IMG 20220607 WA0002

ಪಾವಗಡ:ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 138ನೇ ಜಯಂತಿ ಆಚರಣೆ…!

DISTRICT NEWS ತುಮಕೂರು

ಪಾವಗಡ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗುರುಭವನದಲ್ಲಿ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 138ನೇ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಟ್ಟಾ ನರಸಿಂಹಮೂರ್ತಿ ರವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಮಾಜಿಕ ಕಾನೂನುಗಳ ಹರಿಕಾರ ಎಂದು ತಿಳಿಸಿದರು. ಇವರ ಆಡಳಿತದ ಅವಧಿಯನ್ನು ಮೈಸೂರು ಸಂಸ್ಥಾನದ ಸುವರ್ಣಯುಗ ಎಂದು ಕರೆಯಬಹುದು. ಭಾಷೆ ಕಲೆ ಸಾಹಿತ್ಯ ಸಂಸ್ಕೃತಿ ಮೊದಲಾದವುಗಳ ಅಭಿವೃದ್ಧಿಗಾಗಿ ಪ್ರಾಮುಖ್ಯತೆಯನ್ನು ನೀಡುವ ಉದ್ದೇಶದಿಂದ 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು 1916 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದರು ಸಾಮಾಜಿಕ ಸುಧಾರಣೆಗಾಗಿ ದೇವದಾಸಿ ಪದ್ಧತಿ ನಿಷೇಧ ವಿಧವೆಯರಿಗೆ ಮರುವಿವಾಹ. ಮಹಿಳೆಯರಿಗೆ ಶಿಕ್ಷಣ ವಯಸ್ಕರ ಶಿಕ್ಷಣ ಶಾಲೆಗಳನ್ನು ತೆರೆದರು ರೈತರ ಆರ್ಥಿಕ ಸುಧಾರಣೆಗಾಗಿ 1905 ರಲ್ಲಿ ಸಹಕಾರಿ ಸೊಸೈಟಿಗಳನ್ನು ಪ್ರಾರಂಭಿಸಿದರು ಅಪೆಕ್ಸ್ ಬ್ಯಾಂಕ್ ಅಭಿವೃದ್ಧಿ ಬ್ಯಾಂಕ್ ಮೈಸೂರು ಬ್ಯಾಂಕ್ ಗಳನ್ನು.ಪ್ರಾರಂಭಿಸಿದರು. ಶಿವನಸಮುದ್ರದ ಬಳಿ ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದರು. ನೀರಾವರಿ ಕ್ಷೇತ್ರದ ಸುಧಾರಣೆಗಾಗಿ ವಾಣಿವಿಲಾಸ ಸಾಗರ ಶ್ರೀ ಕೃಷ್ಣ ರಾಜ ಸಾಗರ ಅಣೆಕಟ್ಟು ಗಳನ್ನು ನಿರ್ಮಿಸಿದರು. ಸಾಮಾಜಿಕ ಪರಿವರ್ತನೆಯ ಹರಿಕಾರ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ರವರು ಎಂದು ತಿಳಿಸಿದರು. ಸಾಹಿತಿಗಳಾದ ಬ್ಯಾಡನೂರು ಚನ್ನಬಸವಣ್ಣ ನಿಕಟಪೂರ್ವಾಧ್ಯಕ್ಷ ಆರ್ ಟಿ ಖಾನ್. ಕಾರ್ಯದರ್ಶಿ ಕೆ ರಂಗಪ್ಪ ಸದಸ್ಯರಾದ ಮುಖ್ಯಶಿಕ್ಷಕ ಶಿವಣ್ಣ. ಮುಖ್ಯಶಿಕ್ಷಕ ರಾಜ ಬಾಬು. ನಿರ್ದೇಶಕರಾದ ಈ ಜಯರಾಮಪ್ಪ. ಎಸ್ ಎಚ್ ನರಸಿಂಹಮೂರ್ತಿ ಉಪಸ್ಥಿತರಿದ್ದರು.

ವರದಿ: ಶ್ರೀನಿವಾಸಲು ಎ