ಅ.28ರಂದು ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ತಮಟೆ ಚಳವಳಿ
ತುಮಕೂರು:ಸುಪ್ರಿಂಕೋರ್ಟಿನ 2024ರ ಆಗಸ್ಟ್ 01ರ ಆದೇಶದಂತೆರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಲು ಹಿಂದೇಟು ಹಾಕುತ್ತಿರುವರಾಜ್ಯ ಸರಕಾರದ ವಿರುದ್ದಅಕ್ಟೋಬರ್ 28ರಂದು ತುಮಕೂರುಜಿಲ್ಲೆಯ ಮಾದಿಗ ಸಮುದಾಯದ ವತಿಯಿಂದತಮಟೆ ಚಳವಳಿ ನಡೆಸಲುಇಂದು ನಡೆದ ಮಾದಿಗ ಮುಖಂಡರ ಸಭೆಯಲ್ಲಿತೀರ್ಮಾನ ಕೈಗೊಳ್ಳಲಾಯಿತು.
ಹಿರಿಯರಾದ ನರಸೀಯಪ್ಪ, ವೈಎಚ್ ಹುಚ್ಚಯ್ಯ,ಉದ್ಯಮಿಡಿ.ಟಿ.ವೆಂಕಟೇಶ್,ಕೆoಚಮಾರಯ್ಯ,ಡಾ.ವೈ.ಟಿ.ಬಾಲಕೃಷ್ಣಪ್ಪ, ಡಾ.ಬಸವರಾಜು ಸೂರ್ಯಆಸ್ಪತ್ರೆಡಾ ಲಕ್ಷ್ಮಿಕಾಂತ್ ಪಾವಗಡ ಶ್ರೀರಾಮ್ ಸೇರಿದಂತೆ ಹಲವು ಮುಖಂಡರ ನೇತೃತ್ವದ ಒಳಮೀಸಲಾತಿ ಹೋರಾಟಕುರಿತ ಪೂರ್ವ ಭಾವಿ ಸಭೆಯಲ್ಲಿ ಹಾಜರಿದ್ದ ಬಹುತೇಕರು, ಒಳಮೀಸಲಾತಿ ಹೋರಾಟವನ್ನುಜಿಲ್ಲೆಯಲ್ಲಿ ಮೊದಲಿನಿಂದಲೂ ಮಾದಿಗ ಸಮುದಾಯ ನಡೆಸಿಕೊಂಡು ಬರುತ್ತಿದ್ದು, ಯಾವ ಸಂದರ್ಭದಲ್ಲಿಯೂ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಬಲಗೈ ಸಮುದಾಯ ಈ ಹೋರಾಟಕ್ಕೆ ಬೆಂಬಲವಾಗಿ ನಿಂತಿಲ್ಲ.ಅವರು ಈಗಾಗಲೇ ಮೀಸಲಾತಿಯ ಬಹುಪಾಲು ಪಡೆದಿದ್ದಾರೆ.ಅತ್ಯಂತ ಹೀನಾಯ ಸ್ಥಿತಿಯಲ್ಲಿರು ವುದು ಮಾದಿಗ ಸಮುದಾಯ. ಹಾಗಾಗಿ ಮುಂಬರುವಎಲ್ಲಾ ಹೋರಾಟಗಳನ್ನು ಮಾದಿಗ ಸಮುದಾಯ ಮಾದಿಗ ಸಮುದಾಯದಎಲ್ಲಾ ಉಪ ಪಂಗಡಗಳನ್ನು ಒಳಗೊಂಡಂತೆ ಒಂದುಐಕ್ಯ ವೇದಿಕೆಯ ಹೆಸರಿನಲ್ಲಿ ಮಾಡಲು ಸಭೆಯಲ್ಲಿಒಕ್ಕೊರಲಿನ ಒತ್ತಾಯ ವ್ಯಕ್ತವಾದ ಹಿನ್ನೆಲೆಯಲ್ಲಿಅಕ್ಟೋಬರ್ 28ರ ತಮಟೆ ಚಳವಳಿಯ ನಂತರಅಂಬೇಡ್ಕರ್ ಭವನದಲ್ಲಿ ಸಭೆ ಸೇರಿ, ಒಂದು ಹೊಸ ವೇದಿಕೆ ಹುಟ್ಟು ಹಾಕುವ ಬಗ್ಗೆಯೂಚರ್ಚೆ ನಡೆಸಲಾಯಿತು.