ವಿದ್ಯಾರ್ಥಿಗಳಿಗೆಕಾನೂನಿನ ಅರಿವು ಅಗತ್ಯ. ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಮಾದೇಶ್
ಪಾವಗಡ : ವಿದ್ಯಾರ್ಥಿಗಳಿಗೆ ಓದಿನ ಜೊತೆ ಸಾಮಾನ್ಯ ಕಾನೂನಿನ ಅರಿವು ಅತಿ ಮುಖ್ಯವೆಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿ ಮಾದೇಶ್ ತಿಳಿಸಿದರು.
ಪಟ್ಟಣದ ಶ್ರೀ ವೆಂಕಟೇಶ್ವರ ಆಂಗ್ಲ ಪ್ರೌಢಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮತ್ತು ವಿವಿಧ ಇಲಾಖೆಗಳ ವತಿಯಿಂದ ಏರ್ಪಡಿಸಿದ್ದ ಮಾನಸಿಕ ಆರೋಗ್ಯ ಮತ್ತು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಯಾವುದು ಸರಿ ಯಾವುದು ತಪ್ಪು ಎಂಬುದರ ಬಗ್ಗೆ ಅರಿವು ಅತಿ ಮುಖ್ಯವೆಂದರು.ಯಾವುದೇ ವಿದ್ಯಾರ್ಥಿ ದ್ವಿಚಕ್ರ ವಾಹನ ಚಲಾಯಿಸಿ ಅಪಘಾತ ಮಾಡಿದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು
ಆದರೆ ಎಷ್ಟೋ ವಿದ್ಯಾರ್ಥಿಗಳಿಗೆ ಪರವಾನಿಗೆ ಇಲ್ಲದೆ ದ್ವಿಚಕ್ರವಾಹನ ಚಲಾವಣೆ ಮಾಡಬಾರದು ಎಂಬ ಅರಿವು ಸಹ ಇರುವುದಿಲ್ಲ.
ದ್ವಿಚಕ್ರ ವಾಹನ ಚಲಾಯಿಸಿ ಅಪಘಾತ ಮಾಡಿದಾಗ ವಿದ್ಯಾರ್ಥಿಗಳ ಮೇಲೆಯೂ ಸಹ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದರು.
ಆದರಿಂದ ಕಾನೂನಿನ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ತಿಳಿದುಕೊಳ್ಳಬೇಕು ಎಂದರು.ವಿದ್ಯಾರ್ಥಿಗಳಿಗೆ ರಸ್ತೆಯ ಸುರಕ್ಷತಾ ಕ್ರಮಗಳ ಬಗ್ಗೆ ಅರಿವಿಲ್ಲದೆ ಇರುವುದು ಸಹ ಅಪಘಾತಗಳಿಗೆ ಕಾರಣವಾಗಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಅಧಿಕ ಸಿವಿಲ್ ನ್ಯಾಯಾಧೀಶರಾದ ಬಿ ಪ್ರಿಯಾಂಕ ಮಾತನಾಡಿ ,
ಯಾವುದೇ ವ್ಯಕ್ತಿ ತನ್ನ ಬಳಿ ಹಣವಿಲ್ಲವೆಂದು ತನಗೆ ನ್ಯಾಯ ದೊರಕುವುದಿಲ್ಲವೆಂದು ಚಿಂತಿಸುವ ಅಗತ್ಯವಿಲ್ಲ.
ಅದಕ್ಕಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿ ಇದೆ ಎಂದರು. ತಾಲ್ಲೂಕು ಸೇವಾ ಸಮಿತಿ ಮೂಲಕ ಉಚಿತವಾಗಿ ವಕೀಲರನ್ನು ನೇಮಿಸಿ ಕೊಡಲಾಗುವುದು ಎಂದರು.
ಆದ್ದರಿಂದ ಕಾನೂನಿನ ಅರಿವು ಎಲ್ಲರಿಗೂ ಅತಿ ಮುಖ್ಯ ಎಂದರು
ಯಾವುದಾದರೂ ತಪ್ಪು ಮಾಡಿ ನನಗೆ ಅದರ ಅರಿವಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಅದನ್ನು ಕೋರ್ಟ್ ಸಹ ಒಪ್ಪುವುದಿಲ್ಲ ಎಂದರು.
ಲೋಕ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ , ಕೇಸ್ ಗಳನ್ನು ಕ್ಲೋಸ್ ಮಾಡಿ ಕೋರ್ಟ್ ನ ಸಮಯ ಮತ್ತು ಹಣವನ್ನು ಉಳಿತಾಯ ಮಾಡಲು ಸಹಾಯಕವಾಗುತ್ತದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಟಿ ಹಚ್ಒ ಡಾಕ್ಟರ್ ಕಿರಣ್ ಮಾತನಾಡಿ,ಮಕ್ಕಳ ಮಾನಸಿಕ ಆರೋಗ್ಯವು ಸುತ್ತಮುತ್ತಲಿನ ಜನಾ ಮತ್ತು ವಾತಾವರಣದ ಮೇಲೆ ಅವಲಂಬಿತವಾಗಿರುತ್ತದೆ ಎಂದರು.
ಒಳ್ಳೆಯ ಪರಿಸರದಲ್ಲಿ ಬೆಳೆದರೆ ಒಳ್ಳೆಯ ಗುಣಗಳು, ಕೆಟ್ಟ ವ್ಯಕ್ತಿಗಳ ಪರಿಸರದಲ್ಲಿ ಕೆಟ್ಟ ಗುಣಗಳನ್ನು ಕಲಿಯುತ್ತಾರೆ.
ಹಾಗಾಗಿ ವಿದ್ಯಾರ್ಥಿಗಳು ಯಾವಾಗಲೂ ಸಹ ಉತ್ತಮ ಪರಿಸರದ ಲ್ಲಿ ಒಳ್ಳೆಯ ಗುಣಗಳನ್ನು ಕಲಿಯಬೇಕು ಎಂದರು.
ಕಾರ್ಯಕ್ರಮ ಉದ್ದೇಶಿಸಿ ವಕೀಲರಾದ ಜಯಸಿಂಹ ಕೆ ಆರ್ ಮಾತನಾಡಿ
ಕಾನೂನಿನಲ್ಲಿ ಎಲ್ಲರೂ ಸಮಾನರೆ, ಹೆಣ್ಣು ಮಕ್ಕಳ ಸಮಸ್ಯೆಗಳನ್ನು ಪತ್ತೆ ಹಚ್ಚಿ ಅವಳಿಗೆ ಪರಿಹಾರ ತಿಳಿಸಿಕೊಡುವಲ್ಲಿ ವಿಶ್ವಸಂಸ್ಥೆ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ರೂಪಿಸಿದೆ ಎಂದರು.
ಇಂದು ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದಾರೆ, ಹೆಣ್ಣೆಂದರೆ ಪರಿಸರ ಹೆಣ್ಣೆಂದರೆ ಸಂಸ್ಕೃತಿ, ಪ್ರಕೃತಿ ವಿನಾಶವಾದಾಗ ಮಾನವ ಕುಲ ನಾಶವಾಗುವುದು ಎಂದರು.
ಬ್ರೂಣ ಹತ್ಯೆ,ಲಿಂಗ ಪತ್ತೆ,, ಲಿಂಗ ಆಯ್ಕೆ, ಕಾನೂನಿನ ಪ್ರಕಾರ ಅಪರಾಧವೆಂದರು.ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆಯ ಬಗ್ಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ವಕೀಲ ಸಂಘದ ಅಧ್ಯಕ್ಷ
ಶೇಷ ನಂದನ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಸಣ್ಣೀರಪ್ಪ. ಕೋರ್ಟ್ ವೆಂಕಟೇಶ್.
ವೆಂಕಟೇಶ್ವರ ಆಂಗ್ಲಶಾಲೆಯ ಖಜಾಂಶಿ ಪರಂದಾಮ ರೆಡ್ಡಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ : ಶ್ರೀನಿವಾಸಲು. A