ಆನೇಕಲ್ ಪಟ್ಟಣದ ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಪ್ರಾಥಮಿಕ ಪಾಠ ಶಾಲೆಯಲ್ಲಿ ಹೋರಾಟಗಾರದ ಮಮತ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಕ.ಸಾ.ಪ ಅಧ್ಯಕ್ಷರಾದ ಆದೂರು ಪ್ರಕಾಶ್, ವಾಟಾಳ್ ಬಳಗದ ಸನಾವುಲ್ಲಾ ಟಿ ನಾಗರಾಜು ಅಪ್ಸರ ಆಲಿ ಖಾನ್ ಚುಟುಕು ಶಂಕರ್ ವಿಜಯ್ ಕುಮಾರಿ ಮುನೀರ್ ನಾಗಶ್ರೀ ಮುಖ್ಯೋಪಾಧ್ಯಾಯರಾದ ಉಷಾ ಇದ್ದರು.
ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹೋರಾಟಗಾರ್ತಿ ಮಮತಾ ಉತ್ಕೃಷ್ಟವಾದ ಆಹಾರ ನಮ್ಮ ಹಕ್ಕು ಎಲ್ಲರೂ ಸೇರಿ ಆಹಾರವನ್ನು ಸಂರಕ್ಷಣೆ ಮಾಡಬೇಕಾಗಿದೆ ಯುವ ಜನಾಂಗ ಆಹಾರದ ಸೂಕ್ಷ್ಮತೆಯನ್ನು ಅರಿತು ಕೊಳ್ಳದೆ ಬದುಕುತ್ತಿರುವುದು ಬಹಳ ನೋವಿನ ಸಂಗತಿ ಸರಕಾರಗಳು ಆಯಾ ಭೌಗೋಳಿಕವಾಗಿ ಇರುವ ಆಹಾರವನ್ನು ಗೌರವಿಸಿ ಎಲ್ಲಾ ಮಕ್ಕಳಿಗೂ ಪೌಷ್ಟಿಕ ಆಹಾರವನ್ನು ಒದಗಿಸಬೇಕಾಗಿದೆ ಎಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಉಷಾರವರು ಮಾತನಾಡಿ ಶಾಲೆಯಲ್ಲಿ ಆಹಾರ ಮಂತ್ರಿ ಆರೋಗ್ಯ ಮಂತ್ರಿ ಎಂದು ನೇಮಿಸಿ ಆಹಾರದ ಮಹತ್ವನ್ನು ತಿಳಿಸುತ್ತಿದ್ದೇವೆ ಅಪೌಷ್ಟಿಕ ವಾಗಿ ಬಳಲುತ್ತಿರುವ ಮಕ್ಕಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿ ಸಂಬಂಧಿಸಿದ ಪೋಷಕರಿಗೂ ಕೂಡ ಮಾಹಿತಿ ಒದಗಿಸುತ್ತಿದೆ ಎಂದು ಹೇಳಿದರು.
ಯುವ ಮುಖಂಡರಾದ ಇಲಿಯಾಸ್ ಮಾತನಾಡಿ ಊಟ ಮಾಡುವ ಪದ್ಧತಿಯನ್ನು ಮಕ್ಕಳಿಗೆ ಕ್ರಮವಾಗಿ ಹೇಳಿಕೊಡಬೇಕು ನಾವು ತಿನ್ನುವ ಆಹಾರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಆದ್ದರಿಂದ ಊಟವನ್ನು ಬಹಳ ಶಿಸ್ತಿನಿಂದ ಮಾಡಬೇಕಾಗಿದೆ ಎಂದು ತಿಳಿಸಿದರು..
ನೆರಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಿಜಯಕುಮಾರಿ ಮಾತನಾಡಿ ನಮ್ಮ ಆಹಾರವನ್ನು ನಿರ್ಧರಿಸುವ ಹಕ್ಕು ಯಾವ ಸರ್ಕಾರಗಳಿಗೂ ಇರುವುದಿಲ್ಲ ಮಕ್ಕಳು ತಿನ್ನುವ ಊಟದ ಮೇಲೆ ಯಾರ ಸರ್ವಾಧಿಕಾರವು ಇರಕೂಡದು ಎಂದು ಎಚ್ಚರಿಕೆ ನೀಡಿದರು..
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ಮಾತನಾಡಿ ಪಿಜ್ಜಾ ಬರ್ಗರ್ ರಾಷ್ಟ್ರೀಯ ಆಹಾರವಾಗಿ ಮಾರ್ಪಾಡಾಗಿರುವುದು ದುರಂತದ ವಿಚಾರ ಇಂದಿನ ಯುವ ಪೀಳಿಗೆ ಇಂತಹ ಮಾರಕ ಆಹಾರಗಳನ್ನು ಸೇವಿಸಿ ತಮ್ಮ ಬುದ್ಧಿಶಕ್ತಿಯನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ ಎಂದು ನೋವನ್ನು ವ್ಯಕ್ತಪಡಿಸಿದರು.
ಭೂಮಿಯ ಮೇಲೆ ಬೆಳೆಯುವ ಎಲ್ಲ ತರಕಾರಿ, ಧಾನ್ಯಗಳು ರಾಸಾಯನಿಕದಿಂದ ಕೂಡಿದ್ದು ಪೌಷ್ಟಿಕತೆಯನ್ನು ಹಾಳುಮಾಡುತ್ತಿದೆ ಪೋಷಕರು ತಮ್ಮ ಬಹುತೇಕ ದುಡಿಮೆಯನ್ನು ಆಸ್ಪತ್ರೆಗಳಿಗೆ ವಿನಿಯೋಗ ಮಾಡುತ್ತಿದ್ದಾರೆ ದೇಶದಲ್ಲಿ ಮೆಡಿಕಲ್ ಮಾಫಿಯಾ ಯುವಜನರ ಮನಸ್ಸುಗಳನ್ನು ಆಕ್ರಮಿಸಿಕೊಂಡು ಶ್ರೀಮಂತರಾಗುತಿರುವುದು ನಾಚಿಕೆಗೇಡಿನ ಸಂಗತಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಚುಟುಕು ಶಂಕರ್ ರವರು ತಮ್ಮ ಚುಟುಕು ಕವಿತೆ ಗಳಿಂದ ಎಲ್ಲ ಮಕ್ಕಳನ್ನು ರಂಜಿಸಿದರು ಉದಯೋನ್ಮುಖ ಗಾಯಕ ರಾಮಚಂದ್ರ ಹಾಗೂ ಮೇಘನಾ ಮನೋಹರ್ ತಮ್ಮ ಗಾಯನವನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಕಾಸಪ್ಪ ಪದಾಧಿಕಾರಿಗಳಾದ ಚುಟುಕು ಶಂಕರ್ ಅಪ್ಸರ ಆಲಿ ಖಾನ್ ಟಿ ನಾಗರಾಜು ಸನಾವುಲ್ಲಾ ಇಲಿಯಾಸ್ ವಿಜಯಕುಮಾರಿ ಶಿಕ್ಷಕರಾದ ರವಿಕುಮಾರ್ ಸುಚಿತ್ರ ಸೌಮ್ಯ ಉಷಾ ಮಂಜುಳಮ್ಮ ಪುಷ್ಪವತಿ ಸಾನಿಯಾ ನಾಗಶ್ರೀ ಮದನ್ ಮನು ವರ್ಷ ಮಾದೇವಿ ಮೇಘನಾ ಮನೋಹರ್ ಮತ್ತಿತರರು ಇದ್ದರು
ವರದಿ: ಹರೀಶ್