಷವನ್ನು ನಾವು ಪರಿಸರಕ್ಕೆ ಸೇರಿಸಿದ್ದೇವೆ ದಿನೇದಿನೇ ಹೆಚ್ಚು ಉತ್ಪಾದನೆಯಾಗುತ್ತಿರುವ ವಾಹನಗಳು ಈ ತ್ಯಾಜ್ಯ ಮಣ್ಣಿನ ಸತ್ವವನ್ನು ನಾಶಮಾಡಿ ಮನುಷ್ಯನ ಅವನತಿಯನ್ನು ಬಯಸುವಂತಾಗಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಆದೂರು ಪ್ರಕಾಶ್ ಮಾತನಾಡಿ ಪರಿಷತ್ತು ಬರೀ ಕನ್ನಡಕ್ಕೆ ಸೀಮಿತವಾಗಿರದೆ ಎಲ್ಲಾ ರಂಗದಲ್ಲೂ ಕೆಲಸ ಮಾಡಿ ಸಮಾಜವನ್ನು ಕಟ್ಟಬೇಕಾಗಿದೆ ಪರಿಸರ ಹಸಿರಾಗಿದ್ದರೆ ನಾಡೆಲ್ಲ ಸಮೃದ್ಧವಾಗಿರುತ್ತದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರಿಸರದ ಅರಿವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ತಮ್ಮ ತಮ್ಮ ಕುಟುಂಬಗಳನ್ನು ಜೋಪಾನ ಮಾಡಿಕೊಳ್ಳುವಂತೆ ಪರಿಸರವನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಿಸಂ ಪ್ರಜ್ಞಾ ಶಾಲೆಯ ಸಂಸ್ಥಾಪಕರಾದ ರಾಜೇಂದ್ರ ಪ್ರಸಾದ್, ಪತ್ರಿಕೆಯ ವರದಿಗಾರರಾದ ಮುನಿರಾಜು, ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಮಂಜುನಾಥ್ ಜ್ಞಾನ ಜ್ಯೋತಿಯ ನಿರ್ದೇಶಕರಾದ ಫಾದರ್ ಮೆಲ್ವಿನ್ ಕೆವಿನ್ ಸಿಕ್ವೇರಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಡಾ.ರವಿ ಕೃಷ್ಣಮೂರ್ತಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ
ಅಧ್ಯಕ್ಷರಾದ ಕೆ ಚಂದ್ರಶೇಖರ್ ಚೆಲುವರಾಜು ವೀರಭದ್ರಪ್ಪ ಪರಿಷತ್ತಿನ ಪದಾಧಿಕಾರಿಗಳಾದ ಎಂ ಗೋವಿಂದರಾಜು ಮಹೇಶ್ ಊಗಿನಹಳ್ಳಿ ಕಲಾವಿದರಾದ ವೀರಭದ್ರಪ್ಪ ಚುಟುಕು ಶಂಕರ್ ಟಿ ಎಸ್ ಮುನಿರಾಜು ಮಂಜುಳಾ ಸರ್ಜಾಪುರ ಮಲ್ಲಿಕಾರ್ಜುನ ಆರಾಧ್ಯ ತಬಲಾ ಮಂಜು ಡಾ ನಾಗರಾಜ್ ಮಿಲ್ಟ್ರಿ ಕುಮಾರ್ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ಹರೀಶ್