ಆನೇಕಲ್: ವರಮಹಾಲಕ್ಷ್ಮಿ ಹಬ್ಬ ದಿಂದ ದುಬಾರಿಯಾಯ್ತು ಹೂವು, ಹಣ್ಣು, ತರಕಾರಿ. ಆನೇಕಲ್ ನ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ನಡುವಲ್ಲೂ ಹೂ – ಹಣ್ಣು ಖರೀದಿಸಲು ಜನದಟ್ಟಣೆ ಕಂಡು ಬಂತು.
ಇದಲ್ಲದೆ ಹಬ್ಬದ ಸಲುವಾಗಿ ಪೂಜಾ ಸಾಮಗ್ರಿಗಳನ್ನು ಮಾರಲು ಹಲವೆಡೆ ರಸ್ತೆ ಬದಿಗಳಲ್ಲೇ ಮಿನಿ ಮಾರುಕಟ್ಟೆಗಳು ಹುಟ್ಟಿಕೊಂಡಿದ್ದು, ಇಲ್ಲಿಯೂ ಖರೀದಿಯ ಭರಾಟೆ ಜೋರಾಗಿ ನಡೆದಿದೆ.
ಈ ಬಾರಿಯ ವರಮಹಾಲಕ್ಷ್ಮಿ ಹಬ್ಬಕ್ಕೆ ಕನಕಾಂಬರದ ಬೆಲೆ ಗಗನಕ್ಕೇರಿದೆ. ಮಲ್ಲಿಗೆ, ಮಳ್ಳೆ ಮತ್ತಿತರ ಹೂ, ಬಾಳೆಹಣ್ಣು ಸೇರಿದಂತೆ ಹಲವು ಹೂವು, ಹಣ್ಣುಗಳ ಬೆಲೆ ಏರಿಕೆಯಾಗಿದೆ.
ಹೂವಿನ ಬೆಲೆ ಹೆಚ್ಚಾದ್ದರಿಂದ ಕೆಲವು ಚಿಲ್ಲರೆ ಮಾರಾಟಗಾರರ ಬಳಿ ಕನಕಾಂಬರ ಹೂವಿನ ಲಭ್ಯತೆ ಇಲ್ಲ. ಇನ್ನು ಲಕ್ಷ್ಮಿಗೆ ಪ್ರಿಯವಾದ ಮಲ್ಲಿಗೆ, ಕೇದಗೆ, ದವಣ, ತಾವರೆ ಹೂವುಗಳಿಗೆ ವಿಶೇಷ ಬೇಡಿಕೆಯಿದೆ. ಹೀಗಾಗಿ, ಮಲ್ಲಿಗೆ ಹೂವು, ಮಲ್ಲೆ ಹೂವು ಬೆಲೆ ಏರಿಕೆ ನಡುವೆಯೂ ಹೂ – ಹಣ್ಣು ಖರೀದಿಸಲು ಜನದಟ್ಟಣೆ ಕಂಡು ಬಂತು.
ಹಿಂದೆಲ್ಲ ಲಕ್ಷ್ಮಿ ಹಬ್ಬಕ್ಕೆ ಕಳಸವಿಟ್ಟು ಸೀರೆ ಉಡಿಸುತ್ತಿದ್ದರು. ಇದೀಗ ಸೀರೆ, ಆಭರಣಗಳ ಸಮೇತ ಅಲಂಕೃತಗೊಂಡಿರುವ ಲಕ್ಷ್ಮಿ ವಿಗ್ರಹಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. 500 ರೂ.ನಿಂದ ಆರಂಭವಾಗಿ 10 ಸಾವಿರ ರೂ.ವರೆಗೆ ಹಾಗೂ ಮೇಲ್ಪಟ್ಟು ಬೆಲೆಯಲ್ಲಿ ಮಾರಾಟವಾಗುತ್ತಿವೆ
ವರದಿ ಹರೀಶ್ ಗುರುಮುರ್ತಿ ಆನೇಕಲ್