IMG 20241030 WA0002

ಪಾವಗಡ : ದೊಮ್ಮತಮರಿ ಗ್ರಾಮಪಂಚಾಯತಿ ಗೆ ನೂತನ ಅಧ್ಯಕ್ಷರ ಆಯ್ಕೆ….!

DISTRICT NEWS ತುಮಕೂರು

ದೊಮ್ಮತಮರಿ‌ ಗ್ರಾಮಪಂಚಾಯತಿ ಅಧ್ಯಕ್ಷರ ಅವಿರೋಧ ಆಯ್ಕೆ.

ಪಾವಗಡ : ತಾಲ್ಲೂಕಿನ ದೊಮ್ಮತಮರಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ದೊಮ್ಮತಮರಿ ಗ್ರಾಮದ ಹನುಮಂತರಾಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಿಂದಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ
ಗಂಗಮ್ಮ ಕೃಷ್ಣಪ್ಪ ನವರ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿದ್ದು.ಅಧ್ಯಕ್ಷ ಸ್ಥಾನಕ್ಕೆ ದೊಮ್ಮತಮರಿ ಗ್ರಾಮದ ಹನುಮಂತರಾಯಪ್ಪ ಮಾತ್ರ ನಾಮ ಪತ್ರ ಸಲ್ಲಿಸಿದ್ದು ಇತರೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ತಹಶೀಲ್ದಾರ್ ವರದರಾಜು ರವರು ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಅವಿರೋಧ ಆಯ್ಕೆ ಪ್ರಕಟಿಸಿ ಹನುಮಂತರಾಯಪ್ಪ ಅವರಿಗೆ ಅಧಿಕಾರ ವಹಿಸಿಕೊಟ್ಟರು.

ದೋಮ್ಮತ ಮರಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 17 ಸದಸ್ಯರು ಇದ್ದು ಅಧ್ಯಕ್ಷರ ಆಯ್ಕೆಯಾಗುವ ವೇಳೆ ಕೇವಲ 12 ಸದಸ್ಯರು ಮಾತ್ರ ಹಾಜರಿದ್ದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಶಂಕರ್ ರೆಡ್ಡಿ, ಸಾಕಮ್ಮ, ನಾಗಮಣಿ, ಪದ್ಮಾವತಿ, ಗಂಗಾಧರಪ್ಪ, ಇವರು ಮಾತ್ರ ಚುನಾವಣೆ ಪ್ರಕ್ರಿಯೆಯಿಂದ ಹೊರಗೊಳಿದಿದ್ದರು.

ಈ ಸಂದರ್ಭದಲ್ಲಿ ರಂಗರಾಜು ಚುನಾವಣೆ ಶಾಖೆ ಪ್ರಥಮ ದರ್ಜೆ ಸಹಾಯಕರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ ಡಿ ಓ ರಂಗಧಾಮಪ್ಪ, ಕಂಪ್ಯೂಟರ್ ಶಶಾಂಕ್, ಶಿವಣ್ಣ ಮಾಜಿ ಅಧ್ಯಕ್ಷರು, ವಿಶ್ವೇಶ್ವರಯ್ಯ ಕಾಂಗ್ರೆಸ್ ಮುಖಂಡರು, ಆದಿ ನಾರಾಯಣಪ್ಪ ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷರು, ಶ್ರೀನಿವಾಸ್ ಯುವ ಮುಖಂಡರು, ಈಶ್ವರ್ ಯುವ ಮುಖಂಡರು. ಕೃಷ್ಣಪ್ಪ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು. ರಾಮಾಂಜಿ ಗ್ರಂಥಾಲಯ l ಮದ್ಲೇಟಪ್ಪ ಮತ್ತು ಗ್ರಾಮ ಪಂಚಾಯಿತಿಯ ಸಿಬ್ಬಂದಿಯವರು ಊರಿನ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

ವರದಿ : ಶ್ರೀನಿವಾಸಲು. A