ಆನೇಕಲ್ ಡಿ.03: ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಡಾ|| ಬಿ.ಆರ್.ಅಂಬೇಡ್ಕರ್ ರವರ 66ನೇ ಪರಿನಿಬ್ಬಾಣದ ದಿನದ ಅಂಗವಾಗಿ ಡಿಸೆಂಬರ್-06 ರಂದು ದಿ ಅಲುಮ್ನಿ ಸಭಾಂಗಣ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜ್ ಕೆ.ಆರ್.ಸರ್ಕಲ್ ಬೆಂಗಳೂರಿನಲ್ಲಿ ನಡೆಯುವ ರಾಜ್ಯದ ದಲಿತ ಸಂಘಟನೆಗಳ ಸ್ವಾಭಿಮಾನಿ ಒಕ್ಕೂಟ ರಾಜ್ಯ ಸಮಿತಿ ವತಿಯಿಂದ ವಿಚಾರ ಸಂಕಿರಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನವಾದ) ರಾಜ್ಯ ಮುಖಂಡ ಎಂ ಗೋವಿಂದರಾಜು ಹೇಳಿದ್ದಾರೆ.
ಇದು ಚಂದಾಪುರದ ಕೀರ್ತನ ಹೋಟೆಲ್ ನ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಈ ಮಾಹಿತಿ ನೀಡಿದರು.ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಈ ಸಂದರ್ಭದಲ್ಲಿ, ದೇಶ ಎಲ್ಲಾ ರಂಗಗಳಲ್ಲೂ ಅಧಃಪತನದತ್ತ ಸಾಗುತ್ತಿದೆ. ಸಂವಿಧಾನದ ಆಶಯಗಳು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳು ಕುಸಿಯುತ್ತಿವೆ. ಸಾಮಾಜಿಕ ನ್ಯಾಯ ಕನಸಿನ ಗಂಟಾಗುತ್ತಿದೆ. ನಿರುದ್ಯೋಗವು ಯುವಜನಾಂಗವನ್ನು ಹತಾಶೆಗೆ ದೂಡುತ್ತಿದೆ. ಕೋಮುವಾದದ ರಾಜಕೀಯ ವಿಜೃಂಭಿಸುತ್ತಿದೆ. ನ್ಯಾಯ ಕೇಳುವವರು ದೇಶ ದ್ರೋಹಿಗಳಾಗುತ್ತಿದ್ದಾರೆ. ಪ್ರಗತಿಪರತೆ, ಜಾತ್ಯತೀತತೆ ಅಪಹಾಸ್ಯಕ್ಕೊಳಗಾಗುತ್ತಿದೆ. ಸಮ ಸಮಾಜದ ಕನಸು ಬಿತ್ತಿದ ಬುದ್ಧ, ಬಸವ, ಅಂಬೇಡ್ಕರ್ ಅವರ ಸಿದ್ದಾಂತಗಳು ಮರೆಯಾಗಿ ಕೋಮು ವಿಷಯಗಳು ಮುನ್ನೆಲೆಗೆ ತರುತ್ತಿದ್ದಾರೆ. ಇಡೀ ದೇಶ ಕೋಮು ನಂಜಿನ ಮಾಯಾಜಾಲದೊಳಗೆ ಸಿಲುಕಿ ಮತಿ ಭ್ರಮಣೆಗೊಳಗಾದಂತೆ ವರ್ತಿಸುತ್ತಿದೆಂದು ಆರೋಪಿಸಿದರು.
ದೇಶದ ದುಡಿಯುವ ಜನಸಮುದಾಯಗಳಾದ ದಲಿತರು, ರೈತ ಸಮೂಹ , ಕಾರ್ಮಿಕವರ್ಗ, ಮಹಿಳಾ ಹಾಗು ಆದಿವಾಸಿ ಬುಡಕಟ್ಟು ಜನ ಸಮುದಾಯಗಳು ಹಸಿವು, ಅಸ್ಪಶ್ಯತೆ, ಅನಕ್ಷರತೆ, ಕೊಲೆ-ಸುಲಿಗೆ, ದೌರ್ಜನ್ಯಗಳಿಂದ ನರಳುವಂತಾಗಿದೆ.
ಹಾಗಾಗಿ ದೇಶದಲ್ಲಿ ಸ್ವಾತಂತ್ರ್ಯ ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಆಶಯಗಳನ್ನು ನಾಶಮಾಡುತ್ತಿರುವ ಸರ್ಕಾರದ ದುರಾಡಳಿತವನ್ನು ಖಂಡಿಸಿ ದಲಿತ ಸಂಘಟನೆಗಳ ಸ್ವಾಭಿಮಾನಿ ಒಕ್ಕೂಟ ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಡಿನ ಆದ್ಯಂತ ನೆಲೆಸಿರುವ ದಲಿತರು, ಪ್ರಗತಿಪರರು.ಚಿಂತಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆಂದರು.ದಲಿತ ಸಂಘಟನೆಗಳು ವಿವಿಧ ಬಣಗಳಾಗಿ ಬೇರೆ ಬೇರೆಯಾಗಿರಬಹುದು, ಆದರೆ ತನ್ನ ಮೂಲ ಸಿದ್ಧಾಂತಗಳನ್ನು ಇಟ್ಟುಕೊಂಡು ಹೋರಾಟ ಮಾಡಲು ಬದ್ಧವಾಗಿರುತ್ತವೆಂದರು.
ಸುದ್ದಿಗೋಷ್ಟಿಯಲ್ಲಿ ಸಂಘಟನೆಯ ರಾಜ್ಯ ಮುಖಂಡರಾದ ಎಂ.ಗೋವಿಂದರಾಜು, ದೊಮ್ಮಸಂದ್ರ ಮುನಿರಾಜು, ಮಾರುತಿ ನಾಯಕ್ ,ಹೆಚ್ ಹೊಸಹಳ್ಳಿ ವೇಣು ,ಸಿ.ಎಂ ಮುನಿರಾಜು, ಬನಹಳ್ಳಿ ಮುನಿಯಲ್ಲಪ್ಪ, ಮುರಳಿ ,ಗೋಪದ್ರ ವೆಂಕಟೇಶ್ ರಮೇಶ್ ಮಹಿಳಾ ನಾಯಕಿ ಶುಭ ,ಸುರೇಶ್ ಕೊತ್ತನೂರು, ಜೋಶ್ವ, ಜಿಗಣಿ ಹರಪನಹಳ್ಳಿ ದಲಿತ್ ನಾಗೇಶ್ ಇದ್ದರು.