ಬೆಸ್ಕಾಂ ಇಲಾಖೆಯವರು ರೈತರಿಂದ ಸುಲಿಗೆ ಮಾಡುವುದನ್ನು ಮೊದಲು ನಿಲ್ಲಿಸಬೇಕು–ಶಾಸಕ ಹೆಚ್ ವಿ ವೆಂಕಟೇಶ್
ಪಾವಗಡ : ಇತ್ತೀಚೆಗೆ ಬೆಸ್ಕಾಂ ಇಂಜಿನಿಯರ್ ಗಳು ರೈತರಿಗೆ ವಿದ್ಯುತ್ ಸಂಪರ್ಕ ಕೊಡಲು ಸುಲಿಗೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು.
ಲಕ್ಷಾಂತರೂ ಸಾಲ ಮಾಡಿ ರೈತರು ಬೆಳೆಗಳನ್ನು ಇಟ್ಟಿರುತ್ತಾರೆ. ಅಂತಹ ರೈತರ ಕೆಲಸಗಳನ್ನು ಮಾಡಿಕೊಳ್ಳಲು ಬೆಸ್ಕಾಂ ಇಂಜಿನಿಯರ್ ಗಳು ಹಣ ಪಡೆಯುತ್ತಿರುವುದು ಸರಿಯಲ್ಲವೆಂದರು.ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಚ್ .ವಿ ವೆಂಕಟೇಶ್ ಮಾತನಾಡಿದರು.
ಬೆಸ್ಕಾಂ ಇಂಜಿನಿಯರ್ ಗಳು ಇದೇ ರೀತಿ ಕೆಲಸ ಮುಂದುವರೆದರೆ ರೈತರಿಗೆ ಹೇಳಿ ಹೊಲದಲ್ಲಿಯೇ ಕಟ್ಟಿ ಹಾಕಿಸಲಾಗುತ್ತದೆ ಎಂದು ಎಚ್ಚರಿಸಿದರು.ಕೊಳಗೇರಿ ನಿಗಮ )ಸ್ಲಂ ಬೋರ್ಡ್ ನಿಂದ ಕಳೆದ ಸಾಲಿನಲ್ಲಿ ಮಂಜುರಾಗಿರುವ ಮನೆಗಳ ನಿರ್ಮಾಣ ಕಾರ್ಯ ವಿಳಂಬವಾಗಿದೆ ಎಂದು ಗುತ್ತಿಗೆದಾರರನ್ನು ತರಾಟಿಗೆ ತೆಗೆದುಕೊಂಡರು.
ಗುತ್ತಿಗೆದಾರರು ಮನೆಗಳ ನಿರ್ಮಾಣ ಕಾರ್ಯ ನಡೆಯುವಾಗ ಗುಣಮಟ್ಟವನ್ನು ಪರೀಕ್ಷಿಸಿದ್ದಿರಾ ಎಂದು ಶಾಸಕರು ಪ್ರಶ್ನಿಸಿದರು.ಎಷ್ಟು ಮನೆಗಳಿಗೆ ಮೇಲ್ಚಾವಣಿ ಕಾರ್ಯ ಮುಗಿದಿದೆ ಇನ್ನು ಉಳಿದ ಮನೆಗಳು ಯಾವಾಗ ಸಂಪೂರ್ಣಗೊಳ್ಳುತ್ತವೆ ಎಂದು ವಿಚಾರಿಸಿದರು.
ಕೊರಟಗೆರೆ, ಮಧುಗಿರಿ ಈ ಎರಡು ತಾಲ್ಲೂಕುಗಳಲ್ಲಿ ರಿಂಗ್ ರಸ್ತೆ ನಿರ್ಮಾಣ ಮಾಡಿ ಪಾವಗಡದಲ್ಲಿ ರಿಂಗ್ ರಸ್ತೆ ನಿರ್ಮಾಣ ಮಾಡದೇ ಇರುವುದು ಎಷ್ಟು ಸರಿ ಎಂದು ಕೆಶಿಪ್ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಎಚ್ ವಿ ವೆಂಕಟೇಶ್ ತರಾಟೆಗೆ ತೆಗೆದುಕೊಂಡರು.ಪಾವಗಡ ಟೌನಿನಲ್ಲಿ ಸಂಚಾರಿ ವ್ಯವಸ್ಥೆಯ ಸಮಸ್ಯೆ ತುಂಬಾ ಇದೆ ಎಂದರು.
ಆದಷ್ಟು ಬೇಗ ರಿಂಗ್ ರೋಡ್ ರಸ್ತೆ ನಿರ್ಮಾಣ ಮಾಡಲು ಡಿ.ಪಿ.ಆರ್. ರೆಡಿ ಮಾಡಿಕೊಡುವಂತೆ ಕೆಶಿಪ್ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಂತರ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸುಜಾತ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ. ಶಿವರಾಜಯ್ಯ, ಸಿ ಐ. ಅಜಯ್ ಸಾರಥಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥ್ ನಾರಾಯಣ, ತಾಲೂಕು ಪಂಚಾಯಿತಿಯ ಯೋಜನಾ ಅಧಿಕಾರಿ ಮಲ್ಲಿಕಾರ್ಜುನ.ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಜರಿದ್ದರು.