IMG 20211130 WA0020

ಪಾವಗಡ: ವಿಧಾನಪರಿಷತ್ ಚುನಾವಣೆ ಜೆಡಿ (ಎಸ್) ಅಭ್ಯರ್ಥಿ ಮತಯಾಚನೆ….!

DISTRICT NEWS ತುಮಕೂರು

 

ಪಾವಗಡ : – ಗ್ರಾಮಪಂಚಾಯಿತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಜೆ.ಡಿ.ಎಸ್ ಗೆ ಮತ ಹಾಕುವಂತೆ ಜೆ.ಡಿ.ಎಸ್ ವಿಧಾನಪರಿಷತ್ ಅಭ್ಯರ್ಥಿ ಅನಿಲ್ ಕುಮಾರ್ ಮನವಿ.

ಇಂದು ಪಾವಗಡ ಪಟ್ಟಣದ ಎಸ್ ಎಸ್ ಕೆ ಸಮುದಾಯದಲ್ಲಿ ತುಮಕೂರು ವಿಧಾನಪರಿಷತ್ ಚುನಾವಣೆಯ ಜೆ.ಡಿ.ಎಸ್ ಅಭ್ಯರ್ಥಿ ಅನಿಲ್ ಕುಮಾರ್ ಅವರ ಪರ ಮತಯಾಚನೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು.

ಈ ಕಾರ್ಯಕ್ರಮದಲ್ಲಿ ಜೆಡಿಎಸ್ ವಿಧಾನಪರಿಷತ್ ಅಭ್ಯರ್ಥಿಯಾದ ಅನಿಲ್ ಕುಮಾರ್ ಅವರು ಮಾತನಾಡುತ್ತಾ ಗ್ರಾಮ ಪಂಚಾಯತಿಗಳು ಸಣ್ಣ ಸರ್ಕಾರ ಇದ್ದ ಹಾಗೆ. ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಗ್ರಾಮಪಂಚಾಯತಿಗಳ ಸರ್ವತೋಮುಖ ಅಭಿವೃದ್ಧಿ ಮಾಡಲು ಜೆ.ಡಿ.ಎಸ್ ಗೆ ಮತ ನೀಡಬೇಕೆಂದು ತಿಳಿಸಿದರು.

ನನಗೆ ಮತ ನೀಡಿದರೆ ಹೆಚ್ಚಿನ ಅನುದಾನವನ್ನು ತಂದು ಗ್ರಾಮಪಂಚಾಯಿತಿಗಳ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸುತ್ತೇನೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಶಾಸಕರಾದ ತಿಮ್ಮರಾಯಪ್ಪ ನವರು ಮಾತನಾಡುತ್ತಾ. ತಾಲೂಕಿನಲ್ಲಿ ಬಡಜನರಿಗೆ ಬರಬೇಕಾದಂತಹ ಪೆಂಶನ್ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಪಾವಗಡದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಸರಿಯಾದ ಸಮಯದಲ್ಲಿ ನಡೆಯುತ್ತಿಲ್ಲ. ಇದಕ್ಕೆಸರ್ಕಾರದ ವೈಫಲ್ಯವೋ ಅಥವಾ ಸ್ಥಳೀಯ ಶಾಸಕರ ನಿರ್ಲಕ್ಷವೂ ಎಂದು . ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು.

ತಾಲೂಕಿನ ಜನರು ಸ್ಥಳೀಯ ಶಾಸಕರ ಕಾರ್ಯವೈಖರಿಯ ಬಗ್ಗೆ ತುಂಬಾ ಸಮಾಧಾನ ಹೊಂದಿದ್ದಾರೆ ಆದ್ದರಿಂದಲೇ ಪಾವಗಡ ತಾಲೂಕಿನ ಹೆಚ್ಚಿನ ಗ್ರಾಮ ಪಂಚಾಯತಿಗಳಲ್ಲಿ ಜನರು ಜೆಡಿಎಸ್ ಅಧಿಕಾರ ಹಿಡಿಯುವಂತೆ ಮಾಡಿದ್ದಾರೆ. ತಾಲೂಕು ಉತ್ತಮವಾದ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಜೆಡಿಎಸ್ ಗೆ ಮತವನ್ನು ಹಾಕಬೇಕೆಂದು ಕಾರ್ಯಕ್ರಮದಲ್ಲಿ ತಿಳಿಸಿದರು.

ತಾಲೂಕಿನ ಅಭಿವೃದ್ಧಿಯು ಕೇವಲ ಜೆಡಿಎಸ್ ನಿಂದಾಗಿ ಮಾತ್ರ ಸಾಧ್ಯ ಎಂದರು. ನಾಗಲಮಡಿಕೆ……….

ನಾಗಲಮಡಿಕೆಯಲ್ಲಿ ಸಭೆಯನ್ನು ಉದ್ದೇಶಿಸಿ ಆರ್.ಸಿ ಅಂಜಿನಪ್ಪ ಮಾತನಾಡುತ್ತಾ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಜಾತಿ ರಾಜಕಾರಣ ಮಾಡುವಲ್ಲಿ ಕಾಲ ಕಳೆಯುತ್ತಿದ್ದಾರೆ.. ಗ್ರಾಮ ಪಂಚಾಯತಿಯ ಯಾವುದೇ ಸದಸ್ಯರು .ಯಾವುದೇ ರೀತಿಯ ಜಾತಿ ರಾಜಕಾರಣಕ್ಕೆ. ಹಣಕ್ಕೆ. ಮೊರೆ ಹೋಗದೆ ಗ್ರಾಮಪಂಚಾಯಿತಿಗಳ ಅಭಿವೃದ್ಧಿಗಾಗಿ ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್ ಅವರಿಗೆ ಮತ ಹಾಕಬೇಕೆಂದು ಮನವಿ ಮಾಡಿದರು.

ತುಮಕೂರಿನಲ್ಲಿ ದೇವೇಗೌಡರ ಸೋಲಿಗೆ ನ್ಯಾಯ ಒದಗಿಸಲು. ತಾವೆಲ್ಲರೂ ಒಗ್ಗಟ್ಟಾಗಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ತಿಮ್ಮರಾಯಪ್ಪ. ಆರ್.ಸಿ ಅಂಜಿನಪ. ಈರಣ್ಣ. ಮಾನಂ ವೆಂಕಟಸ್ವಾಮಿ. ಮನು ಮಹೇಶ್. ವಸಂತ್. ಗೋಪಾಲ್. ಕಾವಲಗೆರೆ ರಾಮಾಂಜಿ. ಶಿವಕುಮಾರ್ ರಮೇಶ್. ಅಸಂಖ್ಯಾತ ಕಾರ್ಯಕರ್ತರು ಭಾಗವಹಿಸಿದ್ದರು……….