* ಪಾವಗಡ: ವೆಂಕಟಾಪುರ ಸರ್ಕಾರಿ ಆಸ್ಪತ್ರೆ ಜಾಗ ಒತ್ತುವರಿ….?
* ವೆಂಕಟಾಪುರ ಗ್ರಾಮಪಂಚಾಯತಿಯ ಪಡಿಒ ಅಧ್ಯಕ್ಷ ರು ಒತ್ತುವರಿಗೆ ಸಾಥ್ ಆರೋಪ….!
ಪಾವಗಡ ತಾಲೂಕು ವೆಂಕಟಾಪುರ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಂಪೌಂಡ್ ಕಾಮಗಾರಿ ನಡೆಯುತ್ತಿದ್ದು. ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗವನ್ನು ಸರ್ವೆ ಮಾಡದೆ ಪಕ್ಕದಲ್ಲಿರುವ ಖಾಸಗಿ ಜಮೀನಿನ ಮಾಲೀಕರಿಗೆ ಅನುಕೂಲವಾಗುವ ರೀತಿಯಲ್ಲಿ ಸುಮಾರು ನಾಲ್ಕರಿಂದ ಐದು ಅಡಿ ಸರ್ಕಾರಿ ಜಾಗವನ್ನು ಖಾಸಗಿ ಜಮೀನಿನವರೆಗೆ ಅನುಕೂಲವಾಗುವಂತೆ ಕಾಂಪೌಂಡ್ ಕಾಮಗಾರಿ ನಡೆಸಲಾಗುತ್ತಿದೆ ಎಂದು ವೆಂಕಟಾಪುರ ಗ್ರಾಮದ ಸತ್ಯಪ್ರಕಾಶ್ ರವಿತೇಜ ಹರೀಶ್ ವಿಜಯಭಾಸ್ಕರ್ ಮಂಜು ಹರಿ ನಾಯಕ ನರೇಶ್ ಪುರುಷೋತ್ತಮ್ ಮತ್ತಿತರ ಗ್ರಾಮಸ್ಥರು ಆರೋಪಿಸಿದ್ದಾರೆ
ಈ ಸಂಬಂಧ ತಾಲೂಕು ವೈದ್ಯಾಧಿಕಾರಿಗಳಾದ ತಿರುಪತಯ್ಯ ರವರ ಗಮನಕ್ಕೆ ತರಲಾಗಿದ್ದು ಅವರು ವೆಂಕಟಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಳಾದ ಲಕ್ಷ್ಮಿದೇವಿಯವರಿಗೆ ಆಸ್ಪತ್ರೆ ಜಾಗವನ್ನು ಸರ್ವೆ ಮಾಡಿಸಲು ವೆಂಕಟಾಪುರದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ರಂಗಧಾಮ ರವರಿಗೆ ದೂರು ನೀಡಲು ತಿಳಿಸುತ್ತಾರೆ
ವೆಂಕಟಾಪುರ ವೈದ್ಯಾಧಿಕಾರಿ ಲಕ್ಷಿದೇವಿ ಯವರು ಟಿ ಎಚ್ ಒ ಅವರ ಮೌಕಿಕ ಆದೇಶದಂತೆ ಗ್ರಾಮಪಂಚಾಯತಿ ಕಾರ್ಯಾಲಕ್ಜೆ ತೆರಳಿ ಗ್ರಾಮಪಂಚಾಯತಿ ಪಿಡಿಓ ಅವರ ಗಮಕ್ಜೆ ತಂದರು ಪ್ರಯೋಜನವಾಗಲಿಲ್ಲ, ಪಂಚಾಯತಿ ಯವರ ಕುಮ್ಮಕ್ಕಿನಿಂದ ಒತ್ತುವರಿ ಕಾರ್ಯ ನಡೆಯುತ್ತಿದೆ ಎನ್ಬುತ್ತಾರೆ ಗ್ರಾಮಸ್ಥರು.
ಸರ್ಕಾರದ ಆಸ್ತಿಗಳ ಒತ್ತುವರಿ ತಡೆಯಬೇಕಾದ ಪಿಡಿಒ ರಂಗಧಾಮ ನವರು ಯಾವುದೇ ಕ್ರಮವಹಿಸಿದೆ ಬೇಜವಾಬ್ದಾರಿ ತೋರಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಪಿಡಿಒ ನಡೆಯಿಂದ ಬೇಸತ್ ವೆಂಕಟಾಪುರ ಗ್ರಾಮದ ಕೆಲವರು ಇಂದು ಪಾವಗಡ ತಾಲೂಕು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ಶಿವರಾಜಯ್ಯ ನವರ ಹಾಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ A.E.E ಸುರೇಶ್ ರವರ ಕಚೇರಿಗೆ ದೂರು ನೀಡಿರುತ್ತಾರೆ
ತಾಲ್ಲೂಕು ಆಡಳಿತ ಸೂಕ್ತ ಕ್ರಮ ವಹಿಸದಿದ್ದರೆ ನಾಳೆ ಪಾವಗಡಕ್ಕೆ ಆಗಮಿಸುತ್ತಿರುವ ಜಿಲ್ಲಾಧಿಕಾರಿಯವರಿಗೆ ದೂರು ನೀಡುವುದಾಗಿ ವೆಂಕಟಾಪುರ ಗ್ರಾಮಸ್ಥರು ತಿಳಿಸಿದ್ದಾರೆ.
ವೆಂಕಟಾಪುರದ ಗ್ರಾಮ ಪಂಚಾಯತಿ ಅಧ್ಯಕ್ಷರು ಈ ಬಗ್ಗೆ ಯಾವುದೇ ಕ್ರಮ ವಹಿಸದಿರುವುದುನಾಚಿಕೆಗೇಡಿನ ಸಂಗತಿ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸರ್ಕಾರಿ ಜಾಗಕ್ಕೆ ಸೂಕ್ತ ರಕ್ಷಣೆ ಇಲ್ಲದಿರುವುದು ತಾಲೂಕು ಆಡಳಿತದ ಬೇಜಾಬ್ದಾರಿ ಎತ್ತಿತೋರಿಸುತ್ತದೆ. ಇದೇ ರೀತಿಯಲ್ಲಿ ಪಾವಗಡ ತಾಲೂಕು ಯ.ನಾ. ಹೊಸಕೋಟೆ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗವನ್ನು ಸರ್ವೆ ಮಾಡಿಸದೆ ಕಾಂಪೌೌಂಡ್ ಕೆಲಸ ಆರಂಭಿಸಿದ್ದಾರೆ ಇದು ಮುಂದಿನ ದಿನಗಳಲ್ಲಿ ಸಮಸ್ಯೆಯಾಗ ಬಹುದು.ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಾಂಪೌೌಂಡ್ ನಿರ್ಮಿಸುವ ಮೊದಲು ಜಮೀನು ಸರ್ವೆ ಮಾಡಿಸಿ ಕಾಂಪೌಂಡ್ ನಿರ್ಮಿಸಿದರೆ ಒತ್ತುವರಿ ಆಗುವುದನ್ನು ತಡೆಯಬಹುದಲ್ಲವೆ….?
ವರದಿ: ಶ್ರೀನಿವಾಸುಲು ಎ