ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಲು ಪ್ರಮುಖ ಕಾರಣ ಪ್ರಧಾನಿ ನರೇಂದ್ರ ಮೋದಿ.
ಪಾವಗಡ : ಭಾರತಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬರಲು ಮುಖ್ಯ ಕಾರಣ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಪ್ರಬಲ ಆಕಾಂಕ್ಷಿ ಹಾಗೂ ಮಾಜಿ ಸಂಸದ ಜನಾರ್ಧನಸ್ವಾಮಿ ತಿಳಿಸಿದರು.
ಪಟ್ಟಣದ ನಿರೀಕ್ಷಣ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭಾರತೀಯರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ತಂದುಕೊಟ್ಟ ಪ್ರಮುಖ ವ್ಯಕ್ತಿ ನರೇಂದ್ರ ಮೋದಿ ಎಂದು.
ದೇಶದ ಆರ್ಥಿಕ ಸುಭದ್ರತೆ ಮತ್ತು ದೇಶದ ಭದ್ರತೆಗಾಗಿ ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಮಂತ್ರಿಯನ್ನಾಗಿ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.
ಪ್ರಧಾನಿ ಮೋದಿ ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಲು ಅವರ ಕಾರ್ಯವೈಖರಿ ಪ್ರಮುಖವಾದದು ಎಂದರು.
ಭಾರತ ಇಂದು ಬಲಿಷ್ಠ ರಾಷ್ಟ್ರವಾಗಿದ್ದು ಯಾವುದೇ ದೇಶಕ್ಕೆ ಸರಿಸಮಾನವಾಗಿ ನಿಲ್ಲುವಂತಹ ಸಾಮರ್ಥ್ಯ ಭಾರತ ಪಡೆದಿದೆಎಂದರು.
ಕೇಂದ್ರ ಸರ್ಕಾರ ಜನಪರ ಯೋಜನೆಗಳ ಮೂಲಕ ದೇಶದ ಗ್ರಾಮೀಣ ಜನರ ಮನ್ನಣೆ ಗಳಿಸಿಕೊಂಡಿದೆ. ಕಳೆದ 10 ವರ್ಷದಲ್ಲಿ ದೇಶದ ಘನತೆ, ಗೌರವ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮವಾಗಿದ್ದು, ಭಾರತ ದೇಶವು ಅನ್ಯ ರಾಷ್ಟ್ರಗಳ ಜೊತೆಗೆ ಪರಸ್ಪರ ಉತ್ತಮ ಬಾಂಧವ್ಯ ಹೊಂದಿ ಅತ್ಯುತ್ತಮ ಆಡಳಿತಾತ್ಮಕ ವ್ಯವಸ್ಥೆಯನ್ನು ರೂಪಿಸಿಕೊಂಡು ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿಯ ಸಾಲಿನಲ್ಲಿ ಅತ್ಯುತ್ತಮ ರಾಷ್ಟ್ರವಾಗಿ ಪರಿಣಮಿಸಿದೆ ಎಂದರೆ ಒಬ್ಬ ನರೇಂದ್ರ ಮೋದಿ ಯವರ ಪರಿಶ್ರಮ ಎಂದರು.
ಭದ್ರಾ ಮೇಲ್ದಂಡೆ ಯೋಜನೆ
ತಾನು 2009ರಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸದಸ್ಯನಾಗಿ ಮಾಡಿದಂತಹ ಕಾರ್ಯಗಳು ಇಂದಿಗೂ ಅಜರಾಮರವಾಗಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆ ಕೈಗೊಂಡಾಗ ಅದರಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಹೊಳಲ್ಕೆರೆ, ಪಾವಗಡ ತಾಲ್ಲೂಕುಗಳು ಬಿಟ್ಟು ಹೋಗಿದ್ದು.
ಕೊನೆಗೆ ಭಗೀರಥ ಪ್ರಯತ್ನ ಮಾಡಿ ನೀರು ಹಂಚಿಕೆ ಮಾಡಿಸಿ, ಆಗಿನ ಸಿಎಂ ಆದಂತಹ ಯಡಿಯೂರಪ್ಪನವರ ಆಶೀರ್ವಾದದಿಂದಾಗಿ ಪುನಹ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ. ಮೊಳಕಾಲ್ಮೂರು, ಹೊಳಲ್ಕೆರೆ, ಪಾವಗಡ ವನ್ನು ಸೇರಿಸಲಾಯಿತು ಎಂದರು.
ಭದ್ರಾ ಮೇಲ್ದಂಡೆ ಯೋಜನೆಯ ನೀರು ತಾಲೂಕಿಗೆ ಬರುವುದರಿಂದ ತಾಲೂಕಿನಲ್ಲಿ ಕೃಷಿ ಅಭಿವೃದ್ಧಿಯಾಗುತ್ತದೆ ಕೃಷಿ ಉತ್ಪನ್ನಗಳು ಹೆಚ್ಚಾಗಿ ಸ್ಥಳೀಯ ಮಾರುಕಟ್ಟೆ ಸೃಷ್ಟಿಯಾಗಿ ರೈತರಿಗೆ ಹೆಚ್ಚಿನ ಲಾಭವಾಗುತ್ತದೆ ಎಂದರು.
ತನ್ನ ಅವಧಿಯಲ್ಲಿ ಐಐಎಸ್‌ಸಿ, ಡಿಆರ್‌ಡಿಓ, ಇಸ್ರೋ ನಂತಹ ಪ್ರಮುಖ ಸಂಸ್ಥೆಗಳನ್ನು ಚಿತ್ರದುರ್ಗ ಜಿಲ್ಲೆಗೆ ತರಲಾಯಿತು ಎಂದು ತಿಳಿಸಿದರು.
ಪಕ್ಷ ಈ ಭಾರಿ ನನಗೆ ಅವಕಾಶ ಕೊಟ್ಟರೆ ಸ್ವರ್ಧೆಗೆ ನಾನು ಸಿದ್ದ ಎಂದರು.
ಈ ವೇಳೆಯಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಪುರುಷೋತ್ತಮರೆಡ್ಡಿ, ಸೂರ್ಯನಾರಾಯಣ, ಗೋವಿಂದಪ್ಪ, ಚಂದ್ರ ನಾಯಕ್, ಶ್ರೀರಾಮಗುಪ್ತ, ನಾಗರಾಜ್, ಬಂಡೆಪ್ಪ, ತಿಪ್ಪೇಸ್ವಾಮಿ, ಬ್ಯಾಡನೂರು ಶಿವು,ಮಹಿಳಾ ಮುಖಂಡರಾದ ಶಾರದ ಕೃಷ್ಣ ನಾಯಕ್, ಸರೋಜಮ್ಮ, ಶಾಂತಮ್ಮ ಹಾಜರಿದ್ದರು.
ವರದಿ. ಶ್ರೀನಿವಾಸಲು. A