IMG 20211224 WA0018

ಪಾವಗಡ: ರೈತರ ಬಾಳು ಹಸನಾಗಿಸಲು ಪ್ರತಿಯೊಬ್ಬರು ಸಹಕಾರ ಅಗತ್ಯ….!

DISTRICT NEWS ತುಮಕೂರು

ಪಾವಗಡ: ಹಸಿವು ನೀಗಿಸುವ ರೈತರ ಬಾಳು ಹಸನಾಗಿಸಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ವೈದ್ಯ ಡಾ.ಶ್ರೀಕಾಂತ್ ತಿಳಿಸಿದರು. ಪಟ್ಟಣದಲ್ಲಿ ಗುರುವಾರ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಷ್ಟ, ನಷ್ಟದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸಾಲ ಮಾಡಿ ಬೆಳೆ ಬೆಳೆಯುವ ರೈತರಿಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ. ರೋಗ, ಕೀಟ ಬಾಧೆಯಿಂದ ಬೆಳೆಗಳು ಹಾನಿಯಾಗುತ್ತವೆ. ಜನತೆಯ ಹಸಿವು ನೀಗಿಸಲು ಹಗಲಿರುಳು ಕಷ್ಟ ಪಡುವ ರೈತರ ಉನ್ನತಿಗಾಗಿ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದರು.
ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆದಿರುವುದು ರೈತರಿಗೆ ಸಂದ ಜಯ. ರೈತರೆಲ್ಲರೂ ಒಂದಾದರೆ ಸರ್ಕಾರವನ್ನು ಮಣಿಸಬಹುದು ಎಂಬುದು ಸಾಬೀತಾಗಿದೆ ಎಂದು ತಿಳಿಸಿದರು.
ರೈತ ಮುಖಂಡ ಗಂಗಾಧರನಾಯ್ಡು, ಸರ್ಕಾರಗಳು ರೈತರ ಏಳ್ಗೆಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸಬೇಕು ಎಂದರು.
ರೈತ ಮಹಿಳೆ ವೆಂಕಟಲಕ್ಷ್ಮಿ, ರಾತ್ರಿ ಹಗಲು ಕಷ್ಟಪಟ್ಟರೂ ವ್ಯವಸಾಯದಿಂದ ಸಿಗುವ ಪ್ರತಿಫಲ ಕಡಿಮೆ. ಕುಟುಂಬ ಸಮೇತ ದುಡಿದರೂ ಆದಾಯ ಮಾತ್ರ ಶೂನ್ಯ ಎಂದು ಬೇಸರ ವ್ಯಕ್ತ ಪಡಿಸಿದರು.
ರೈತ ಪವನ್ ರಾಜ್, ಹೆಲ್ಪ್ ಸೊಸ್ಯಟಿ ಅಧ್ಯಕ್ಷ ಮಾನಂ ಶಶಿಕಿರಣ್, ರೋಟರಿ ಸಂಸ್ಥೆ ಕಾರ್ಯದರ್ಶಿ ಸತ್ಯಲೋಕೇಶ್ ಮಾತನಾಡಿದರು.
ರೋಟರಿ ಕ್ಲಭ್ ಅಧ್ಯಕ್ಷ ಶ್ರೀಧರ್ ಗುಪ್ತಾ, ವೀರಮ್ಮನಹಳ್ಳಿ ಲೋಕೇಶ್, ಅನಿಲ್ ಕುಮಾರ್, ಸಾಯಿಕೃಷ್ಣಾರೆಡ್ಡಿ, ಶಶಿಕಲಾ, ಆದಿಕೇಶವ್, ಗೋವಿಂದ್, ರಾಕೇಶ್ ಉಪಸ್ಥಿತರಿದ್ದರು.

ವರದಿ: ಶ್ರೀನಿವಾಸುಲು ಎ