ವೈದ್ಯರುಗಳು ಇರುವುದು ಜನರ ಸೇವೆ ಮಾಡಲು ಹೊರೆತು ರಾಜಕೀಯ ಮಾಡುವುದಕ್ಕಲ್ಲ–ಶಾಸಕ ಹೆಚ್. ವಿ ವೆಂಕಟೇಶ್.
ಪಾವಗಡ : ಇತ್ತೀಚಿಗೆ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ನಡುವಿನ ಮಾತಿನ ಚಕಮಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು.
ಪಾವಗಡ ಸರ್ಕಾರಿ ಆಸ್ಪತ್ರೆಯ ವೈದ್ಯರುಗಳ ನಡುವಿನ ಸಮಸ್ಯೆಯನ್ನು ಕೇಳಿ ತಿಳಿದು ಸಮಸ್ಯೆ ಬಗೆಹರಿಸಲು ಗುರುವಾರ ಶಾಸಕ ಹೆಚ್ ವಿ ವೆಂಕಟೇಶ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿ ವೈದ್ಯರುಗಳ ಸಭೆ ನಡೆಸಿದರು.
ಸಮಾಜದಲ್ಲಿ ವೈದ್ಯ ವೃತ್ತಿಗೆ ಹೆಚ್ಚಿನ ಬೆಲೆ ಇದೆ. ವೈದ್ಯರು ಆಸ್ಪತ್ರೆಗೆ ಬರುವುದು ರಾಜಕೀಯ ಮಾಡುವುದಕ್ಕಲ್ಲ ಜನರ ಸೇವೆ ಮಾಡುವುದಕ್ಕೆ ಎಂದರು.
ವೈದ್ಯರುಗಳಾದ ತಾವೇ ತಮ್ಮ ತಮ್ಮಲ್ಲಿಯೇ ದ್ವೇಷ, ಅಸೂಯೆ, ಹೊಂದಿದ್ದರೆ ಹೇಗೆ ತಾವು ರೋಗಿಗಳಿಗೆ ಉತ್ತಮ ಸೇವೆ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ವೈದ್ಯರುಗಳ ನಡುವಿನ ಗುಂಪು ಘರ್ಷಣೆ , ದ್ವೇಷ, ವೈಷಮ್ಯದಿಂದ ಸರ್ಕಾರಿ ಆಸ್ಪತ್ರೆಗೆ ಕೆಟ್ಟ ಹೆಸರು ಬರುತ್ತದೆ ಎಂದರು.
ಎಲ್ಲರೂ ತಮ್ಮ ತಮ್ಮ ಕೆಲಸವನ್ನು ಮಾಡಿಕೊಂಡು ಹೋದರೆ ಎಲ್ಲರಿಗೂ ಒಳ್ಳೆಯದು, ವೈದ್ಯರ ನಡುವೆ ಸಾಮರಸ್ಯ ಅತಿ ಮುಖ್ಯವಾದುದೆಂದರು.
ತಮಗೇನಾದರೂ ಸಮಸ್ಯೆಗಳಿದ್ದರೆ ಟಿ.ಹೆಚ್.ಒ ರವರಿಗೆ ತಿಳಿಸಬೇಕೆಂದರು. ಅಲ್ಲಿಯೂ ಸಮಸ್ಯೆ ಬಗೆಹರಿಯದಿದ್ದರೆ ಡಿ.ಹೆಚ್ಒ ಗಮನಕ್ಕೆ ತರಬೇಕು ಎಂದರು.
ಸರ್ಕಾರಿ ಆಸ್ಪತ್ರೆಯ ಬಗ್ಗೆ ಜನರು ನಂಬಿಕೆ ಕಳೆದುಕೊಳ್ಳುವ ಕೆಲಸ ಎಂದಿಗೂ ಮಾಡಬೇಡಿ ಎಂದು ಎಚ್ಚರಿಸಿದರು.
ಆಸ್ಪತ್ರೆಯ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಿ ರೋಗಿಗಳಿಗೆ ಉತ್ತಮ ಚಿಕೆತ್ಸೆ ನೀಡಬೇಕು, ರೋಗಿಗಳನ್ನು ಪ್ರೀತಿಯಿಂದ ಕಾಣಬೇಕು ಎಂದು ಹೇಳಿದರು.
ಆಸ್ಪತ್ರೆಯಲ್ಲಿ ಪ್ರಸ್ತುತ ಖಾಲಿ ಇರುವ ವೈದ್ಯರುಗಳನ್ನು ನೇಮಕ ಮಾಡಲು ಸಂಬಂಧ ಪಟ್ಟ ಇಲಾಖೆಯ ಸಚಿವರುಗಳ ಬಳಿ ಮಾತನಾಡಿ ಭರ್ತಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಶಾಸಕ ಹೆಚ್ ವಿ ವೆಂಕಟೇಶ್ ತಿಳಿಸಿದರು..
ಸಭೆ ಉದ್ದೇಶಿಸಿ ಡಿ ಹೆಚ್ ಓ ಮಂಜುನಾಥ್ ಮಾತನಾಡಿ, ಸರ್ಕಾರಿ ಆಸ್ಪತ್ರೆ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯ ಮೂಡಿಸುವ ಸಲುವಾಗಿ ಎಲ್ಲಾ ವೈದ್ಯರು ಇಂದಿನಿಂದ ತಮ್ಮ ವೈಯಕ್ತಿಕ ದ್ವೇಷವನ್ನು ಮರೆತು ಒಗ್ಗಟ್ಟಾಗಿ ರೋಗಿಗಳು ಸೇವೆ ನೀಡಿ ಜನರ ಮನ್ನಣೆ ಗಳಿಸುವುದಾಗಿ ವೈದ್ಯರುಗಳ ಪರವಾಗಿ ಶಾಸಕ ಹೆಚ್ ವಿ ವೆಂಕಟೇಶ್ ಅವರಿಗೆ ಭರವಸೆ ನೀಡಿದರು.
ಈ ವೇಳೆ ಜಿಲ್ಲಾ ವೈದ್ಯಾಧಿಕಾರಿಗಳಾದ ಡಾ. ಮಂಜುನಾಥ್ ರವರು, ತಾಲ್ಲೂಕು ವೈದ್ಯಾಧಿಕಾರಿ ಡಾ. ತಿರುಪತಯ್ಯ ನವರು, ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ ಕಿರಣ್ ರವರು ಸೇರಿ ಇನ್ನೂ ಮುಂತಾದ ವೈದ್ಯ ಸಿಬ್ಬಂದಿ ಇದ್ದರು..