ದುರಸ್ತಿ ಕಾಣದ ಗುಂಡಾರ್ಲ ಹಳ್ಳಿಕೆರೆ……
ಪಾವಗಡ.,…. ಬರದ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ಪಾವಗಡ ತಾಲೂಕಿಗೆ ಕಳೆದೆರಡು ವರ್ಷಗಳಿಂದ ಉತ್ತಮವಾದ ರೀತಿಯಲ್ಲಿ ಮಳೆಯಾಗುತ್ತಿದ್ದು. ಗುಂಡಾರ್ಲ ಹಳ್ಳಿಕೆರೆ ಕೆರೆ ದುರಸ್ತಿ ಮಾಡಿಸುವಂತೆ 2019 ರಿಂದಲೂ ಅನೇಕ ಪ್ರತಿಭಟನೆಗಳು ನಡೆದರೂ ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ ಧೋರಣೆ ತೋರುತ್ತಿದ್ದಾರೆ ಎಂದು ಇಂದು ತಾಲೂಕು ಪಂಚಾಯಿತಿ ಕಚೇರಿಯ ಮುಂದೆ ಕೆರೆ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ನರಸಿಂಹ ರೆಡ್ಡಿ ಮಾತನಾಡುತ್ತಾ, ಗುಂಡಾರ್ಲಹಳ್ಳಿ ಕೆರೆ ಒಡೆದಿರುವುದರಿಂದ ಮಳೆ ನೀರು ವ್ಯರ್ಥವಾಗಿ ಹರಿದುಹೋಗುತ್ತವೆ. ಕೆರೆ ದುರಸ್ತಿ ಯಿಂದಾಗಿ ಬಾಲಮ್ಮ ನಹಳ್ಳಿ, ಕುರುಬರಹಳ್ಳಿ, ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಅನುಕೂಲವಾಗುತ್ತದೆ ಹಾಗೂ ಕೆರೆಯಲ್ಲಿ ನೀರು ನಿಲ್ಲುವುದರಿಂದ ಅಂತರ್ಜಲದ ಮಟ್ಟ ದಲ್ಲಿ ಏರಿಕೆಯಾಗುತ್ತದೆ. ಹಾಗೂ ರೈತಾಪಿ ವರ್ಗದವರಿಗೆ ಅನುಕೂಲವಾಗುತ್ತದೆ, ಶೀಘ್ರವೇ ಕೆರೆ ದುರಸ್ತಿ ಕಾರ್ಯ ನಡೆಯಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು .
ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶಾಸಕ ವೆಂಕಟರವಣಪ್ಪ, ತಹಶೀಲ್ದಾರ್ ವರದರಾಜು, ಕಾರ್ಯ ನಿರ್ವಹಣಾಧಿಕಾರಿ ಶಿವರಾಜಯ್ಯ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಶಾಸಕ ವೆಂಕಟರವಣಪ್ಪ ಪ್ರತಿಕ್ರಿಯಿಸಿ, ಎಂಜಿನಿಯರ್ ಮೂಲಕ ಸ್ಥಳ ಪರಿಶೀಲನೆ ನಡೆಸಿ ಕೆರೆ ದುರಸ್ಥಿ ಮಾಡಿಸಲಾಗುವುದು. ಎಂದು ತಿಳಿಸಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ, ನಿವೃತ್ತ ಮುಖ್ಯ ಶಿಕ್ಷಕ ನರಸಪ್ಪ, ಮುಖಂಡ ಜಿ ಎನ್ ಜಯಂತ್, ಜಿ.ಹೆಚ್ ತಿಪ್ಪೇಸ್ವಾಮಿ, ರಂಗನಾಥ, ಗ್ರಾಮ ಪಂಚಾಯತಿ ಅಧ್ಯಕ್ಷೆ ತ್ರಿವೇಣಿ ಗೋವಿಂದರಾಜ ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸಲು ಎ