C202005113487

ಕಂಟೇನ್ಮೆಂಟ್ ಗೆ ಜೋನ್ ಗಳಲ್ಲಿ ಮಾತ್ರ ಜೂನ್ 30 ರ ವರೆಗೆ ಲಾಕ್ ಡೌನ್..!

National - ಕನ್ನಡ

ಕೇಂದ್ರ ಸರ್ಕಾರ  ಲಾಕ್‌ ಡೌನ್‌ ರ 5 ರ ಮಾರ್ಗ ಸೂಚಿ ಪ್ತಕಟಿಸಿದೆ,  ದೇಶಾಧ್ಯಂತ  ಇದ್ದ  ಲಾಕ್‌ ಡೌನ್‌ ತೆಗೆದು  ಹಾಕಿ ಕಂಟೇನ್‌ ನೆಂಟ್‌ ಜೋನ್‌ ಮಾತ್ತ ಸೀಮಿತಗೊಳಿಸಿ  ಆದೇಶಿಸಿದೆ. ಜೂನ್‌ 7 ರ ವರೆಗೆ ಲಾಕ್ ‌ಡೌನ್‌ 4 ಮುಂದುವರಿಕೆ,ಕರ್ಪ್ಯೂ ಅವಧಿ ಸಡಿಲಿಕೆ, ರಾಜ್ಯ ಸರ್ಕಾರದ ಮಾರ್ಗಸೂಚಿಯನ್ನು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಸೋಮವಾರ ಪ್ರಕಟಿಸಲಿದ್ದಾರೆ.

ಬೆಂಗಳೂರು ಮೇ 30 :-  ಕೊರೋನಾಸೋಂಕಿನಿಂದ ದೇಶಾಧ್ಯಂತ ಲಾಕ್‌ ಡೌನ್‌ ಮೇ 31 ಕ್ಕೆ ಕೊನೆಗೊಳ್ಳತ್ತಿರುವ ಹಿನ್ನೆಲೆಯಲ್ಲಿ . ಕೇಂದ್ರ ಸರ್ಕಾರ ಲಾಕ್‌ ಡೌನ್‌ 5 ರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕಂಟೇನ್‌ ಮೆಂಟ್‌ ಜೋನ್‌ ಗಳಿಗೆ ಮಾತ್ರ ಜೂನ್‌ 30 ರ ವರೆಗೆ ಲಾಕ್‌ ಡೌನ್‌ ಮುಂದುವರೆಸಿದೆ.  ಕಂಟೇನ್‌ ಮೆಂಟ್‌ ಜೋನ್‌ ಹೊರತು ಪಡಿಸಿ ಬೇರೆ  ಪ್ರದೇಶಗಳಲ್ಲಿ ಎಲ್ಲಾ ಚಟುವಟಿಕೆಗಳಿಗೆ  ಗ್ರೀನ್‌ ಸಿಗ್ನಲ್‌ ನೀಡಿದೆ.  ಕರ್ಫ್ಯೂ ಅವಧಿ ಕಡಿಮೆ ಮಾಡಿ, ಬೆಳ್ಳಿಗ್ಗೆ  5 ಗಂಟೆ ಯಿಂದ ರಾತ್ರಿ 9 ರ ವರೆಗೆ  ಚಟುವಟಿಕೆಗಳನ್ನು ಮಾಡಲು ಅನುಮತಿಸಿದೆ.

ಹೊಸ ಮಾರ್ಗಸೂಚಿ  ಪ್ರಮುಖ ಅಂಶಗಳು

ಮೊದಲ ಹಂತ-  ಜೂನ್‌ 8 ರಿಂದ  ತೆರೆಯಲು ಅನುಮತಿ ನೀಡಿರುವ  ಕಾರ್ಯ ಚಟುವಟಿಕೆಗಳು

  • ದೇವಸ್ಥಾನ, ಮಸೀದಿ , ಚೆರ್ಚ ಓಪನ್‌‌,
  • ಹೋಟಲ್ ರೆಸ್ಟೋರೆಂಟ್‌‌ ಸೇರಿದಂತೆ ಹಾಸ್ಪಿಟಾಲಿಟಿ  ಸೇವೆಗಳ ಆರಂಭ
  • ಶಾಪಿಂಗ್‌ ಮಾಲ್‌ ಓಪನ್.‌

ಎರಡನೇ ಹಂತ

ಕೇಂದ್ರ ಮಾರ್ಗಸೂಚಿ ಪ್ರಕಾರ  ಎರಡನೆ ಹಂತದಲ್ಲಿ  ಶಾಲಾ ಕಾಲೇಜ್‌, ಕೋಚಿಂಗ್‌ ಸೆಂಟರ್‌ ಗಳು ಪ್ರಾರಂಭ ಕ್ಕೆ  ರಾಜ್ಯ ಸರ್ಕಾರಗಳು ಪೋಶಕರೊಂದಿಗೆ ಸಮಾಲೋಚಿಸಿ   ಜುಲೈ  ತಿಂಗಳಲ್ಲಿ  ತೆರೆಯಲು ತೀರ್ಮಾನಿಸ ಬಹುದಾಗಿದೆ.

ಮೂರನೆ ಹಂತ‌ : ಕೊರೋನಾ ಸೋಂಕಿನ ಪರಿಸ್ಥಿತಿ ಅವಲೋಕಿಸಿ ತೀರ್ಮಾನ.

  • ಸಿನಿಮಾ ಹಾಲ್‌, ಮೆಟ್ರೋ ರೈಲು , ಸಮಾರಂಭಗಳು, ಆಡಿಟೋರಿಯಮ್‌ ಗಳು
  • ಅಂತರ್‌ ರಾಷ್ಟ್ರೀಯ ಪ್ರಯಾಣ, ಸ್ವಿಮಿಂಗ್‌ ಪೂಲ್,
  • ಧಾರ್ಮಿಕ ಸಮಾರಂಭಗಳು/ ರಾಜಕೀಯ ಸಮಾವೇಶಗಳು/ ಕ್ರೀಡಾ ಚಟುವಟಿಕೆಗಳು/ ಎಂಟರ್ ಟೈನ್‌ ಮೆಂಟ್‌ ಪಾರ್ಕಗಳು/  ಬೃಹತ್‌ ಸಮಾವೇಶಗಳು.

WhatsApp Image 2020 05 30 at 7.19.07 PM             WhatsApp Image 2020 05 30 at 7.19.07 PM 1