ಬೆಂಗಳೂರು :- ನಗರ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಬೆಂಗಳೂರು ನಗರ ಜಿಲ್ಲೆ ರವರ ಸಂಯುಕ್ತಾಶ್ರಯದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಯ ಮಾನ್ಯ ಅಧ್ಯಕ್ಷರುಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಮತ್ತು RWS ಅಭಿಯಂತರರುಗಳಿಗೆ MANGO MIST Hotel ನಲ್ಲಿ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀಯುತ ಅತೀಕ್ ಸರ್ IAS, ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರು ಅಧ್ಯಕ್ಷತೆ ವಹಿಸಿ ಜಲ ಜೀವನ್ ಮಿಷನ್ ಯೋಜನೆಯ ಗುರಿ ಮತ್ತು ಉದ್ದೇಶಗಳ ಬಗ್ಗೆ ಕೂಲಂಕುಷವಾಗಿ ವಿವರಿಸಿ ಈ ಯೋಜನೆಯ ಅನುಷ್ಠಾನದಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಪಾತ್ರ ಮತ್ತು ಜವಾಬ್ದಾರಿಗಳ ಮಹತ್ವದ ಬಗ್ಗೆ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಘನ ತ್ಯಾಜ್ಯ ನಿರ್ವಹಣೆ, ದ್ರವ ತ್ಯಾಜ್ಯ ನಿರ್ವಹಣೆ, FSM, MRF ಘಟಕಾಂಶಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಇದಕ್ಕೂ ಮೊದಲು ಕಿರಿಯ ಅಭಿಯಂತರರಾದ ಕು. ವಿದ್ಯಾ ರವರು ಜಿಲ್ಲೆಯಲ್ಲಿ ಇರುವ ಕೆರೆಗಳ ಪೈಕಿ ಕಲುಷಿತಗೊಂಡಿರುವ ಕೆರೆಗಳನ್ನು 186 ಗುರುತಿಸಿ DPR ಸಿದ್ದಪಡಿಸಿರುವ ಬಗ್ಗೆ ಮತ್ತು ವಿವಿಧ ಯೋಜನೆಗಳಡಿ ಸದರಿ ಕೆರೆಗಳನ್ನು ಅಭಿವೃದ್ಧಿ ಪಡಿಸಿರುವ/ ಪಡಿಸುತ್ತಿರುವ ಬಗ್ಗೆ ಮತ್ತು ಜಿಲ್ಲೆಗೆ ಯಾವುದೇ ಸುಸ್ಥಿರ ನೀರಿನ ಮೂಲಗಳು ಇಲ್ಲದೆ ಇರುವುದರಿಂದ ಎಲ್ಲಾ ಕೆರೆಗಳನ್ನು ಪುನರುಜ್ಜೀವನ ಗೊಳಿಸಲು ಜೆಲ್ಲೆಯು ಹಾಕಿಕೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ದೇಶಕರಾದ ಶ್ರೀಮತಿ ಶಿಲ್ಪಾ ಶರ್ಮಾ IAS ರವರು, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ CEO ಶ್ರೀ ಸಂಗಪ್ಪ IAS ರವರು, RWS ಅಧೀಕ್ಷಕ ಅಭಿಯಂತರರಾದ ಶ್ರೀ. ನಾಗರಾಜ್ ಸರ್, ಜಿ.ಪಂ ಉಪಕಾರ್ಯದರ್ಶಿ ಡಾ. ನೋಮೇಶ್ ಕುಮಾರ್ ರವರು, RWS EE ಶ್ರೀ ಸುರೇಶ್ ತಂಗೊಳ್ಳಿ ರವರು, ZP CPO, PD, CAO ರವರುಗಳು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಚಂದ್ರಶೇಖರ್, ಶ್ರೀ ಚಂದ್ರಶೇಖರ್ ಮಸಗುಪ್ಪಿ ಮತ್ತು ಸಮಾಲೋಚಕರಾದ ಶ್ರೀ ಜಗದೀಶ್ ರವರುಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೆ ಪ್ರಾರ್ಥನೆಯನ್ನು ಶ್ರೀಮತಿ ಯಶೋಧರವರು, ಸ್ವಾಗತವನ್ನು ಉಪಕಾರ್ಯದರ್ಶಿ ಡಾ ನೋಮೇಶ್ ಕುಮಾರ್ ರವರು ಮತ್ತು ನಿರೂಪಣೆಯನ್ನು JJM- DPM ಶ್ರೀಮತಿ ಉಷಾರವರು ನೆರವೇರಿಸಿದರು.
ಒಟ್ಟಾರೆಯಾಗಿ 2022-23 ನೇ ಆರ್ಥಿಕ ವರ್ಷದ ಮೊದಲನೇ ವಾರದಲ್ಲಿಯೇ ಕಾರ್ಯಾಗಾರವನ್ನು ಅಯೋಜಿಸಿರುವುದರಿಂದ ಜಲ ಜೀವನ್ ಮಿಷನ್ ಹಾಗೂ ಸ್ವಚ್ಚ ಭಾರತ್ ಮಿಷನ್ ಗ್ರಾಮೀಣ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಈ ತರಬೇತಿಯು ಅತ್ಯುತ್ತಮವಾಗಿ ಮೂಡಿ ಬಂದಿದ್ದು, ಅದರಂತೆ ಈ ಸಾಲಿನಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುವುದು ಎಂದು ಶಿಬಿರಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.ಒಟ್ಟಾರೆಯಾಗಿ ಇಂದು ಜರುಗಿದ ತರಬೇತಿಯನ್ನು ಯಶಸ್ವಿಗೊಳಿಸಲಾಯಿತು.