IMG20211128142059 scaled

ಪಾವಗಡ : ಕನ್ನಡಭವನ ನಿರ್ಮಾಣ ವಾಗಬೇಕಿದೆ…!

DISTRICT NEWS ತುಮಕೂರು

ಪಾವಗಡ;- ಕನ್ನಡ ಕಟ್ಟುವ ಕೆಲಸಕ್ಕೆ ಹಣಕಾಸಿನ ಕೊರತೆ ಇಲ್ಲಾ ಅದರೆ ಕನ್ನಡ ಕಟ್ಟುವ ಮನಸ್ ಗಳ ಕೊರತೆ ಇದೆ, ವಾದವಿವಾದಗಳಿಗೆ ಆಸ್ಪದ ಇಲ್ಲದೆ ಕನ್ನಡಕ್ಕಾಗಿ ಕೈ ಎತ್ತುವ ಕಟ್ಟಾಳುಗಳನ್ನು ಗುರ್ತಿಸಿ ಜಿಲ್ಲೆಯಲ್ಲಿ ನೂತನ ಘಟಕಗಳನ್ನು ರಚಿಸಲಾಗುತ್ತದೆ ಎಂದು ನೂತನ ಜಿಲ್ಲಾ ಕ.ಸಾಪ. ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ತಿಳಿಸಿದರು.

ಭಾನುವಾರ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕ.ಸಾ.¥, ಅಜೀವ ಸದಸ್ಯರಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮತ ಚಲಾಯಿಸಿದ ಸದಸ್ಯರಿಗೆ ಕೃತಜ್ಷತೆಗಳನ್ನು ಸಲ್ಲಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಉತ್ತಮ ತಂಡ ಬೇಕಾಗಿದೆ, ಪ್ರಜಾಪ್ರಭುತ್ವದ ಆಶಯದಂತೆ ಎಲ್ಲರ ಅಭಿಪ್ರಾಯ ಪಡೆದು 10 ಜನರ ತಂಡದ ಹೆಸರನ್ನು ಸೂಚಿಸಿದರೆ ಅಭಿಪ್ರಾಯಗಳನ್ನು ಶೇಖರಿಸಿ ಹತ್ತು ತಾಲ್ಲೂಗಳಿಗೆ ಪ್ರವಾಸ ಮಾಡಿ ಘಟಕಗಳನ್ನು ರಚಿಸಿ, ಮುಂದಿನ 5 ವರ್ಷಗಳ ಅವದಿಯಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಅಯೋಜನೆ ಮಾಡೋಣ,

ಆಯಾ ತಾಲ್ಲೂಕುಗಳ ವಾತಾವೃನಕ್ಕೆ ಹೊಂದಿಕೊಳ್ಳುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೊಣ, ಚುನಾವಣೆಗೆ ನಿಂತಾಗ ಗೆಲ್ಲುವ ಯೋಚನೆ ಇತ್ತು ಹೀಗ ಗೆದ್ದಾಗ ಕಾರ್ಯಕ್ರಮಗಳನ್ನು ಮಾಡುವ ಸವಾಲು ನನ್ನ ಮುಂದೆ ಇದೆ, ತಾಲ್ಲೂಕಿನಲ್ಲಿ ಕನ್ನಡಭವನ ನಿರ್ಮಾಣ ವಾಗಬೇಕಿದೆ ತಾಲ್ಲೂಕಿಗೆ 20 ವರ್ಷಗಳ ಹಿಂದೆಯೆ ಹಸಿರು, ಹಾಗೂ ಸಾಕ್ಷರತಾ ಅಂದೊಲನದ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದೆ ಎಂದು ಮೆಲುಕು ಹಾಕಿದರು.

ಇತಿಹಾಸ ಸಂಶೊಧನಕಾರರಾದ ವಿ. ಆರ್. ಚೆಲುವರಾಜನ್ ಮಾತನಾಡಿ, ಕಳೆದ 5 ವರ್ಷಗಳಿಂದ ಕ.ಸಾ.ಪ. ಸದಸ್ಯತ್ವ ಯೊರೊಬ್ಬರಿಗೂ ನೀಡಿಲ್ಲಾ, ಕನ್ನಡ ದ ಸೈನಿಕರೆ ಇಲ್ಲಿಲ್ಲಾ, ಹೊಸ ಭಾಷಣಕಾರರನ್ನು ಸೃಷ್ಟಿ ಮಾಡಿಲ್ಲಾ, ಮಹಿಳೆಯರಿಗೆ ಸದಸ್ಯತ್ವ ನೀಡಿಲ್ಲಾ, ಮಹಿಳೆಯರಿಗೂ ಮತ್ತು ಪುರುಷರಿಗೆ ಸಮಾನ ಅವಕಾಶ ನೀಡಿಲ್ಲಾ,ತಾಲ್ಲೂಕಿನಲ್ಲಿ ಕನ್ನಡಭವನ ಕಟ್ಟಲು ಸಾದ್ಯವಾಗಿಲ್ಲಾ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ನಾಗಭರಣ ಸೇರಿ ಗಡಿ ಅಭಿವೃದ್ದಿಪ್ರಾಧಿಕಾರ ಮತ್ತು ಕನ್ನಡ ಸಂಸ್ಕøತಿ ಇಲಾಖೆಯ ಯಾವೊಬ್ಬ ಅಧಿಕಾರಿಗಳು ಪಾವಗಡಕ್ಕೆ ಬೇಟಿ ನೀಡಿಲ್ಲಾ, ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ, ಇಲ್ಲಿಯವರೆಗೂ ತಾಲ್ಲೂಕಿನ ಯಾವೊಬ್ಬ ಸಾಧಕರನ್ನು ಗುರ್ತಿಸಿ ಪ್ರಶ ಸ್ತಿ ನೀಡಿಲ್ಲಾ,ಇಡಿ ಕರ್ನಾಟಕ ಪಾವಗಡದ ಬಗ್ಗೆ ಗಮನಹರಿಸಬೇಕು, ಏಕೆಂದರೆ ಪಾವಗಡ ಇರುವುದು ಅಂದ್ರದಲ್ಲಿದೆ , ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.

ಸಾಹಿತಿಗಳಾದ ಡಾ. .ಎನ್. ಯೋಗೀಶ್, ಗಂಟಲಗೆರೆಸಣ್ಣಹೊನ್ನಯ್ಯ,ಮರಿಬಸಪ್ಪ, ಮಹದೇವಪ್ಪ, ಜಾನಪದ ಸಾಹಿತಿ ಸಣ್ಣನಾಗಪ, ಎಸ್.ಎಸ್.ಕೆ. ಸಂಗದ ಅಧ್ಯಕ್ಷರಾದ ಕೆ.ವಿ. ಶ್ರಿನಿವಾಸ್, ಮಾಜಿ ಆಂದ್ರಘಟಕ ಕ.ಸಾ.ಪ. ಅಧ್ಯಕ್ಷ ಹ.ರಾಮಚಂದ್ರಪ್ಪ, ಮಾಜಿ ಕ.ಸಾ.ಪ. ಅಧ್ಯಕ್ಷರಾದ ಅಂತರಗಂಗೆಶಂಕರಪ್ಪ, ನಿವೃತ್ತ ದೈಹಿಕ ಪ್ರಾದ್ಯಾಪಕ ಸಣ್ಣರಾಮರೆಡ್ಡಿ, ಹರಿಕೃಷ್ಣ, ಐ.ಎ.ನಾರಾಯಣಪ್ಪ,ಹೊ.ಮಾ. ನಾಗರಾಜ್, ನಿಕಟಪೂರ್ವ ಕ.ಸಾ.ಪ. ಅಧ್ಯಕ್ಷರಾದ ಆರ್. ಟಿ.ಖಾನ್ ಬ್ಯಾಡನೂರುಚೆನ್ನಬಸಣ್ಣ, ಮಾತನಾಡಿದರು.

ಈ ವೇಳೆ ಸಹನಾಶ್ರಿನಿವಾಸ್, ರೋಟರಿಪ್ರಭಾಕರ್, ಬಿ.ಈರಣ್ಣ,
ಫೊಟೊ;- 28 ಪಿವಿಜಿ 1 ಕ.ಸಾ.ಪ. ಗೆ ದತ್ತಿನಿಧಿ ನೀಡಲು ಒಪ್ಪಿದ ಅಜೀವದಸ್ಯರಾದ ಕಮಲ್ ಬಾಬು ರವರಿಗೆ ಅಭಿನಂದನೆ ಸಲಲಿಸುತ್ತಿರುವ ಕೆ.ಎಸ್.ಸಿದ್ದಲಿಂಗಯ್ಯ,
ಕಟ್ಟಾನರಸಿಂಹಮೂರ್ತಿ, ಸರ್ಕಾರಿ ಜೂನಿಯರ್ ಕಾಲೇಜು ಪ್ರಾಂಶುಪಾಲರಾದ ಬಸವಲಿಂಗಪ್ಪ, ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಪ್ರಮೋದ್ ಕುಮಾರ್, ಮತ್ತಿತರರು.

ವರದಿ: ಶ್ರೀನಿವಾಸುಲು ಎ