ರಾಜ್ಯ ಪಠ್ಯಕ್ರಮ ಎಲ್ಲಿದೆ…?
ಪಾವಗಡ: ಗುಣಮಟ್ಟದ ಶಿಕ್ಷಣ ಎಲ್ಲಿದೆ…?
ಖಾಸಗಿ ಶಾಲೆಗಳ ಶಿಕ್ಷಕರು ವಿದ್ಯಾರ್ಹತೆ ಹೊಂದಿದ್ದಾರ….?
ಖಾಸಗಿ ಶಾಲೆಗಳನ್ನು ಸ್ವತಂತ್ರ ಶಾಲೆಗಳು ಎಂದು ಕರೆಯಲಾಗುತ್ತದೆ, ಆದರೆ ಕೆಲವು ಖಾಸಗಿ ಶಾಲೆಗಳು ಸರ್ಕಾರದಿಂದ ಹಣಕಾಸಿನ ನೆರವು ಪಡೆಯುವುದರಿಂದ, ಅವು ಅನುದಾನಿತ ಅಥವಾ ಅನುದಾನರಹಿತ ಶಾಲೆಯಾಗಿರಬಹುದು. ಆದ್ದರಿಂದ, ಕಟ್ಟುನಿಟ್ಟಾದ ಅರ್ಥದಲ್ಲಿ, ಖಾಸಗಿ ಶಾಲೆಗಳು ಅನುದಾನ ರಹಿತ ಸ್ವತಂತ್ರ ಶಾಲೆಯಾಗಿದೆ.ದೇಶದಲ್ಲಿ ಶಿಕ್ಷಣ ಎಂಬುದು ಒಂದು ದೊಡ್ಡ ವ್ಯಾಪಾರ ಉದ್ಯಮವಾಗಿದೆ. ಗುಣಮಟ್ಟದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಯನ್ನು ವಿದ್ಯಾರ್ಥಿಗಳ ಪೋಷಕರಿಂದ ವಸೂಲಿ ಮಾಡುತ್ತಿದ್ದಾರೆ.
ಆಡಳಿತ ಮಂಡಳಿ :
ನಮ್ಮನ್ನು ಆಳುವ ಸರ್ಕಾರಗಳು ಶಿಕ್ಷಣವೆಂಬ ಉಚಿತ ಗ್ಯಾರೆಂಟಿಯನ್ನು ಕೊಡಬೇಕು.ಆದರೆ ಇದು ಸಾಧ್ಯವಿಲ್ಲದ ಮಾತು ಯಾಕೆ…? ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಒಂದು ದೊಡ್ಡ ಮಾಫಿಯಾ. ಶಾಲೆ- ಕಾಲೇಜು – ಆಸ್ಪತ್ರೆಗಳನ್ನು ನಡೆಸುವ ಬಹಳಷ್ಟು ಆಡಳಿತ ಮಂಡಳಿಗಳು ರಾಜಕೀಯ ವ್ಯಕ್ತಿಗಳದ್ದು ಆಗಿರುತ್ತವೆ. ಇವರ ಪ್ರಭಾವದಿಂದ ದೇಶದ ಜನತೆ ಗೆ ಉಚಿತ ಶಿಕ್ಷಣ ದ ಗ್ಯಾರೆಂಟಿ – ಉಚಿತ ಆರೋಗ್ಯ ದ ಗ್ಯಾರೆಂಟಿ ಎಂದಿಗೂ ಸಿಗುವುದಿಲ್ಲ….! ಬಡವರು- ಬಡವಾರಗಿಯೆ ಇರಬೇಕು ಎನ್ನುವುದು ಇಂದಿನ ಸರ್ಕಾರಗಳ ನೀಡುತ್ತಿರುವ ಗ್ಯಾರಂಟಿ…..!
ಪಾವಗಡ: ಗುಣಮಟ್ಟದ ಶಿಕ್ಷಣ ಎಲ್ಲಿದೆ…?
ಪ್ರೋ. ನಂಜುಂಡಪ್ಪ ಅವರ ವರದಿ ಪ್ರಕಾರ ಪಾವಗಡ ಹಿಂದುಳಿದ ತಾಲ್ಲೂಕು, ಶೈಕ್ಷಣಿ ವ್ಯವಸ್ಥೆಯಲ್ಲಿ ಯೂ ಬಹಳಷ್ಟು ಹಿಂದುಳಿದ ತಾಲ್ಲೂಕಾಗಿದೆ. ಗುಣಮಟ್ಟದ ಶಿಕ್ಷಣ ತಾಲ್ಲೂಕಿನಲ್ಲಿ ಸಿಗುತ್ತಿದೆಯಾ ಎಂಬ ಪ್ರಶ್ನೆಯನ್ನು ಪ್ರತಿಯೋಬ್ಬ ಪೋಷಕರು ಯೋಚಿಸಬೇಕು….?
ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಕರ್ಮಕಾಂಡ ದ ಕಥೆ ಕೇಳಿದರೆ ನಿಜಕ್ಕೂ ಪ್ರತಿ ಯೊಬ್ಬರು ತಲೆ ತಗ್ಗಿಸುವ ವಿಷಯ. ಬರದ ನಾಡಿನಲ್ಲಿ ಗುಣಮಟ್ಟದ ಶಿಕ್ಷಣ ವಿಲ್ಲದೆ ಪರಿತಪಿಸುವ ಸ್ಥಿತಿ ಇದೆ. ತಾಲ್ಲೂಕಿನ ಹಣವಂತರು ತಮ್ಮ ಮಕ್ಕಳನ್ನು ನೆರಯ ಆಂಧ್ರ , ತುಮಕೂರು- ಬೆಂಗಳೂರುಗಳಿಗೆ ಸೇರಿಸುತ್ತಾರೆ. ನವೋದಯ ಶಾಲೆ ಗಳಿಗೆ ಸೇರಿಸಲು ಕೆಲವರು ಪ್ರಯತ್ನಿಸುತ್ತಾರೆ ಪ್ರವೇಶ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬೇಕಾದರೆ ಹಣಬಲವಿರಬೇಕು. ಪರೀಕ್ಷೆಯಲ್ಲಿ ನಕಲು ಮಾಡಿಸುವ ಕಾಯಕ ಕೆಲವು ಶಿಕ್ಷಕರದ್ದು – ಈ ಕೆಲಸಕ್ಕೆ ಶಿಕ್ಷಣ ಇಲಾಖೆಯ ಸಿಬ್ಬಂದಿಯ ಒಂದು ದೊಡ್ಡ ಮಾಫಿಯ ಇದೆ. ಇವರಿಗೆ ಹಣ ಬೇಕು ಅಷ್ಠೆ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇಲ್ಲ.
ರಾಜ್ಯ ಪಠ್ಯ ಕ್ರಮ ಪದ್ದತಿ ಎಲ್ಲಿ ಜಾರಿಯಲ್ಲಿದೆ…?
ಪಾವಗಡ ತಾಲ್ಲೂಕಿನಲ್ಲಿ 28 ಖಾಸಗಿ ಶಾಲೆಗಳು ನೊಂದಾವಣೆ ಯಾಗಿದೆ ಈ ಎಲ್ಲಾ ಶಾಲೆಗಳು ರಾಜ್ಯ ಪಠ್ಯಕ್ರಮ ದಂತೆ.ಶಾಲೆ ನಡೆಸುತ್ತೇವೆ ಎಂದು ಅನುಮತಿ ಪಡೆದಿವೆ ಆದರೆ ಬಹಳಷ್ಟು ಶಾಲೆಗಳಲ್ಲಿ ರಾಜ್ಯ ಪಠ್ಯಕ್ರಮದಂತೆ ಪಾಠ ಮಾಡುತ್ತಿಲ್ಲ. ಬಾಂಬೆ ಅಥವಾ ಹೈದರಾಬಾದ್ ಖಾಸಗಿ ಕಂಪನಿಯ (ಲೀಡ್) ಪುಸ್ತಕಗಳನ್ನು 1 ರಿಂದ 6 ನೇ ತರಗತಿಯ ವರೆಗಿನ ಮಕ್ಕಳಿಗೆ ನೀಡಿ ಪಾಠ ಮಾಡುತ್ತಿದ್ದಾರೆ. ಯಾಕಪ್ಪ ಈ ರೀತಿ ಮಾಡುತ್ತಿದ್ದಾರೆ ಅಂದರೆ. ರಾಜ್ಯ ಪಠ್ಯಕ್ರಮ ದ ಪುಸ್ತಕಗಳು ಕಡಿಮೆ ಧರ ಕ್ಕೆ ಸಿಗುತ್ತವೆ ಅ ಪುಸ್ತಕಗಳನ್ನು ನೀಡಿ ಪೋಷಕರಿಂದ ಹಣ ಲೂಟಿ ಹೊಡೆಯಲು ಆಗುವುದಿಲ್ಲ.
ಖಾಸಗಿ ಕಂಪನಿಯ ಪುಸ್ತಕ,ನೋಟ್ ಬುಕ್ ಮತ್ತು ಡೊನೇಷನ್, ಟ್ಯೂಷನ್ ಫೀಜ್ ಹೆಸರಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಯ ಪೋಷಕರಿಂದ ಸಾವಿರಾರು ರೂಪಾಯಿ ಹಣ ವಸೂಲಿ ಮಾಡುತ್ತಾರೆ.
ಪಾವಗಡ ಶಿಕ್ಷಣ ಪದ್ಧತಿಯ ಬಗ್ಗೆ ಬಿ.ಇ.ಒ ಉತ್ತರವೇನು….?
-
ಗುಣಮಟ್ಟದ ಶಿಕ್ಷಣ ವಿದೆಯಾ…? ರಾಜ್ಯ ಪಠ್ಯಕ್ರಮ ದಂತೆ ಶಾಲೆಗಳು ನಡೆಯುತ್ತಿವೆಯಾ….?
-
ಸರ್ಕಾರಿ ನಿಯಮದಂತೆ ಅರ್ಹತೆ ಹೊಂದಿರುವ ಶಿಕ್ಷಕರನ್ನು ನೇಮಿಸಿಕೊಂಡಿದ್ದಾರಾ…?
-
ಸರ್ಕಾರಿ ಆದೇಶಗಳಂತೆ ಶಾಲಾ ಕಟ್ಟಡ – ಭದ್ರತೆ ಗಳು – ಮೂಲಭೂತ ಸೌಕರ್ಯ ಗಳನ್ನು ನೀಡಿದ್ದಾರಾ…
ಪಾವಗಡ : ಕ್ಷೇತ್ರ ಶಿಕ್ಷಣ ಇಲಾಖೆ ಕೆಲಸ ವೇನು…!
ರಾಜ್ಯಪಠ್ಯಕ್ರಮದಲ್ಲಿ ಶಾಲೆ ನೆಡೆಸುತ್ತೇವೆ ಎಂದು ಅನುಮತಿ ಪಡೆದ ಬಹಳಷ್ಟು ಶಾಲೆಗಳು ಈ ಕ್ರಮ ವನ್ನು ಅನುಸರಿಸದೆ ಖಾಸಗಿ ಪಬ್ಲಿಷರ್ಸ್ ಪುಸ್ತಕಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಬಹಳಷ್ಟು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರು ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಎಲ್ಲಾ ಸನಸ್ಯೆ ಗೆ ಉತ್ತರಿಸಿ ಬೇಕಾದ ಶಿಕ್ಷಣ ಇಲಾಖೆ ಮೌನಕ್ಕೆ ಜಾರಿದೆ. ಬಿ ಆರ್.ಸಿ, ಸಿಆರ್ ಪಿ ಇವರು ಪರಿಶೀಲನೆಗೆ ತೆರಳುವ ಮಂದಿ ಈವರಿಗೆ ಲಕ್ಷೀಕಟಾಕ್ಷ ಸಿಕ್ಕರೆ ಸಾಕು – ರಾಜ್ಯ ಪಠ್ಯ ಕ್ರಮ ಯಾಕೆ ಬೇಕು….?
ಖಾಸಗಿ ಶಾಲೆಗಳ ಶಿಕ್ಷಕರು ವಿದ್ಯಾರ್ಹತೆ ಹೊಂದಿದ್ದಾರ….?
- 1 ರಿಂದ 4 ತರಗತಿಯವರೆಗೆ –ಟಿ.ಸಿ.ಎಚ್ ಓದಿರಬೇಕು
- 5 - 6 ಮತ್ತು 7 ತರಗತಿ ಮಕ್ಕಳಿಗೆ ಪಾಠ ಮಾಡಬೇಕಾದರೆ – ಟಿ.ಸಿ.ಎಚ್ ಮತ್ತು ಟಿಟ್ ಟ್ರನಿಂಗ್ ಮಾಡಿರಬೇಕು. ( ಶಿಕ್ಷಕರ ವಿದ್ಯಾರ್ಹತೆ ಯ ಪರೀಕ್ಷೆ)
- 8-9 ಮತ್ತು 10 ನೇ ತರಗತಿ ಪಾಠ ಮಾಡಲು – ಬಿ ಎ, ಬಿಎಸ್ಸಿ ಜೊತೆ ಬಿಎಡ್ ಓದಿರಬೇಕ
ಬಿ.ಇ.ಒ ಕಚೇರಿಗೆ ಬದ್ಧತೆ ಇದೆಯಾ…!
ಕಳೆದ ವರ್ಷ ದ ಕೊನೆಯಲ್ಲಿ ಸಪ್ತಸ್ವರ ಮಾದ್ಯಮದಿಂದ – ತಾಲ್ಲೂಕಿನಲ್ಲಿ ಖಾಸಗಿ ಶಾಲೆಗಳಲ್ಲಿ ರಾಜ್ಯ ಪಠ್ಯಕ್ರಮದಲ್ಲಿ ಪಾಠಗಳನ್ನು ನಡೆಸುತ್ತಿಲ್ಲ. ಎಂಬ ಮಾಹಿತಿಯನ್ನು ತಿಳಿಸಿದ್ದೆವು. ನಂತರ ಅವರು ಒಂದು ಶಾಲೆ ಗೆ ಪರಿಶೀಲನೆಗೆ ಹೋಗುತ್ತಾರೆ. ನಂತರ ನಮಗೆ ಬಂದ ಮಾಹಿತಿ ಪ್ರಕಾರ ಶಾಲೆಯ ಆಡಳಿತ ಮಂಡಳಿಯಿಂದ ಲಕ್ಷೀಕಟಾಕ್ಷ ಬಿ ಇ.ಒ ಕಚೇರಿಯ ಸಿಬ್ಬಂದಿಗಳಿ ಗೆ ತಲುಪಿತು ನಂತರ ಸುಮ್ಮನೆಯಾದರು, ಎಂಬ ಅಂಶ ನಮಗೆ ಕೆಲ ಮೂಲಗಳಿಂದ ತಿಳಿದುಬಂದಿದೆ..
ಖಾಸಗಿ ಶಾಲೆಗಳು ರಾಜ್ಯ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಶಾಲೆಗಳು ನಡೆಸುತ್ತಿದ್ದರು. ಅವುಗಳನ್ನು ನಿಯಂತ್ರಣದಲ್ಲಿ ಇಡಬೇಕಾದ ಕ್ಷೇತ್ರ ಶಿಕ್ಷಣ ಇಲಾಖೆ ಮತ್ತು ಡಿ ಡಿ ಪಿ ಐ ಮಧುಗಿರಿ ಅವರು ಕಣ್ನುಮುಚ್ಚಿ ಕುಳಿತಿದ್ದಾರೆ. ಇಲ್ಲಿ ಬ್ರಷ್ಟಾಚಾರ ವಾಸನೆ ಕೇಳಿಬರುತ್ತಿದೆ….?
ಪಠ್ಯಕ್ರಮದ ವಿಷಯವನ್ನು ಸಪ್ತಸ್ವರ ಮಾದ್ಯಮ ಯಾಕೆ ಮುನ್ನೆಲೆಗೆ ತಂದಿದೆ….!
ಇಂದು ಪಾವಗಡ ತಾಲ್ಲೂಕಿನಲ್ಲಿ ಊತ್ತಮ ಶಿಕ್ಷಣ ವ್ಯವಸ್ಥೆಗಳಿಲ್ಲ. ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಶಾಲೆ ಆರಂಭ ವಾದಾಗ ಒಂದು ಪುಸ್ತಕ ( ಲೀಡ್) ಕೊಡುತ್ತಾರೆ, ನವಂಬರ್ ಅಥವಾ ಡಿಶಂಬರ್ ನಲ್ಲಿ ರಾಜ್ಯ ಪಠ್ಯ ದ ಪುಸ್ತಕ ನೀಡಿ ಈ ಪುಸ್ತಕಗಳನ್ನು ಓದಿ ಪರೀಕ್ಷೆಗೆ ಸಿದ್ದರಾಗಲು ತಿಳಿಸುತ್ತಾರೆ. ಗೊಂದಲಕ್ಕೆ ಮಕ್ಕಳು ಗುರಿಯಾಗುತ್ತಿದ್ದಾರೆ. ಮಕ್ಕಳಿ ಗೆ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸುವ ಕೆಲಸ ಸಪ್ತಸ್ವರ ಮಾದ್ಯಮ ಮಾಡುತ್ತಿದೆ….
ಪ್ರತಿಯೊಬ್ಬ ಪೊಷಕರು ತಮ್ಮ ಮಕ್ಕಳಿಗೆ ಪಠ್ಯ ವಿಷಯ ದಲ್ಲಿ ನಡೆಯುತ್ತಿರುವ ಅನ್ಯಾಯ ತಿಳಿಯಬೇಕು….! ಖಾಸಗಿ ಶಾಲೆಗಳು ರಾಜ್ಯಪಠ್ಯಕ್ರಮದ ಅನುಮತಿ ಪಡೆದಿದ್ದು ಆ ನಿಯಮದಂತೆ ಶಾಲೆಯಲ್ಲಿ ಪಾಠಗಳನ್ನು ಮಾಡುವುದಿಲ್ಲ ಪಬ್ಲಿಷರ್ಸ್ ( ಲೀಡ್) ಪುಸ್ತಕಗಳಂತೆ ಪಾಠಗಳನ್ನು ಮಾಡುತ್ತಾರೆ.
ಸರ್ಕಾರ ಐದು,ಎಂಟು, ಒಂಭತ್ತನೆ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ತೀರ್ಮಾನಿಸುತ್ತದೆ. ಪರೀಕ್ಷೆಯ ಪ್ರಶ್ನೆಪತ್ರಿಕೆ ರಾಜ್ಯ ಪಠ್ಯಕ್ರಮದಂತೆ ಬರುತ್ತದೆ. ಖಾಸಗಿ ಶಾಲೆಗಳಲ್ಲಿ ಪಬ್ಲಿಷರ್ಸ್ ಪುಸ್ತಕಗಳಂತೆ ಪಾಠ ಮಾಡಿರುತ್ತಾರೆ. ಮಕ್ಕಳು ರಾಜ್ಯಪಠ್ಯ ಕ್ರಮಪುಸ್ತಕ ಅಭ್ಯಾಸ ಮಾಡಿರುವುದಿಲ್ಲ ಇಂತಹ ಸಮಯದಲ್ಲಿ ಪರೀಕ್ಷೆ ಹೇಗೆ ಬರೆಯತ್ತಾರೆ..? ಈ ವಿಷಯ ಪೋಷಕರಿಗೆ ತಿಳಿದಿದೆಯಾ….? ಮಕ್ಕಳಿಗೆ ಪಬ್ಲಿಷರ್ಸ್ ಪುಸ್ತಕಗಳಂತೆ ಪಾಠ ಮಾಡಿರುವ ವಿಷಯ ಆದರಿಸಿ ಪರೀಕ್ಷೆಗಳನ್ನು ನಡೆಸಲು ಬರುವುದಿಲ್ಲ.
ಐದು,ಎಂಟು, ಒಂಭತ್ತನೆ ತರಗತಿ ಮಕ್ಕಳಿಗೆ ಉತ್ತರಗಳನ್ನು ಹೇಳಿಕೊಟ್ಟು ಮುಂದಿನ ತರಗತಿಗೆ ಪ್ರಮೋಟ್ ಮಾಡುತ್ತಾರೆ ಎಂಬ ಆಘಾತಕಾರಿ ಅಂಶವು ಕೆಲ ಮೂಲಗಳಿಂದ ತಿಳಿದು ಬಂದಿದೆ.
ಮಕ್ಕಳ ಭವಿಷ್ಯ ದ ಕಥೆ ಏನು…?
ಐದು,ಎಂಟು, ಒಂಭತ್ತನೆ ತರಗತಿಯಿಂದ ಮಕ್ಕಳಿ ಗೆ ಕಾಫಿ ಅಭ್ಯಾಸ ವಾದರೆ ಮುಂದೆ ಅವರ ಭವಿಷ್ಯದ ಕಥೆ ಏನು…? ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಿಸಿ ಕ್ಯಾಮರಾ ಅಳವಡಿಕೆಯಿಂದ. ಪಾವಗಡ ತಾಲ್ಲೂಕಿನಲ್ಲಿ ಶೇಕಡವಾರು ಫಲಿತಾಂಶ ಕಡಿಮೆಯಾಗಿದೆ ಇದಕ್ಕೆ ಕಾರಣ ಗುಣಮಟ್ಟದ ಶಿಕ್ಷಣ ಇಲ್ಲದಿರುವುದು.
ಮಕ್ಕಳ್ಳಲ್ಲಿ ಓದುವ ಮನೋಭಾವನೆ ಕ್ಷೀಣಿಸಿದೆ…?
ಮಕ್ಕಳಲ್ಲಿ ನಾನು ಚೆನ್ನಾಗಿ ಓದಬೇಕು ಎಂಬ ಮನೋಬಾವನೆ ಕಡಿಮೆ ಯಾಗಿರುವುದು. ಪರೀಕ್ಷೆ ಸಮಯದಲ್ಲಿ ನಮ್ಮ ಟೀಚರ್‌ಗಳು ಉತ್ತರ ಹೇಳಿಕೊಡುತ್ತಾರೆ, ನಾವು ಏಕೆ ಹೋದಬೇಕು ಎಂಬ ಮನೋಬಾವನೆ ಹೆಚ್ಚು ವಿದ್ಯಾರ್ಥಿಗಳಲ್ಲಿ ಬಂದಿದೆ ಇದಕ್ಕೆ ತಾಜಾ ಉದಾಹರಣೆ ಪಾವಗಡ ತಾಲ್ಲೂಕಿನ ಇತ್ತೀಚಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ.
ಹೈಕೋರ್ಟ್ ಮತ್ತು ಸುಪ್ರಿಂಮ್ ಕೋರ್ಟ್ ಮೋರೆ ಯಾಕೆ…?
ಖಾಸಗಿ ಶಾಲೆಗಳಲ್ಲಿ ಪಬ್ಲಿಷರ್ಸ್ (ಲೀಡ್) ಪುಸ್ತಕಗಳನ್ನು ನೀಡಿ ವಿದ್ಯಾರ್ಥಿಗಳಿಗೆ – ಪೋಷಕರಿಗೆ ಮೋಸ ಮಾಡುವ ಮೂಲಕ ಹಣ ಲೂಟಿ ಮಾಡಿರುತ್ತಾರೆ ಎಂಬುದು ನಗ್ಯ ಸತ್ಯ ಇದಕ್ಕೆ ಪುಷ್ಠಿ ನೀಡುವ ಅಂಶ ವೆಂದರೆ ಪ್ರತಿವರ್ಷ ಐದು,ಎಂಟು, ಒಂಭತ್ತನೆ ತರಗತಿಗಳಿಗೆ ರಾಜ್ಯಸರ್ಕಾರ ಪಬ್ಲಿಕ್ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಬಂದಾಗ. ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆಗಳು ನ್ಯಾಯಾಲಯ (ಹೈಕೋರ್ಟ್ ಮತ್ತು ಸುಪ್ರಿಂಮ್ ಕೋರ್ಟ್) ಮೋರೆ ಹೋಗಿ ಪಬ್ಲಿಕ್ ಪರೀಕ್ಷೆ ಬೇಡ ಎನ್ನುತ್ತಾರೆ ಯಾಕೆ…? ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜ್ಯಪಠ್ಯ ಕ್ರಮ ದಂತೆ ಪಾಠಗಳನ್ನು ಮಾಡುತ್ತಿಲ್ಲ ಎಂಬುದಕ್ಕೆ ಇದು ಒಂದು ನಿದರ್ಶನ….ಖಾಸಗಿ ಶಾಲೆಗಳು ಸರ್ಕಾರದ ಅನುಮತಿ ಪಡೆದ ಪಠ್ಯದಂತೆ ಪಾಠ ಮಾಡಿದ್ದರೆ ನ್ಯಾಯಾಲಯಗಳ ಮೊರೆ ಹೋಗುವ ಪ್ರಶ್ನೆ ಉದ್ಭವಿಸುವುದಿಲ್ಲ…!
ಪ್ರತಿಯೊಬ್ಬ ಮಕ್ಕಳ ಪೋಷಕರು ಈ ಎಲ್ಲಾ ವಿಷಯ ಗಳ ಬಗ್ಗೆ ಯೋಚಿಸಬೇಕು….? ಖಾಸಗಿ ಶಾಲೆಗಳಲ್ಲಿ ಪ್ರಶ್ನಿಸುವಂತಾಗಬೇಕು….!