ಪಾವಗಡ ತಾಲ್ಲೂಕಿನ ಎಲ್ಲಾ ಪೈಂಟರ್‌ಗಳು ಹಾಗೂ ಬಡಗಿಗಳಿಗೆ ದಿನಸಿ ಕಿಟ್ ವಿತರಣೆ
ಪಾವಗಡ: – ಇಂದು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಎಂದಿನAತೆ ಈ ದಿನವೂ ಮತ್ತೊಂದು ವರ್ಗದ ಜನರಿಗೆ ದಿನಸಿ ಕಿಟ್‌ನ್ನು ವಿತರಣೆ ಮಾಡಲಾಯಿತು. ಸರಿಸುಮಾರು 80 ಬಡಗಿಗಳು ಹಾಗೂ 60 ಪೈಂಟರ್‌ಗಳು ಈ ಒಂದು ದಿನಸಿ ಕಿಟ್‌ನ್ನು ಸ್ವೀಕರಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಕೊರೊನಾ ಬಗ್ಗೆ ಜಾಗೃತಿಯನ್ನು ಮೂಡಿಸಿ ಪ್ರತಿಯೊಬ್ಬರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ವಿವರಿಸಲಾಯಿತು.
ದುರದೃಷ್ಟವಶಾತ್ ನೆರೆದವರಲ್ಲಿ ಕೇವಲ ಒಬ್ಬರು ಮಾತ್ರ ಲಸಿಕೆಯನ್ನು ಹಾಕಿಸಿಕೊಂಡಿದ್ದು ಕಂಡು ಬಂದಿತು. ಇದರಿಂದ ನೊಂದ ಪೂಜ್ಯ ಸ್ವಾಮಿ ಜಪಾನಂದಜೀ ರವರು ನೆರೆದವರಿಗೆ ಲಸಿಕೆಯ ಬಗ್ಗೆ ವಿವರಣೆ ನೀಡಿ ತಮ್ಮ ಆದಮ್ಯ ಕರ್ತವ್ಯವೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸುದೇಶ್ ಬಾಬು ರವರು ತಮ್ಮ ಅನುಭವ ಹಾಗೂ ಲಸಿಕೆಯ ಬಗ್ಗೆ ಇರುವ ಸಂದೇಹ ಹಾಗೂ ಅಪಪ್ರಚಾರದ ಬಗ್ಗೆ ಕೂಲಂಕುಶವಾಗಿ ವಿವರಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ವಕೀಲರಾದ ಶ್ರೀ ಯಜ್ಞನಾರಾಯಣ ಶರ್ಮ, ವಿವೇಕ ಬ್ರಿಗೇಡಿನ ಶ್ರೀ ದೇವರಾಜ ಲೋಕೇಶ್, ಶ್ರೀ ಗಿರೀಶ್, ಶ್ರೀ ಭರತ್ ರಾಮಮೂರ್ತಿ ಮತ್ತಿತರರು ಭಾಗಿಯಾಗಿದ್ದರು.