IMG 20230802 WA0022

ಪಾವಗಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆ.ಎಸ್ .ಪಿ .ಡಿ ಗೆ ಮನವಿ .ಸಿ ಎಲ್

DISTRICT NEWS ತುಮಕೂರು

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆ.ಎಸ್ .ಪಿ .ಡಿ .ಸಿ ಎಲ್ ನ  ಎ.ಇ.ಇ  ಮಹೇಶ್ ಗೆ ಮನವಿ ಪತ್ರ ಸಲ್ಲಿಕೆ.

ಪಾವಗಡ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ  ಒತ್ತಾಯಿಸಿ  ತಿರುಮಣಿಯ ಕೆ.ಎಸ್ .ಪಿ .ಡಿ .ಸಿ ಎಲ್ ನ  ಎ.ಇ.ಇ  ಮಹೇಶ್ ಮೂಲಕ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ವೈದ್ಯಾಧಿಕಾರಿಗಳಿಗೆ, ಉಪನಿರ್ದೇಶಕರಿಗೆ, ಇಂಧನ ಸಚಿವರಿಗೆ ತಿರುಮಣಿ ಸೌರಶಕ್ತಿ ಯುವ ಸಂಘದ ಪದಾಧಿಕಾರಿಗಳು  ಮನವಿ ಪತ್ರ ಸಲ್ಲಿಸಿದರು..
ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ತಿರುಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಖಾಯಂ ಪ್ರಸೂತಿ ವೈದ್ಯರ, ಮತ್ತು ಸಿಬ್ಬಂದಿಗಳ ಕೊರತೆಯಿದ್ದು, ಸುಮಾರು 25 ಹಳ್ಳಿಯ ಜನರಿಗೆ ಇದೊಂದೇ ಆಸ್ಪತ್ರೆಯಿದ್ದು ಸಿಬ್ಬಂದಿ ಅಭಾವದಿಂದ ಜನರಿಗೆ ವೈದ್ಯಕೀಯ ಸೌಲಭ್ಯ ದೊರಕುವುದು ತುಂಬಾ ಕಷ್ಟವಾಗಿದೆ ಎಂದು.
ಈ ಸಂಬಂಧ ಹಲವಾರು ಬಾರಿ ತಾಲ್ಲೂಕು ವೈದ್ಯಾಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲವೆಂದು ಕೂಡಲೆ ಕ್ರಮವಹಿಸುವಂತೆ ಜಿಲ್ಲಾ ವೈಧ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
2050 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ತಿರುಮಣಿಯ ಸೋಲಾರ್ ಘಟಕಕ್ಕೆ ರೈತರಿಂದ ಗುತ್ತಿಗೆ ಆಧಾರದ ಮೇಲೆ 13 ಸಾವಿರ ಎಕರೆ ಭೂಮಿ ಪಡೆದಿದ್ದು,   11,000 ಎಕರೆ ವಿದ್ಯುತ್ ಉತ್ಪಾದನೆಗೆ ಬಳಸಿ ಉಳಿದ 1500 ರಿಂದ 200 ಎಕರೆ ಭೂಮಿಯಲ್ಲಿ ಅರಣೀಕರಣ ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ತಿರುಮಣಿ, ವೊಳ್ಳುರು ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಅಭಾವ ಹೆಚ್ಚಾಗಿದ್ದು ಲಕ್ಷಾಂತರ ರೂ ಗಳಲ್ಲಿ ಶಾಲಾ ಕೊಠಡಿ ನಿರ್ಮಾಣ ಮಾಡಿದ್ದು, ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ ಎಂದು ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲವೆಂದು ತಕ್ಷಣ ಕ್ರಮ ಕೈಗೊಳ್ಳುವಂತೆ ಮಧುಗಿರಿ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು
ಸೋಲಾರ್ ಪಾರ್ಕ್ ನಲ್ಲಿ ಸೆಕ್ಯೂರಿಟಿ ಟೆಕ್ನಿಷಿಯನ್ ಕೆಲಸ ಕಡ್ಡಾಯವಾಗಿ ಸ್ಥಳೀಯ ಯುವಕರಿಗೆ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಿರುಮಣಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ್, ನಾಗರಾಜ್ ಶ್ರೀಕಾಂತ್ ಗೋಪಾಲ್ ರೆಡ್ಡಿ ಉಪಸ್ಥಿತರಿದ್ದರು.