bac829ddf2eb42bf8ea70e716d2cd7cc

ಪಾವಗಡ: ಕೋವಿಡ್- 19  ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

DISTRICT NEWS ತುಮಕೂರು

ಕೋವಿಡ್- 19  ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ……………..         

ಪಾವಗಡ… ಇಂದು ಬೆಳಿಗ್ಗೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 15ರಿಂದ 18 ವರ್ಷ ಮಕ್ಕಳಿಗೆ ಕೋವಿಡ್ -19 ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ವೆಂಕಟರಮಣಪ್ಪ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವೆಂಕಟರವಣಪ್ಪನವರು ಎಲ್ಲಾ ಮಕ್ಕಳು  ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು, ಲಸಿಕೆ ಹಾಕಿಸಿಕೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಬರುವಂತಹ ವೈರಸ್ ಗಳ ಹಾವಳಿಯಿಂದ ತಪ್ಪಿಸಿಕೊಳ್ಳಬಹುದು. ಮತ್ತು ನೀವು ಶೈಕ್ಷಣಿಕವಾಗಿ ಮುಂದುವರೆಯಬಹುದು , ಎಲ್ಲಾ ಮಕ್ಕಳು ಲಸಿಕೆ ಹಾಕಿಸಿಕೊಳ್ಳುವ ಮುಖಾಂತರ ಕರೋನವನ್ನು ಓಡಿಸಬಹುದು ಎಂದರು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ತಿರುಪತಿಯ, ಡಾಕ್ಟರ್ ಕಿರಣ್ ಕುಮಾರ್, ಕಾಲೇಜಿನ ಸಿಬಿಸಿ ಅಧ್ಯಕ್ಷ ಪ್ರಮೋದ್ ಕುಮಾರ್, ತಹಸಿಲ್ದಾರ್ ನಾಗರಾಜ್, B.e.o ಅಶ್ವತ್ಥನಾರಾಯಣ , ರಿಜ್ವಾನ್ ವುಲ್ಲಾ, ಪ್ರಾಂಶುಪಾಲ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು

ವರದಿ: ಶ್ರೀನಿವಾಸುಲು ಎ