ಬೆಳೆ ನಷ್ಟ ಪರಿಹಾರ ಅರ್ಹ ರೈತರಿಗೆ ತಲುಪಿಲ್ಲ ವೆಂದು ಶಾಸಕ ವೆಂಕಟರಮಣಪ್ಪ ಆಗ್ರಹ.
ಪಾವಗಡ ಜ.21: – ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಶಾಸಕ ವೆಂಕಟರಮಣಪ್ಪ ನಡೆಸಿದರು
. ಶಾಸಕರು ಸಭೆಯಲ್ಲಿ ಮಾತನಾಡುತ್ತಾ ತಾಲ್ಲೂಕಿನಲ್ಲಿ ಧಾರಕಾರವಾಗಿ ಸುರಿದ ಮಳೆಯಿಂದಾಗಿ ಅನೇಕ ರೈತರ ಬೆಳೆಗಳು ಹಾಳಾಗಿದ್ದು ರೈತರಿಗೆ ಸೂಕ್ತ ಸಮಯದಲ್ಲಿ ಬೆಳೆ ಪರಿಹಾರ ಸಿಗದಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿವರ್ಗದವರು ರೈತರ ಜಮೀನುಗಳಿಗೆ ಹೋಗಿ ಬೆಳೆ ನಷ್ಟದ ಬಗ್ಗೆ ಖುದ್ದು ಮಾಹಿತಿ ಪಡೆಯದೆ, ಕಚೇರಿಯಲ್ಲಿ ಇದ್ದುಕೊಂಡೆ ಬೆಳೆ ನಷ್ಟದ ಬಗ್ಗೆ ಪಟ್ಟಿ ಸಿದ್ಧಪಡಿಸುವುದರಿಂದ ಅರ್ಹ ರೈತರಿಗೆ ಇದರಿಂದ ತುಂಬಾ ಅನ್ಯಾಯವಾಗಿದೆ ಎಂದು ತಿಳಿಸಿದರು.
ಹೀಗೆ ಬೇಜವಾಬ್ದಾರಿತನದಿಂದ ಕೆಲಸ ಮಾಡುವ ಬದಲು ಅಂತಹ ಅಧಿಕಾರಿಗಳು ತಾಲೂಕನ್ನ ಬಿಟ್ಟುಹೋಗಬೇಕೆಂದು ಶಾಸಕರು ಗರಂ ಆದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆದ ಅಶ್ವಥನಾರಾಯಣ ಮಾತನಾಡಿ ತಾಲೂಕಿನಲ್ಲಿ 54 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಬಂದಿರುವ ಬಗ್ಗೆ ಮಾಹಿತಿ ನೀಡಿದರು..
ವೆಂಕಟಾಪುರ ಶಾಲೆಯಲ್ಲಿ 20 ವರ್ಷಗಳಿಂದ ಬೀಡುಬಿಟ್ಟಿರುವ ಶಿಕ್ಷಕಿ, ಶಾಲಾಭಿವೃದ್ಧಿ ಸಮಿತಿ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಇವರನ್ನು ತಕ್ಷಣವೇ ಬೇರೆ ಕಡೆಗೆ ನಿಯೋಜಿಸುವಂತೆ ಶಾಸಕರು ತಾಕೀತು ಮಾಡಿದರು. ಹಾಗೂ ಬೆಂಗಳೂರು ಮತ್ತು ತುಮಕೂರಿಂದ ಓಡಾಡುತ್ತಿರುವ ಶಿಕ್ಷಕರ ಮೇಲೆ ಗಮನಹರಿಸಿ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆದೇಶಿಸಿದರು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಬಿಸಿಎಂ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಸ್ವಚ್ಛತೆಯ ಹಾಗೂ ಸ್ಯಾನಿಟೇಷನ್ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳು ವಸತಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ಕೊರೊನಾ ಸೋಂಕು ಹರಡದಂತೆ ತಡೆಗಟ್ಟಬೇಕು ಎಂದು ಶಾಸಕರು ತಿಳಿಸಿದರು.
ಕುರುಬರಹಳ್ಳಿ ಗೇಟ್ ಬಳಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೆ ಬಗ್ಗೆ ಹಲವಾರು ದೂರುಗಳು ಬಂದಿದ್ದು , ಸಾರಿಗೆ ವ್ಯವಸ್ಥಾಪಕರಾದ ಹನುಮಂತರಾಯಪ್ಪ ರವರಿಗೆ ಪ್ರತಿನಿತ್ಯ ಎಲ್ಲಾ ಬಸ್ಸುಗಳನ್ನು ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ವಸತಿ ಶಾಲೆ ಮುಂದೆ ನಿಲ್ಲಿಸಬೇಕೆಂದು, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಬೇಕೆಂದು ಎಂದರು.
ವರದಿ: ಶ್ರೀನಿವಾಸುಲು ಎ