IMG 20211129 WA0001

ಪಾವಗಡ:ಹಾರ ತುರಾಯಿಗೆ ಬದಲು ಪುಸ್ತಕ ನೀಡಿ…!

DISTRICT NEWS ತುಮಕೂರು

ಹಾರ ತುರಾಯಿಗೆ ಬದಲು ಪುಸ್ತಕ ನೀಡಿ

ವೈ.ಎನ್.ಹೊಸಕೋಟೆ : ಕನ್ನಡದ ಕಾರ್ಯಕ್ರಮಗಳಲ್ಲಿ ಹೂವಿನ ಹಾರ ಬದಲು ಕನ್ನಡ ಪುಸ್ತಕ ನೀಡಿ ಎಂದು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು.

ಗ್ರಾಮದ ಸರ್ಕಾರಿ ಬಾಲಕರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಧಿಕೃತವಾಗಿ ಮೊದಲ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಸ್ಥಳೀಯ ಲೇಖಕರ ಕೃತಿಗಳನ್ನು ಪುಸ್ತಕಗಳನ್ನು ಕಾರ್ಯಕ್ರಮಗಳಲ್ಲಿ ನೀಡಿವುದರಿಂದ ಲೇಖಕರಿಗೆ ಆಧಾಯದ ಜೊತೆಗೆ ಇನ್ನಷ್ಟು ಪುಸ್ತಕ ಬರೆಯಲು ಪ್ರೇರಣೆ ದೊರೆತು ಸಾಹಿತ್ಯ ರಚನೆ ಹೆಚ್ಚಾಗುತ್ತದೆ ಎಂದರು.
ಚುನಾವಣೆ ಫಲಿತಾಂಶದ ವೇಳೆ ಮತಗಳ ಮೊದಲು ಮಾಹಿತಿ ದೊರೆತದ್ದು ವೈ.ಎನ್.ಹೊಸಕೋಟೆಯಿಂದ. ಇಲ್ಲಿ ಶೇ 82 ರಷ್ಟು ಮತಗಳನ್ನು ಹೋಬಳಿಯ ಮತದಾರರು ನೀಡಿದ್ದೀರಿ. ಇದಕ್ಕೆ ನಾನು ಚಿರಋಣಿ. ತೆಲುಗುಮಯವಾದ ಈ ಗಡಿನಾಡಿನಲ್ಲಿ ಜನತೆಯ ವಿಶ್ವಾಸದಂತೆ ನಾನು ಕನ್ನಡ ಸೇವೆ ಮಾಡುತ್ತೇನೆ. ವೈ ಎನ್ ಹೊಸಕೋಟೆ ಹೋಬಳಿ ಘಟಕ ಸಾಹಿತ್ಯ ಪರಿಷತ್ ಕಾರ್ಯಕ್ರಮಗಳಿಗೆ ಸದಾ ಬೆಂಬಲವಾಗಿರುತ್ತೇನೆ.
ಸಾಹಿತ್ಯ ಪರಿಷತ್ ಕಾರ್ಯಕ್ರಮಗಳಲ್ಲಿ ಎಲ್ಲಾ ವಲಯದ ಜನರನ್ನು ಸೇರಿಸುವ ಮೂಲಕ ಜನತೆಯ ಪರಿಷತ್ ಆಗಬೇಕು. ಸಾಹಿತ್ಯ ಸಮ್ಮೇಳನ ಸಮಾವೇಶಗಳ್ಳಿ ಮಂಡಿಸುವ ವಿಷಯಗಳ ದಾಖಲೀಕರಣವಾಗಬೇಕು. ಪರಿಷತ್ ಕಾರ್ಯಕ್ರಮಗಳಲ್ಲಿ ಯುವಜನತೆಗೆ ಭಾಗವಹಿಸಲು ಹೆಚ್ಚು ಒತ್ತು ನೀಡಬೇಕಾಗಿದೆ. ಗ್ರಂಥಾಲಯಗಳಲ್ಲಿ ಕನ್ನಡ ಪುಸ್ತಕ ಓದುಗರನ್ನು ಹೆಚ್ಚು ಮಾಡಬೇಕು ಕನ್ನಡ ಪುಸ್ತಕ ಸಂಗ್ರಹ ಹೆಚ್ಚು ಮಾಡಬೇಕು. ಈ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸುತ್ತಿದ್ದು, ಕಾರ್ಯಗತಗೊಳ್ಳಲಿದೆ ಎಂದರು.

ಇತಿಹಾಸ ಸಂಶೋಧಕ ಡಾ.ಯೋಗೀಶ್ವರಪ್ಪ ಮಾತನಾಡಿ ಪಾವಗಡ ತಾಲ್ಲೂಕು ಜಾನಪದ ಮತ್ತು ಇತಿಹಾಸದ ಖಣಜವಾಗಿದೆ. ಇಲ್ಲಿ ಸಂಶೋದಕರಿಗೆ ಬೇಕಾದಷ್ಟು ಅವಕಾಶಗಳಿದ್ದು, ಸಂಶೋದನೆಗಳು ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಕಸಾಪ ಕೆಲಸ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಲಾವಿದ ಕಂಟಲಗೆರೆ ಸಣ್ಣಹೊನ್ನಯ್ಯ, ಮಹದೇವಪ್ಪ, ಮರಿಬಸಪ್ಪ, ಇ.ವಿ.ಶ್ರೀಧರ, ಎನ್.ಆರ್.ಅಶ್ವಥ್ ಕುಮಾರ್, ಎನ್.ಜಿ.ರಾಮು, ಟಿ.ವಿ.ವೆಂಕಟೇಶ್, ಐ.ಎ.ನಾರಾಯಣಪ್ಪ, ಹೊ.ಮ.ನಾಗರಾಜು, ಹರಿಕೃಷ್ಣ, ಅಜಯ್ ಕುಮಾರ್ ಸೇರಿದಂತೆ ಪರಿಷತ್ತಿನ ಸದಸ್ಯರು ಇದ್ದರು.

ವರದಿ: ಸತೀಶ್