IMG 20211109 WA0024

ಪಾವಗಡ:ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ…!

DISTRICT NEWS ತುಮಕೂರು

*ಅಂಗನವಾಡಿ ಶಾಲೆಗಳ ಪ್ರಾರಂಭ*
.*ಹೆಲ್ಪ್ ಸೊಸೈಟಿ ವತಿಯಿಂದ ಮಕ್ಕಳಿಗೆ ಶಾಲಾ ಬ್ಯಾಗ್ ಹಾಗೂ ಶಾಲಾ ಪರಿಕರ ವಿತರಣೆ ಮೂಲಕ ವಿಭಿನ್ನವಾಗಿ ಸ್ವಾಗತ*

ಪಾವಗಡ: ನ 8.ಪಟ್ಟಣದ ಶಾಂತಿನಗರ ಅಂಗನವಾಡಿ ಕೇಂದ್ರಕ್ಕೆ ಪುರಸಭೆ ಇಲಾಖೆ ವತಿಯಿಂದ ನಿವೇಶನವನ್ನು ನೀಡುವ ಬಗ್ಗೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಲ್ಲುವ ಬರವಸೆಯನ್ನು *ಪುರಸಭೆ ನೂತನ ಪ್ರಭಾರ ಅಧ್ಯಕ್ಷರಾದ ಶ್ರೀಮತಿ ಸುಧಾಲಕ್ಷ್ಮಿ ಪ್ರಮೋದ್ ರವರು* ತಿಳಿಸಿದರು.
ಪಟ್ಟಣದ ಶಾಂತಿ ನಗರದ ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿ *ಹೆಲ್ಪ್ ಸೊಸೈಟಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ* ವತಿಯಿಂದ ಅಂಗನವಾಡಿಗೆ ಮಕ್ಕಳಿಗೆ ಗುಲಾಬಿ, ಸಿಹಿ ನೀಡಿ ಸ್ವಾಗತಿಸಿ ಶಾಲಾ ಬ್ಯಾಗ್ ಹಾಗೂ ಶಾಲಾ ಪರಿಕರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ *ಪುರಸಭೆ ಅಧ್ಯಕ್ಷರಾದ ಶ್ರೀಮತಿ ಸುಧಾಲಕ್ಷ್ಮಿ ಪ್ರಮೋದ್ ಕುಮಾರ್ ರವರು* ಸ್ಥಳೀಯ ವಾರ್ಡ್ ಸದಸ್ಯರ ಮನವಿ ಮೇರೆಗೆ ಸದರಿ ಅಂಗನವಾಡಿಗೆ ನಿವೇಶನವನ್ನುಮುಂಜೂರು ಮಾಡುವ ಭರವಸೆ ನೀಡಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ *ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿ ನಾರಾಯಣ ರವರು* ಮಾತನಾಡುತ್ತ ಪೋಷಕರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದು ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ವಿನಂತಿಸಿ ಸರ್ಕಾರದದ ಪ್ರಯೋಜನ ಕಾರ್ಯಕ್ರಮಗಳನ್ನು ಸದುಪಯೋಗ ಪಡೆದುಕೊಂಡು ಮಕ್ಕಳನ್ನು ವಿದ್ಯಾವಂತರಾಗಿ ಮಾಡುವಂತೆ ಕರೆ ನೀಡಿ, ನಮ್ಮ ಇಲಾಖೆಯ ಸಹಕಾರ ದೊಂದಿಗೆ ಹೆಲ್ಪ್ ಸೊಸೈಟಿ ಇಂದು ಅಂಗನವಾಡಿಗೆ ಮಕ್ಕಳನ್ನು ಸ್ವಾಗತಿಸುವ ಹಾಗೂ ಪ್ರೇರಿಫೀಸುವಂತಹ ವಿಭಿನ್ನವಾದ *ಶಾಲಾ ಮಕ್ಕಳಿಗೆ ಬ್ಯಾಗ್, ಮಾಸ್ಕ್, ಸ್ಲೇಟ್, ಹಾಗೂ ನೀರಿನ ಬಾಟಲ್* ಸಮೇತ ನೀಡುತ್ತಿರುವ *ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್* ರವರನ್ನು ಶ್ಲಾಘಿಸಿದರು.
ನಂತರ ಮಾತನಾಡಿದ ಸ್ಥಳೀಯ *ವಾರ್ಡ್ ಸದಸ್ಯ ಗೊರ್ತಿ ನಾಗರಾಜ* ಮಾತನಾಡುತ್ತ ಒಂದಲ್ಲ ಒಂದು ಒಳ್ಳೆ ಕೆಲಸವನ್ನು ಮಾಡುತ್ತಿರುವ ಹೆಲ್ಪ್ ಸೊಸೈಟಿ ಎಲ್ಲಾ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿ, ಶಾಂತಿನಗರ ಜನತೆ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹಾಗೂ ಜನತೆಯೂ ಸಹ ಕಸ ಕಡ್ಡಿಗಳನ್ನು ರಸ್ತೆಗೆ ಹಾಕದೆ ಸುಚಿತ್ವ ವನ್ನು ಕಾಪಾಡಿಕೊಂಡು ಕಸದ ವಾಹನಕ್ಕೆ ಕಸವನ್ನು ನೀಡುವಂತೆ ವಿನಂತಿಸಿ, ಶಾಂತಿನಗರದ ಪ್ರಮುಖ ರಸ್ತೆಯನ್ನು ದುರಸ್ಥಿಗೊಳಿಸಲು ಕ್ರಮ ವಹಿಸುವಂತೆ ಪುರಸಭೆ ಅದ್ಯಕ್ಷರಲ್ಲಿ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಸನ್ ರೈಸ್ ವೈದ್ಯರು ಹಾಗೂ ಹೆಲ್ಪ್ ಸೊಸೈಟಿ ಮಾರ್ಗದರ್ಶಕರಾದ *ಶ್ರೀಕಾಂತ್ ಪುವ್ವಡಿ, ಪುರಸಭೆ ಮಹಿಳಾ ಸದಸ್ಯರಾದ ಉಮಾದೇವಿ,ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಶಿಶು ಅಭಿವೃದ್ಧಿ ಮೇಲ್ವಿಚಾರಕಿ ಸುಧಾ , ರೋಟರಿ ಸಂಸ್ಥೆ ಕಾರ್ಯದರ್ಶಿ ಸತ್ಯ ಲೋಕೇಶ್, ಕನ್ನಮೇಡಿ ಸುರೇಶ, ಅಂಗನವಾಡಿ ಕಾರ್ಯಕರ್ತೆಪ್ರಶಾಂತಮ್ಮ.ಸಹಾಯಕಿ ಯಶೋದಮ್ಮ*, ಹಾಜರಿದ್ದರು. ನಂತರ ಕೋವಿಡ್ ಸಮಯದಲ್ಲಿ ಮನೆ ಮನೆ ಬೇಟಿ ನೀಡಿ ಕೊರೋನ ಸೇನಾನಿಗಳಾಗಿ ಸೇವೆ ಸಲ್ಲಿಸಿದ ಅಂಗನವಾಡಿ ಮೇಲ್ವಿಚಾರಕಿ ಪ್ರಶಾಂತಮ್ಮ ಹಾಗೂ ಸಹಾಯಕಿ ಯಶೋದಾಮ್ಮ ರವರನ್ನು ಹೆಲ್ಪ್ ಸೊಸೈಟಿ ವತಿಯಿಂದ ಶಾಲು ಹೊದಿಸಿ ಹುಮಾಲೆ ಹಾಕಿ ನೆನಪಿನ ಕಾಣಿಕೆ  ನೀಡಿ ಸನ್ಮಾನಿಸಿದರು.
*ಕಾರ್ಯಕ್ರಮದ ಅಚ್ಚುಕಟ್ಟಾದ ವೇದಿಕೆ ಉಸ್ತುವಾರಿ ಹಾಗೂ ಸ್ವಾಗತ ನಿರೂಪಣೆಯನ್ನು ಬೇಕರಿ ನಾಗರಾಜ ನೆಡೆಸಿಕೊಟ್ಟರು

ವರದಿ: ಶ್ರೀನಿವಾಸುಲು ಎ