IMG 20220103 WA0075

ಪಾವಗಡ :- ಪಾಠ-ಪ್ರವಚನ ಕುಂಠಿತ ವಿದ್ಯಾರ್ಥಿಗಳ ಪರದಾಟ…..

DISTRICT NEWS ಬಿಬಿಎಂಪಿ

ಪಾವಗಡ :- ಪಾಠ-ಪ್ರವಚನ ಕುಂಠಿತ ವಿದ್ಯಾರ್ಥಿಗಳ ಪರದಾಟ……….. 

ಪಾವಗಡದ ಸರ್ಕಾರಿ ವೈ ಈ ಆರ್ ಪ್ರಥಮ ದರ್ಜೆ ಕಾಲೇಜಿನ  ವಿದ್ಯಾರ್ಥಿಗಳು ಮತ್ತು ಯುವಜನ ವಿದ್ಯಾರ್ಥಿಗಳ ಒಕ್ಕೂಟ ಸಂಘದ ಸಹಕಾರದೊಂದಿಗೆ ಇಂದು ಕಾಲೇಜಿನಿಂದ ತಹಶೀಲ್ದಾರ್ ಕಚೇರಿವರೆಗೂ ಜಾಥಾ ನಡೆಸಿ ತಹಶೀಲ್ದಾರ್ ನಾಗರಾಜ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು,ಕಳೆದ ಡಿಸೆಂಬರ್ 10ನೇ ತಾರೀಕಿನಿಂದ ಕರ್ನಾಟಕ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ಮುಷ್ಕರವನ್ನು ಕೈಗೊಂಡ ಹಿನ್ನೆಲೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನದಲ್ಲಿ ತುಂಬಾ ತೊಂದರೆ ಯಾಗಿದೆ ದೂರದ ಊರುಗಳಿಂದ ಬಸ್ ಚಾರ್ಜ್ ಇಟ್ಟುಕೊಂಡು ಬರುವ ವಿದ್ಯಾರ್ಥಿಗಳು ಪ್ರತಿದಿನ ಒಂದೆರಡು ತರಗತಿಗಳು ಕೇಳುವ ಪರಿಸ್ಥಿತಿ ಎದುರಾಗಿದೆ,ಮತ್ತು ನಮಗೆ ಉಪನ್ಯಾಸಕರನ್ನು ನೇಮಕ ಮಾಡಿ ಅಥವಾ ಅತಿಥಿ ಉಪನ್ಯಾಸಕರನ್ನಾದರೂ ಕೊಡಿ ಎಂದು ಇದೇ ವೇಳೆ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ತಹಸೀಲ್ದಾರ್ ಅವರಿಗೆ ಮನವಿ ಮಾಡಿಕೊಳ್ಳಲಾಯಿತು,
.ಪಾವಗಡ ತಾಲ್ಲೂಕು ಸಂಘದ ಅಧ್ಯಕ್ಷರಾದ ಗಗನ್ ರಾಜ್ ಅವರು ಮಾತನಾಡಿ* ರಾಜ್ಯಾದ್ಯಂತ ಪ್ರಥಮ ಕಾಲೇಜಿನ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ನ್ಯಾಯ ಒದಗಿಸಿಕೊಡಬೇಕು ಎಂದು ನಮ್ಮ ಸಂಘಟನೆಯ ಪರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು,*
ಇನ್ನೂ ಇದೇ ವೇಳೆ YSF ಸಂಘದ ಖಜಾಂಚಿ ಲಕ್ಷ್ಮಿ ಸಂತೋಷ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಯಶ್ವಂತ್ ಮಂಜುನಾಥ್ ಚಿತ್ರಲಿಂಗ ಸುಬ್ರಮಣಿ ನವೀನ್ ಎನ್ ಟಿ ಆರ್ ಮಹೇಶ್ ಅನಿಲ್ ಕುಮಾರ್ ಲೋಕೇಶ್ ವಿದ್ಯಾಶ್ರೀ ಅನುಷಾ ಭವ್ಯ ರೂಮಿನ ನಂದಿನಿ ಐಶ್ವರ್ಯಾ ರಾಣಿ ರಾಜೇಶ್ವರಿ ಸೇರಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.