IMG 20211130 WA0031

ಹಾಸನಕ್ಕೆ ಐ ಐ ಟಿ ಬೇಕು – ದೇವೇಗೌಡರ ಮನವಿ…!

NATIONAL National - ಕನ್ನಡ

ನವ ದೆಹಲಿಯ: ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು

ಹಾಸನದಲ್ಲಿ ಐಐಟಿ ಸ್ಥಾಪನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದೆ ನಾನೇ ಪ್ರಧಾನಿಯವರ ಭೇಟಿಗೆ ಕಾಲಾವಕಾಶ ಕೇಳಿದ್ದೆ  ಮೊದಲಿನಿಂದಲೂ ಪ್ರಧಾನಿ ನನ್ನ ಜೊತೆ ಆತ್ಮೀಯವಾಗೆ ನಡೆದುಕೊಂಡಿದ್ದಾರೆ

IMG 20211130 WA0032

ಹಾಸನ ಕ್ಕೆ ಐ ಐ ಟಿ ಬೇಕು ಅಂತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೆ ಆದರೆ ಕೇಂದ್ರ ಶಿಕ್ಷಣ ಸಚಿವರು ಆಗುವುದಿಲ್ಲ ಎಂದಿದ್ದರು ಹಾಗಾಗಿ ಇವತ್ತು ಖುದ್ದು ಪ್ರಧಾನಿಗಳನ್ನು ಭೇಟಿಯಾಗಿ ವಿವರಿಸಿ ಮತ್ತೊಮ್ಮೆ ಮನವಿ ಮಾಡಿದೆ
ಸಚಿವೆ ಸ್ಮೃತಿ ಇರಾನಿ ಅವರ ಕಾಲದಿಂದಲೂ ಪತ್ರ ವ್ಯವಹಾರ ನಡೆಯುತ್ತಿದೆ

ಈ ಹಿಂದೆ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಮನವಿ ಮಾಡಿದ್ದೆ ಆದರೆ ಐಐಟಿ ಸ್ಥಾಪನೆ ಸಾಧ್ಯವಿಲ್ಲ ಎಂದು ಮರು ಪತ್ರ ಬರೆದಿದ್ದರು ಈ ಹಿನ್ನಲೆ ನೇರವಾಗಿ ಪ್ರಧಾನಿಗಳನ್ನ ಭೇಟಿ ಮಾಡಿ ಚರ್ಚಿಸಿದ್ದೇನೆIMG 20211130 WA0034

ಐ ಐ ಟಿ ಯೋಜನೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಕರ್ನಾಟಕದಲ್ಲಿದ್ದಾಗ ಮಾಡಿದ ಯೋಜನೆ ಇದು ಮತ್ತೆ
ಪ್ರಧಾನಿ ಮೋದಿಯವ್ರ ಬಳಿ ಚರ್ಚೆ ಮಾಡಿದ್ದೇನೆ, ಮೋದಿ ಅವರು ಪ್ರಹ್ಲಾದ್ ಜೋಷಿಯವ್ರ ಬಳಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ

ಆರೋಗ್ಯದ ಬಗ್ಗೆಯೂ ಪ್ರಧಾನಿ ಮೋದಿ ಭೇಟಿಯ ಬಗ್ಗೆ ಕೇಳಿದ್ರು ಮಂಡಿ ನೋವಿನ ಬಗ್ಗೆಯೂ ಅವರು ಕೇಳಿದ್ರು

ವಿಧಾನಪರಿಷತ್ ಚುನಾವಣೆ……

ತುಮಕೂರು ಮತ್ತು ಮಂಡ್ಯದಲ್ಲಿ ಪರಿಷತ್ ಚುನಾವಣೆಗೆ ಹೋಗಿ ನಾನು ಪ್ರಚಾರ ಮಾಡುತ್ತೆನೆ ಕುಮಾರಸ್ವಾಮಿ ಆರು ಕ್ಷೇತ್ರದಲ್ಲಿ ಹೋಗಿ ಪ್ರಚಾರ ಮಾಡುತ್ತಾರೆ. ಎಲ್ಲಾ ಕಡೆ ಅಭ್ಯರ್ಥಿಹಾಕಲು ನಮ್ಮ ಹತ್ತಿರ ಹಣವಿಲ್ಲ ಹಾಗಾಗಿ ಎಲ್ಲಾ ಕಡೆ ಅಭ್ಯರ್ಥಿಗಳನ್ನ ಹಾಕಿಲ್ಲ

ಪರಿಷತ್ ಚುನಾವಣೆ ವಿಚಾರ ರಾಜ್ಯದಲ್ಲಿ ಕುಮಾರಸ್ವಾಮಿ ಯಡಿಯೂರಪ್ಪ ತೀರ್ಮಾನ ಮಾಡ್ತಾರೆ ಗೊಂದಲವಾಗದಂತೆ ನಿರ್ಧಾರ ಮಾಡಿ‌ ಎಂದು ಹೇಳಿದ್ದೇನೆ

ಬಿಜೆಪಿಯವ್ರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡೊಣ ಮುಂದಿನ ಚುನಾವಣೆಗೆ ಇದೆ ಮೈತ್ರಿ ಮುಂದುವರೆಯುವ ಚರ್ಚೆ ನಡೆದಿಲ್ಲ

ಖರ್ಗೆಯವ್ರುಗೆ ಜೆಡಿಎಸ್ ಜೊತೆ ಹೊಂದಾಣಿಕ ಮಾಡಿಕೊಳ್ಳಬೇಕು ಎಂಬ ಮನಸ್ಸು ಇದೆ ಆದೆ ಮನಸ್ಸು ಬೇರೆ ನಾಯಕರಿಗೆ ಇಲ್ಲ

IMG 20211130 WA0033

ಖರ್ಗೆಯವರ ಮಾತು ಎಷ್ಟು ನಡೆಯುತ್ತೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಏನಿದೆಯೋ ಗೊತ್ತಿಲ್ಲ ನಾವು ಮೇಲೆ ಬಿದ್ದು ಮೈತ್ರಿ ಮಾಡಿಕೊಳ್ಳಿ ಎಂದು ಹೇಳಲು ಆಗಲ್ಲ

ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಕುಮಾರಸ್ವಾಮಿ ನಿರ್ಧಾರ ಮಾಡ್ತಾರೆ

3 ಮತ್ತು 4ನೇ ತಾರೀಖಿನಂದು ತುಮಕೂರಿನಲ್ಲಿ ಪ್ರಚಾರ ಮಾಡುತ್ತೆನೆ 5 ಮತ್ತು 6ನೇ ತಾರೀಖಿನಂದು ಮಂಡ್ಯದಲ್ಲಿ ಪ್ರಚಾರ ಮಾಡುತ್ತೆನೆ

ಬಿಬಿಎಂಪಿ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಗೆ ಬೆಂಬಲ ನೀಡಿದ್ದೆವು ಅವರು ಮೇಯರ್ ಆಗಿದ್ದರು, ನಾವು ಉಪಮೇಯರ್ ಆಗಿದ್ದೆವು ಅದೆಲ್ಲ ಮರೆತಿರಬಹುದು

ನನ್ನ ಜೀವನಾಧಾರಿತ ಪುಸ್ತಕ ಬಿಡುಗಡೆ ವಿಚಾರ
ಈಗಾಗಲೇ ಆನ್ ಲೈನ್ ಸಂಸ್ಥೆಗಳಾದ ಅಮೇಜಾನ್ ಮತ್ತು ಫ್ಲಿಪ್ ಕಾರ್ಡ್ ಗೆ ೬ ಸಾವಿರ ಪುಸ್ತಕ ನೀಡಿದ್ದಾರೆ

ಪಬ್ಲಿಷರ್ ಪುಸ್ತಕ ಬಿಡುಗಡೆಗಾಗಿ ವ್ಯಕ್ತಿಯನ್ನ ಫೈನಲ್ ಮಾಡುತ್ತಿದ್ದಾರೆ ಇನ್ನು ಯಾವತ್ತು ಪುಸ್ತಕ ಅಧಿಕೃತವಾಗಿ ಬಿಡುಗಡೆ ಅಂತ ದಿನಾಂಕ ಫಿಕ್ಸ್ ಆಗಿಲ್ಲ ಎಂದು ತಿಳಿಸಿದರು.