IMG 20240229 100752 scaled

ಪಾವಗಡ : ಕೋಟೇಶ್ವರ ನʻ ಆಸ್ತಿ ʼ ಉಳಿಸಿ ಸ್ವಾಮಿ….!

BUSINESS DISTRICT NEWS FILM NEWS ತುಮಕೂರು

ತನಿಖಾ ವರದಿ: ಶಿವಪ್ಪನಿಗೂ ತಪ್ಪದ ಸಂಕಷ್ಟ

ಕೋಟೇಶ್ವರ ನ   ʻ ಆಸ್ತಿ ʼ ಉಳಿಸಿ ಸ್ವಾಮಿ….!

ಪಾವಗಡ ತಾಲ್ಲೂಕಿನಲ್ಲಿ ವೈ ಎನ್‌ ಹೊಸಕೋಟೆ ಹೆಚ್ಚು ಜನಸಂಖ್ಯೆ ಇರುವ ಊರು ಇಲ್ಲಿ ಜಮೀನಿನ ಬೆಲೆ ಪಾವಗಡ ಪಟ್ಟಣದ ನಂತರದ ಸ್ಥಾನದಲ್ಲಿ ಇರುತ್ತೆ. ರಿಯಲ್‌ ಎಸ್ಟೇಟ್‌ ದಂಧೆ ಮಾಡುವವರ ಕಣ್ನು ಮೊದಲು ಬೀಳುವುದೇ ಸರ್ಕಾರಿ ಜಮೀನುಗಳ ಮೇಲೆ, ಬಹಳಷ್ಟು ಜಮೀನಿಗಳು  ಕಬಳಿಯಾಗಿವೆ. ಸರ್ಕಾರ ಆಸ್ತಿ ಕಾಪಾಡಬೇಕಾದ ತಹಸಿಲ್ದಾರ್‌, ಗ್ರಾಮಲೆಕ್ಕಿಗರು, ಆರ್‌ ಐ,ವಿ ಎ ಪಿಡಿಒ ಗಳು ಹಣ ಕ್ಕೆ ತಮ್ಮನ್ನು ತಾವು ಮಾರಿಕೊಳ್ಳುತ್ತಿರುವ ಪರಿಸ್ಥಿತಿ ಹಿಂದಿನಿಂದಲು ನಡೆದುಕೊಂಡು ಬಂದಿದೆ ಎನ್ನುತ್ತಾರೆ ಸಾರ್ವಜನಿಕರು.

  ವೈ.ಎನ್‌ ಹೊಸಕೋಟೆ ಸರ್ಕಾರಿ ಆಸ್ತಿ ಗುಳುಂ & ಕಾನೂನು ಬಾಹಿರ ಬಡಾವಣೆಗಳು

 • ಕೋಟೇಶ್ವರ ದೇವಸ್ಥಾನದ ಜಮೀನು
 • ಸಂತೆಮೈದಾನ
 • ಸೂರಪ್ಪನ ಕುಂಟೆ
 • ಸುಮಾರು 17 ಖಾಸಗಿ ಬಡಾವಣೆಗಳುನಿಯಮ ಬಾಹಿರವಾಗಿ ನಿರ್ಮಾಣ ಗೊಂಡಿವೆ

ಕೋಟೇಶ್ವರ ಸ್ವಾಮಿ ಯ ಆಸ್ತಿ ಕಬಳಿಕೆ ಯ  ಅಸಲಿ ಕಥೆ…

ವೈ ಎನ್‌ ಹೊಸಕೋಟೆ ಗ್ರಾಮದ  ಭೀಮನಕುಂಟೆ ರಸ್ತೆಯಲ್ಲಿ ಕೋಟೇಶ್ವರ ಸ್ವಾಮಿ ನ ದೇವಸ್ಥಾನ ಇದೆ.  ಇದು ಚೋಳರಕಾಲದಲ್ಲಿ ನಿರ್ಮಿಸಿದ ದೇವಸ್ಥಾನ ಎನ್ನಲಾಗುತ್ತಿದೆ. ಈ ದೇವಸ್ಥಾನಕ್ಕೆ ಸೇರಿದ ಜಮೀನು ವೈ ಎನ್‌ ಹೊಸಕೋಟೆ ಯಿಂದ ಪಾವಗಡ ಕ್ಕೆ ಹೋಗುವ ರಸ್ತೆಯಲ್ಲಿ ಬರುತ್ತದೆ  ಸರ್ವೇ ನಂಬರ್ 249 ರಲ್ಲಿ ಏಳು (7) ಎಕರೆ 28 ಗುಂಟೆ ಮತ್ತು  250  0.35 ಗುಂಟೆ ಜಮೀನು ಕೋಟೇಶ್ವರ ದೇವರಿಗೆ ಸೇರಿದ್ದಾಗಿರುತ್ತದೆ.

ಬ್ರಹ್ಮದಾಯ ಜಮೀನು

 • ಬ್ರಹ್ಮದಾಯದ ಜಮೀನನ್ನು ವೆಂಕಟರಾವ್‌ ಕೋಂ ತಿಮ್ಮ ರಾವ್‌  ಅವರು ಎಚ್‌ ಪಿ ಮಾರ್ಕಂಡೇಯ ಶಾಸ್ತ್ರಿ ಯವರಿಗೆ  1952-1953 ರಲ್ಲಿ ಮಾರಾಟ ಮಾಡುತ್ತಾರೆ.
 • ಎಚ್‌ ಪಿ ಮಾರ್ಕಂಡೇಯ ಶಾಸ್ತ್ರಿ ಯವರು 1974-1975 ರಲ್ಲಿ  249 ಸರ್ವೇ ನಂಬರ್‌ ನ 4.02 ( ನಾಲಕ್ಕು ಎಕರೆ ಎರಡು ಗುಂಟೆ) ಮತ್ತು 250 ಸರ್ವೆ ನಂಬರ್ನ 0,18 ಗುಂಟೆ ( ಹದಿನೆಂಟು ಗುಂಟೆ)  ಜಮೀನನ್ನು ಖಾರೆ ಹನುಮಂತಪ್ಪ  ಕೋಂ ಯಲ್ಲಪ್ಪ ಇವರಿಗೆ ಮಾರಾಟ ಮಾಡುತ್ತಾರೆ.ಆದರೆ ಲ್ಯಾಂಡ್‌ ಟ್ರಿಬುನಲ್‌ ಮೊರೆ ಹೋದಾಗ ಇವರಿಗೆ ಜಮೀನಿನ ಹಕ್ಕು ಬರುವುದಿಲ್ಲ

.ಜಮೀನು ಡೀಲ್‌  ಮಾಡಿದ್ದು ಹೇಗೆ ಗೊತ್ತಾ….!

.  ಖರೆ ಹನುಂತರಾಯಪ್ಪ ಮತ್ತು ನಾಗೇಂದ್ರಪ್ಪ ಜಮೀನಿನ ಹಕ್ಕು ಪಡೆಯಲು ಪಾವಗಡ ಲ್ಯಾಂಡ್‌ ಟ್ರಿಬ್‌ ನಲ್‌ ಮುಂದೆ    ( ಕೇಸ್‌ ನಂ ಎಲ್‌ ಆರ್‌ ಎಫ್‌ 9/1974) 19-6-1979) ಎರಡು ಬಾರಿ ಅರ್ಜಿ ಸಲ್ಲಿಸಿದರು ಟ್ರಿಬ್ ನಲ್ ವಜಾ ಮಾಡಿದೆ ಜಮೀನಿನ ಹಕ್ಕು ಖರೆ ಹನುಂತರಾಯಪ್ಪಗೆ  ಬರುವುದಿಲ್ಲ.

ಟ್ರಿಬನಲ್ ಆದೇಶದ ಪ್ರತಿ: ಖರೆ ಹನುಮಂತರಾಯಪ್ಪ ಅರ್ಜಿ ವಜಾ.

ಈ ಆಸಾಮಿಗಳು ಮತ್ತೆ (ಕೇಸ್‌ ನಂ ) 1983 – 84 ರಲ್ಲಿ ಭೂಮಿ ಹಕ್ಕಿಗಾಗಿ ಟ್ರಿಬನಲ್‌ ಮುಂದೆ  ಮತ್ತೆ ಅರ್ಜಿ ಸಲ್ಲಿಸುತ್ತಾರೆ ಆಗಲು ಸಹ ಅರ್ಜಿ ತಿರಸ್ಕಾರಗೊಂಡು ಭೂಮಿ ಹಕ್ಕು ಇವರಿಗೆ ಬರುವುದಿಲ್ಲ. 249 ಮತ್ತು 250 ಸರ್ವೆ ನಂಬರ್ ಜಮೀನಿನ ಹಕ್ಕು ಇರದ  ಖರೆ ಹನುಮಂತರಾಯಪ್ಪಎಂಬ ವ್ಯಕ್ತಿಯಿಂದ ಈ ಜಮೀನನ್ನು 1 ಎನ್‌ ಎಂ ಶಂಕರರತ್ನಂ ಶೆಟ್ಟಿ. 2. ಟಿ ಆರ್‌ ವಿ ಪ್ರಸಾದ್‌ 3. ಎನ್‌ ಆರ್‌ ಅಶ್ವಥ್ಥ ಕುಮಾರ್‌4. ಟಿ ವಿ ವೆಂಕಟೇಶ್‌, 5.ಲಕ್ಷೀಪ್ರಸಾದ್‌ ಇವರಿಗೆ 25,000 ( ಇಪ್ಪತ್ತೈದು ಸಾವಿರ ರೂಪಾಯಿ)  ಗೆ 11-5 1988 ರಂದು ಖರೀದಿ ಮಾಡುತ್ತಾರೆ.

 ಸ್ವಾರಸ್ಯಕರ ಅಂಶ

   ಈ ಜಮೀನು ಕೋಟೇಶ್ವರ ದೇವರು ಮತ್ತು ತಿಮ್ಮಪ್ಪ ಕೋಂ ವೆಂಕಟರಾಯಪ್ಪ ಇಬ್ಬರ ಹೆಸರಿಗೆ ಜಂಟಿ ಖಾತೆಯಲ್ಲಿ ಇರುತ್ತದೆ. ಜಮೀನು ರಿಜಿಸ್ಠಾರ್‌ ಮಾಡುವಾಗ ಜಂಟಿ ಖಾತೆ ಎಂದರೆ ಇಬ್ಬರು ಬರಬೇಕು ಅಲ್ಲವಾ…!               ಆಗಾದರೆ ಮೊದಲು ಎಚ್‌ ಪಿ ಮಾರ್ಕಂಡೇಯ ಶಾಸ್ತ್ರಿ ನಂತರ ಖರೆ ಹನುಂತರಾಯಪ್ಪ ತದನಂತರ ಟಿ ವಿ ವೆಂಕಟೇಶ್‌ ತಂಡ ಕ್ಕೆ  ರಿಜಿಸ್ಟರ್‌ ಮಾಡಿಸುವಾಗ ಕೋಟೇಶ್ವರ ಸ್ವಾಮಿ ಪಾವಗಡ ನೋದಾವಣಿ ಕಚೇರಿ ಗೆ ಬಂದಿದ್ದರಾ….?  ಆಗಾದರೆ ಜಂಟಿ ಖಾತೆ ಅರ್ಥ ವೇನು….? ಆಗಾದರೆ ಈ ವಹಿವಾಟು ಕಾನೂನಾತ್ಮಕವಾಗಿ ಉರ್ಜಿತ ವಾಗುತ್ತದೆಯೆ…!

1705761918672

ಜಂಟಿ ಖಾತೆ ಯ ಪ್ರತಿ

ಭೂಪರಿವರ್ತನೆ :

ಎನ್‌ ಆರ್‌ ಅಶ್ವತ್ಥಕುಮಾರ್‌ ಮತ್ತು ಶಂಕರತ್ನಂ ಶೆಟ್ಟಿ ತಂಡ ಭೂಪರಿವರ್ತನೆ ಮಾಡವ ಪ್ರಯತ್ನ ಆರಂಭಿಸುತ್ತಾರೆ. ಮಧುಗಿರಿ ಉಪ ವಿಭಾಗಾಧಿಕಾರಿ ಅರ್ಜಿ ಸಲ್ಲಿಕೆಯಾಗುತ್ತದೆ ಇವರ ವಿರುದ್ದ ಬಿ.ಎಲ್‌ ಮಲ್ಲಯ್ಯ ರಿಂದ ದೂರು ದಾಖಲು

 • ಮಧುಗಿರಿ ಉಪ ವಿಭಾಗಾಧಿಕಾರಿಗಳಾಗಿದ್ದ ಸಂದೀಪ್‌ ದವೆ ಅವರು ವೈ ಎನ್‌ ಹೊಸಕೋಟೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡುತ್ತಾರೆ. 249 ಮತ್ತು 250 ಸರ್ವೇನಂಬರ್‌ ನ ಕೋಟೇಶ್ವರ ದೇವರ  ಜಮೀನಿಗೆ ಸಂಬಂದಿಸಿದ ಭೂಮಿ ಪರಭಾರೆ ಬಗ್ಗೆ  26-6-1991 ರಂದು ಮಧುಗಿರಿ ಎ.ಸಿ ತೀರ್ಪು ನೀಡುತ್ತಾರೆ. ಅದರ ಅನ್ವಯ ಈ ಜಮೀನು ಧಾರ್ಮಿಕ ದತ್ತಿಗೆ ಸೇರುತ್ತದೆ ಆದ್ದರಿಂದ ತಾವು ಕಂದಾ ಯ ದಾಖಲೆಗಳನ್ನು ಬದಲಾಲಿಸಲು  ತಹಶೀಲ್ದಾರ್‌ ಆದೇಶಿಸುತ್ತಾರೆ ಅದರ ಅನ್ವಯ 249- 250 ಜಮೀನಿನ ಎಲ್ಲಾ ದಾಖಲೆಗಳು ದೇವಸ್ಥಾನದ ಹೆಸರಿಗೆ ಬದಲಾವಣೆ ಯಾಗುತ್ತವೆ.
1718765615246

ದೇವಸ್ಥಾನದ ಹೆಸರಿಗೆ – ಖಾತೆ‌- ಬದಲಾವಣೆಯಾದ ಪ್ರತಿ

ಆಸಕ್ತಿಕರ ವಿಷಯ :

ಖರೆ ಹನುಂತರಾಯಪ್ಪನವರು 11-5 1988 1990 ರಂದು  ಟಿ ವಿ ವೆಂಕಟೇಶ್‌ ತಂಡ ಕ್ಕೆ ಜಮೀನು ಮಾರಾಟ ಮಾಡಿ ನಂತರ  ಅವರೇ 1991 ಹೈಕೋರ್ಟ್ ಗೆ ಕೇಸ್‌ ಹಾಕಿದ್ದಾರೆ. ಈ ಐದು ಜನರ ಗ್ಯಾಂಗ್‌ ಖರೆ ಹನುಂತರಾಯಪ್ಪ ಅವರಿಂದ ಜಮೀನಿನ ಹಕ್ಕಿಗಾಗಿ ಖೇಸ್‌ ಹಾಕಿಸಿರಬಹುದು.

ಎರಡು ಬಾರಿ ಟ್ರಿಬನಲ್‌ ನಲ್ಲಿ ಕೇಸ್‌ ವಜಾ ಹಾಗಿರುತ್ತದೆ, ಜಮೀನಿನ ಹಕ್ಕು ಸಿಕ್ಕಿರುವುದಿಲ್ಲ.ಆದರೆ ಇಂತಹ ಜಮೀನಿನ ಹಕ್ಕು ಟಿ ವಿ ವೆಂಕಟೇಶ್‌ ಅಂಡ್‌ ಗ್ಯಾಂಗ್‌ ಗೆ  ನ ಹೆಸರಿಗೆ ಹೇಗೆ  ಬದಲಾವಣೆ ಆಯ್ತು ಅನ್ನುವುದನ್ನು ತುಂಬ ಆಸಕ್ತಿಕರ ವಿಷಯ.

ಹೈಕೋರ್ಟ್‌ನಲ್ಲಿ ರಿಟ್‌ ಪಿಟೀಶನ್‌ ಕೇಸ್‌ :

 ಖಾರೆ ಹನುಮಂತರಾಯಪ್ಪ ಅವರು 1990 ಹೈಕೋರ್ಟ್‌ನಲ್ಲಿ ರಿಟ್‌ ಪಿಟೀಶನ್‌ ಕೇಸ್‌ ( ಸಂಖ್ಯೆ 24311/ 1990 )  ದಾಖಲುಮಾಡುತ್ತಾರೆ. ಈ ಕೇಸ್‌ನ ತೀರ್ಪು 28-07-1993 ರಲ್ಲಿ ಹೊರ ಬರುತ್ತದೆ.  ಈ ಆದೇಶದಲ್ಲಿ ಉಲ್ಲೇಖವಾಗಿರುವ ಅಂಶಗಳೆಂದರೆ.

 • ದಾರ್ಮಿಕ ( ಮತಿಯ ಮತ್ತು ಧಾರ್ಮಿಕ) ದತ್ತಿಗಳ ರದ್ದಿ ಕಾಯ್ದೆ 1955  ರ  ಅನ್ವಯ  249 ಮತ್ತು 250 ಸರ್ವೇ ನಂಬರ್‌ ಜಮೀನು ಇನಾಮು ಮುಕ್ತ ವಾಗಿದೆ ಎಂಬ ಅಂಶವಿದೆ
 • ಅನಗತ್ಯ ವಾಗಿ ನಾವು ಯಾವದೇ ಅಭಿಪ್ರಾಯ- ಆದೇಶವನ್ನು ಲ್ಯಾಂಡ್‌ ಟ್ರಿಬನಲ್‌ ಗೆ ನೀಡುವುದಿಲ್ಲ.  ಲ್ಯಾಂಡ್‌ ಟ್ರಿಬಲ್‌  ಸೂಕ್ತ ನಿರ್ಧಾರವನ್ನು ತ್ವರಿತವಾಗಿ ಕಾನೂನಿನ ಅನುಗುಣವಾಗಿ  ತೀರ್ಮಾನ ತೆಗೆದುಕೊಳ್ಲಿ ಎಂಬ ಅಂಶವನ್ನು ಕೋರ್ಟ್ ತಿಳಿಸಿರುತ್ತದೆ. ಖಾರೆ ಹನುಮಂತರಾಯಪ್ಪ ನಿಗೆ ಜಮೀನಿನ ಹಕ್ಕುನ್ನು ಹೈಕೋರ್ಟ್‌ನೀಡಿರುವುದಿಲ್ಲ.

ಇನಾಮು ಮುಕ್ತ :

ದೇವಸ್ಥಾನ ವ್ಯಾಪ್ತಿಯಲ್ಲಿ ಜಮೀನು ಇನಾಮು ಮುಕ್ತ ಎಂದರೆ ಆ ಜಮೀನು ದೇವಸ್ಥಾನ ವ್ಯಾಪ್ತಿ ಅಥವಾ ಅರ್ಚಕರ ವ್ಯಾಪ್ತಿಯಿಂದ  ಸರ್ಕಾರದ ವ್ಯಾಪ್ತಿ ಗೆ ಸೇರುತ್ತದೆ. ಸರ್ಕಾರ ಈ ಜಮೀನುಗಳನ್ನು ಇನಾಮು ಮಕ್ತ ಗೊಳಿಸಿ, ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯ ಮಾಡುತ್ತಿರುವವರಿಗೆ – ಪೂಜಾರಿಗಳಿಗೆ ತಸ್ತಕ್‌ (ಸಂಬಳ – ಪೂಜೆಗೆ ಹಣ)  ನಿಗದಿ ಮಾಡಿ ಹಣ  ಕೊಡಲು ಆರಂಭಿಸಿದೆ. ಇಂದಿಗೂ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ತಾನ ಪೂಜಾರಿಗಳಿಗೆ ದೇವಸ್ಥಾನದ ಶ್ರೇಣಿ ಗೆ ಅನುಗುಣವಾಗಿ ತಸ್ಥಕ್‌ ಪಡೆಯುತ್ತಿದ್ದಾರೆ. ಈ ಜಮೀನಿನ ವಾರಸುದಾರರು ರೀಗ್ರಾಂಟ್‌ ಅರ್ಜಿ ಸಲ್ಲಿಸಿ ಜಮೀನನ್ನು ಮರು ಪಡೆಯ ಬಹುದಾಗಿರುತ್ತದೆ

ಅಕ್ರಮ ವ್ಯವಹಾರ :

ಹಣ ಇದ್ದರೆ ಸಾಕು  ಏನು ಬೇಕಾದರು ಮಾಡಬಹುದು ಎನ್ನುವುದಕ್ಕೆ ಈ ವ್ಯವಹಾರ ವೇ ಒಂದು ಉದಾಹರಣೆ. ಹೈಕೋರ್ಟ್‌ (ಕೇಸ್‌ ಸಂಖ್ಯೆ 24311/ 1990)  ಅದೇಶದಲ್ಲಿ ಈ ಜಮೀನು ಇನಾಮು ಮುಕ್ತ ಎಂಬ ಅಂಶ ಊಲ್ಲೇಖ ವಾಗಿರುತ್ತೆ ಈ ಅಂಶ ವನ್ನು ಕೇಂದ್ರವಾಗಿಸಿಕೊಂಡು.ಆಗಿನ ಪಾವಗಡ ತಹಸಿಲ್ದಾರ್‌ರವರು  ಟಿ ವಿ ವೆಂಕಟೇಶ್‌ ಮತ್ತು ಅವರ ತಂಡದ ಹೆಸರಿಗೆ ಜಮೀನಿನ ಹಕ್ಕು ಬದಲಾವಣೆ ಮಾಡಿದ್ದಾರೆ.

 ತಹಸಿಲ್ದಾರ್‌ ಆದೇಶ :

28/06/1993ರಿಂದ  20/07/1995 ರ ವರಗೆ ಪಾವಗಡ ತಹಶೀಲ್ದಾರ್‌ ಆಗಿ ಕೆಲಸ ಮಾಡಿದ ಬಸವರಾಜ್‌ ಅವರು ಮಾಡಿದ ಘನ ಕಾರ್ಯವಿದು :

 ಕ್ರಯದಾರರು ಹಾಜರುಪಡಿಸಿದ ಕ್ರಯ ಪತ್ರ  252/ 11-05-1988 ಹಾಗೂ ನ್ಯಾಯಾಲದ ರಿಟ್‌ ಪಿಟೀಶನ್‌ ಸಂಖ್ಯೆ 24311/ 28-07-1993 ರಲ್ಲಿ ನೀಡಿರುವ ತೀರ್ಪಿನ ಆಧಾರದ ಅನ್ವಯ ಈ ಕೆಳಕಂಡ ಜಮೀನಿನ ಖಾತೆ ಮತ್ತು ಪಹಣಿ ಬದಲಾಣೆ  ಆದೇಶವನ್ನು11-2-1994 ರಂದು ಹೊರಡಿಸಲಾಗುತ್ತದೆ. ನಂತರ ಟಿ ವಿ ವೆಂಕಟೇಶ್‌ ಮತ್ತು ನಾಲ್ಕು ಜನರ ಹೆಸರಿಗೆ ಕಂದಾಯ ದಾಖಲೆ ಬದಲಾವಣೆಯಾಗಿರುತ್ತದೆ.

ಕಾನೂನು ಬಾಹಿರ ಕ್ರಮ :

ಜಿಲ್ಲಾಧಿಕಾರಿಗಳ ನ್ಯಾಯಾಲಯ : ಕೇಸ್‌ ನಂ ಆರ್‌ ಎ / 10/ 92-93

ಜಿಲ್ಲಾಧಿಕಾರಿಗಳ ನ್ಯಾಯಲಯ: ಮಧುಗಿರಿ ಉಪ-ವಿಭಾಗಾಧಿಕಾರಿ ಸಂದೀಪ್‌ ದವೆ ಕೇಸ್‌ ( ಸಂಖ್ಯೆ ಎಸಿ,ಸಿಆರ್‌ (ಪಿ) ನಂಬರ್‌ 35/ 1990-91) ಆದೇಶವನ್ನು ತುಮಕೂರು ಜಿಲ್ಲಾಧಿಕಾರಿಗಳ ನ್ಯಾಯಲಯದಲ್ಲಿ 1992-1993 ರಲ್ಲಿ ಎನ್‌ ಆರ್‌ ಅಶ್ವತ್ಥಕುಮಾರ್‌ ಮತ್ತು ಶಂಕರತ್ನಂ ಶೆಟ್ಟಿ ಅವರು ಅಪೀಲ್ ಮಾಡುತ್ತಾರೆ ಈ ಕೇಸ್‌ 92-93 ರಿಂದ  20-04-1999 ರ ವರೆಗೆ ನಡೆಯುತ್ತದೆ

ಸರ್ವೇ ನಂಬರ್‌ 249 ಮತ್ತು 250 ಜಮೀನಿಗೆ ಸಂಬಂದಿಸಿದ ಜಿಲ್ಲಾಧಿಕಾರಿಗಳ ನ್ಯಾಯಲಯದಲ್ಲಿ ಕೇಸ್‌ ನಡೆಯುತ್ತಿರುತ್ತದೆ. ಈ ಕೇಸ್‌ ನಲ್ಲಿ  ಪಾವಗಡ ತಹಶೀಲ್ದಾರ್‌ ಪ್ರತಿವಾದಿಯಾಗಿರುತ್ತಾರೆ, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿರುವ ಸಮಯದಲ್ಲಿ ಪಾವಗಡ ತಹಶೀಲ್ದಾರ್‌ ಬಸವರಾಜ್‌  11-03 1994 ರಂದು ಖಾತೆ ಮತ್ತು ಪಹಣಿ ಬದಲಾವಣೆ ಮಾಡಿ ಆದೇಶ ಹೊರಡಿಸುತ್ತಾರೆ.

 

ಜಿಲ್ಲಾಧಿಕಾರಿಗಳ ಆದೇಶ ಯಾಕೆ ಪಾಲಿಸಲಿಲ್ಲ…!

ಮಧುಗಿರಿ ಎ ಸಿ ಆಗಿದ್ದ ಸಂದೀಪ್ ದವೆ ಅವರ ಆದೇಶ ವನ್ನು ಜಿಲ್ಲಾಧಿಕಾರಿಗಳು ಎತ್ತಿಹಿಡಿದಾಗ. ಯಾಕೆ 1999 ರಲ್ಲಿ ಪಾವಗಡ ತಹಸಿಲ್ದಾರ್‌ ಆಗಿದ್ದವರು ದೇವಸ್ಥಾನದ ಹೆಸರಿಗೆ ಖಾತೆ ಮತ್ತು ಪಾಣಿ ಬದಲಾವಣೆ ಮಾಡಿಲ್ಲ. ನಂತರ ಬಂದಂತ ತಹಸಿಲ್ದಾರ್ಗಳು ಬದಲಾವಣೆ ಮಾಡಿಲ್ಲ. ಈ ಎರಡು ಸರ್ವೇ ನಂಬರ್‌ ವಹಿವಾಟ ಮಾಡಲು ಅನುಕೂಲ ಮಾಡಿದ್ದಾರೆ.

ತಹಶೀಲ್ದಾರ್‌ ಸೇಲ್‌ ಆದರಾ …?

ನ್ಯಾಯಾಲಯತೀರ್ಪಿನ ಅನ್ವಯ ಎಂಬ ಅಂಶ ಉಲ್ಲೇಖಿಸಿ ಪಾವಗಡ ತಾಹಸಿಲ್ದಾರ್‌ ಜಮೀನಿನ ಹಕ್ಕು ಬದಲಾವಣೆ ಮಾಡಿರುವುದು ಎಷ್ಟು ಸರಿ…? ಲ್ಯಾಂಡ್‌ ಟ್ರಿಬಲ್‌ ಸೂಕ್ತ ನಿರ್ಧಾರವನ್ನು ತ್ವರಿತವಾಗಿ,ಕಾನೂನಿನ ಅನುಗುಣವಾಗಿ ತೀರ್ಮಾನ ತೆಗೆದುಕೊಳ್ಲಿ ಎಂಬ ಅಂಶವನ್ನು ಮಾತ್ರ ಹೈಕೋರ್ಟ್‌ ತಿಳಿಸಿದೆಯೆ ಹೊರತು ಖಾತೆ ಮತ್ತು ಪಹಣಿ ಬದಲಾವಣೆ ಮಾಡಲು ತಿಳಿಸಿರುವುದಿಲ್ಲ.

1994 ಪಾವಗಡ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸಿದ ಬಸವರಾಜ್ ತಹಸಿಲ್ದಾರ್‌, ಆರ್ ಐ, ವಿ.ಐ  ಎಲ್ಲಾ ಸೇರಿ ಟಿ ವಿ ವೆಂಕಟೇಶ್‌ ಮತ್ತು ಅವರ ತಂಡ ಕ್ಕೆ ಕಾನೂನು ಬಾಹಿರವಾಗಿ ಅನುಕೂಲ ಮಾಡಿಕೊಟ್ಟಿದ್ದಾರೆ.ಎಂಬ ಅಂಶ ಮೇಲ್ನೋಟಕ್ಕೆ ಕಂಡುಬರುತ್ತಿದೆ,,,?

ಇನಾಮುಮುಕ್ತ ಜಮೀನು :

ಈ ಎರಡು ಜಮೀನು ಇನಾಮು ಮುಕ್ತವಾಗಿದ್ದರಿಂದ ಅದು ಸರ್ಕಾರಕ್ಕೆ ಸೇರುತ್ತದೆ. ನಂತರ ಈ ಜಮೀನು  ಮರು ಪಡೆಯಬೇಕೆಂದರೆ ಆ ಜಮೀನಿನ ವಾರಸುದಾರಿಗೆ ಮೊದಲ ಹಕ್ಕು ಇರುತ್ತದೆ.  ಅರ್ಜಿ ಸಲ್ಲಿಸಿ ರೀ ಗ್ರಾಂಟ್‌ ಮಾಡಿಸಿಕೊಳ್ಳಬೇಕು ಇದಕ್ಕೆ ಸಂಬಂದಿಸಿದ ಹಲವಾರು ಸರ್ಕಾರಿ ಆದೇಶ ಮತ್ತು ನಿಯಮಗಳಿವೆ.  

ರೀ ಗ್ರಾಂಟ್‌ ನಿಯಮ :

ತಹಸಿಲ್ದಾರ್‌ ರವರು ಇನಾಮ್‌ ಮುಕ್ತ ಜಮೀನುಗಳನ್ನು ಪಟ್ಟಿ ಮಾಡಿ ಅರ್ಜಿಗಳನ್ನು ಪಡೆದು,ಇನಾಮ್‌ ರಿಜಿಸ್ಠಾರ ನಲ್ಲಿರುವ ಮಾಹಿತಿಯನ್ನು 1-3-1974 ಮತ್ತು ಪೂರ್ವ ದ ಮಾಹಿತಿ ತಯಾರಿಸಿ ಮರು ಮಂಜೂರಾತಿಗೆ ಅರ್ಜಿ ಸಲ್ಲಿಸಿರುವವರ ಪ್ರಸ್ತಾವನೆಗಳನ್ನು ತಯಾರಿಸಿ ಸಂಬಂದಪಟ್ಟ ಉಪ-ವಿಭಾಗ ಅಧಿಕಾರಿಗಳಿಗೆ ಸಲ್ಲಿಸಬೇಕು. 

 • ಉಪ- ವಿಭಾಗಾಧಿಕಾರಿಗಳು ಇಂತಹ ಪ್ರಕರಣದಲ್ಲಿ ಮುಂಗಡ ಸೂಚನೆ ಕೊಟ್ಟು ಸ್ಥಳ ತನಿಖೆ ಮಾಡಿ, ನೆರೆ ಹೊರೆ ಹಿಡುವಳಿದಾರರ ಹೇಳಿಕೆಗಳನ್ನು ಬರೆದುಕೊಂಡು ಪಂಚನಾಮೆಯನ್ನು ಮಾಡುವುದು ಕಡ್ಡಾಯವಾಗಿರುತ್ತದೆ.
 • ತದನಂತರ ಉಪ-ವಿಭಾಗಾಧಿಕಾರಿಗಳು ಲಭ್ಯವಿರುವ ದಾಖಲೆ ಪುರಾವೆಗಳೊಂದಿಗೆ ವಿಚಾರಣಾ ವರದಿಯನ್ನು ತಯಾರಿಸಿ ತನ್ನ ಶಿಫಾರಸ್ಸಿನೊಂದಿಗೆ ಪ್ರತಿಯಂದು ಪ್ರಕರಣವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಜಿಲ್ಲಾಧಿಕಾರಿಗಳು ಇಂತಹ ಪ್ರಕರಣಗಳನ್ನುಪರಿಶೀಲಿಸಿ ಸೂಕ್ತ ಆದೇಶವನ್ನು ಹೊರಡಿಸಬೇಕು.

ಜಮೀನು ರೀಗ್ರಾಂಟ್‌ ಆಗದೆ ಇದ್ದರು ಖಾತೆ – ಪಹಣಿ ಬದಲಾವಣೆ …?

ಇನಾಂ ಮುಕ್ತ ಜಮೀನು ಮರು ಮಂಜೂರಾತಿಗೆ ಅರ್ಜಿ ಸಲ್ಲಿಸಲು 31-3-2=1992 ರಂದು ಕೊನೆ ಗೊಂಡಿರುತ್ತದೆ  ಆದರೆ ಟಿ.ವಿ ವೆಂಕಟೇಶ್‌ ಮತ್ತು ಅವರ ಸಹಚರರಿಗೆ 11-2-1994 ರಂದು ಪಾವಗಡ ತಹಸಿಲ್ದಾರ್‌ ಹೇಗೆ ಖಾತೆ ಪಹಣಿ ಹೇಗೆ ಬದಲಾಯಿಸಿ ಕೊಟ್ಟರು. ಎರಡು ಬಾರಿ ಲ್ಯಾಂಡ್‌ ಟ್ರಿಬನಲ್‌ ನಲ್ಲಿ ತಿರಸೃತ ನಂತರ ಉಪವಿಭಾಧಿಕಾರಿ ಸಂದೀಪ್‌ ದವೆ ಸಹ ವಜಾಮಾಡಿರುತ್ತಾರೆ ನಂತರ ತುಮಕೂರು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಕೇಸ್‌ ನಡೆಯುತ್ತಿರುವ ಸಂದರ್ಭದಲ್ಲಿ ಪಾವಗಡ ತಹಸಿಲ್ದಾರ್‌ ಟಿ ವಿ ವೆಂಕಟೇಶ್‌ ತಂಡದ   ಅರ್ಜಿಯನ್ನು ಪುರಸ್ಕರಿಸಿ ಕಾನೂನುಬಾಹಿರವಾಗಿ ಖಾತೆ ಪಹಣಿ ಬದಲಾವಣೆ ಮಾಡಿಕೊಟ್ಟಿದ್ದಾರೆ. 

ತಹಶೀಲ್ದಾರ್‌ ಕರ್ಮಕಾಂಡ – ಆಡಳಿತ ವ್ಯವಸ್ಥೆ ದೌರ್ಭಾಗ್ಯ

 • ಉಪ-ವಿಭಾಗಾಧಿಕಾರಿಗಳ ಆದೇಶವನ್ನು ಜಿಲ್ಲಾಧಿಕಾರಿಗಳ ನ್ಯಾಯಲಾಯದಲ್ಲಿ ಎನ್‌ ಆರ್‌ ಅಶ್ವತ್ಥಕುಮಾರ್‌ ಮತ್ತು ಶಂಕರತ್ನಂ ಶೆಟ್ಟಿ ಅವರು 1992-1993 ರಲ್ಲಿ (ಅಪೀಲ್) ಪ್ರಶ್ನಿಸುತ್ತಾರೆ  (ಕೇಸ್‌ ಸಂಖ್ಯೆ- ಆರ್‌ ಎ 10/ 1992-93 ) ಕೇಸ್‌ ಜಿಲ್ಲಾದಿಕಾರಿಗಳ ನ್ಯಾಯಾಲಯದಲ್ಲಿ ನಡೆಯುತ್ತಿರುತ್ತದೆ. ಈ ಕೇಸ್‌ ನಲ್ಲಿ ಉಪ – ವಿಭಾಗಾದಿಕಾರಿಗಳು, ಪಾವಗಡ ತಹಶೀಲ್ದಾರ್‌, ಬಿ.ಎಲ್‌ ಮಲ್ಲಯ್ಯ, ಹೆಚ್‌ ಎಸ್‌ ನಾಗಭೂಷಣ್‌ ಅವರು ಪ್ರತಿವಾದಿಗಳಾಗಿರುತ್ತಾರೆ.
 • ಉಪ-ವಿಭಾದಿಕಾರಿಗಳ ಆದೇಶವನ್ನು ಜಿಲ್ಲಾಧಿಕಾರಿಗಳ ನ್ಯಾಯಾಲವು .20-4-1999  ರಂದು ಎತ್ತಿ ಹಿಡಿಯುತ್ತದೆ, ಎನ್‌ ಆರ್‌ ಅಶ್ವತ್ಥಕುಮಾರ್‌ ಮತ್ತು ಶಂಕರತ್ನಂ ಶೆಟ್ಟಿ‌ ಅವರ ಅಪೀಲ್‌ ನ್ನು ವಜಾಗೊಳಿಸಲಾಗುತ್ತದೆ.
 • ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ,ಬೆಂಗಳುರು ಇಲ್ಲಿ ಜಿಲ್ಲಾದಿಕಾರಿಗಳ ಆದೇಶದ ವಿರುದ್ಧ ಅಪೀಲ್‌ ಮಾಡುತ್ತಾರೆ ( ಕೇಸ್‌ ಸಂಖ್ಯೆ 249/1999) ಇಲ್ಲಿ ಯೂ ಅಪೀಲ್‌ ನ್ನು ಮೇಲ್ಮನವಿ ನ್ಯಾಯಾಧಿಕರಣ ವಜಾಗೊಳಿಸುತ್ತದೆ.
 • ಎನ್‌ ಆರ್‌ ಅಶ್ವತ್ಥಕುಮಾರ್‌ ಮತ್ತು ಶಂಕರತ್ನಂ ಶೆಟ್ಟಿ ತಂಡ ಹೈಕೋರ್ಟ್‌ ನಲ್ಲಿ ರಿಟ್‌ ಪಟಿಷನ್‌ ಪೈಲ್‌ ಮಾಡುತ್ತಾರೆ ( ಕೇಸ್‌ ಸಂಖ್ಯೆ – WP 9393/ 2001 9713/ 2001)  ಈ ಕೇಸ್‌ ನಲ್ಲಿ ಕಾರ್ಯದರ್ಶಿ ಕಂದಾಯ ಇಲಾಖೆ, ಜಿಲ್ಲಧಿಕಾರಿಗಳು ತುಮಕೂರು, ಉಪ-ವಿಭಾಗಾದಿಕಾರಿ ಮಧುಗಿರಿ, ತಹಶೀಲ್ದಾರ್ ಪಾವಗಡ ಮತ್ತು ಬಿ ಎಲ್‌ ಮಲ್ಲಯ್ಯ, ಹೆಚ್‌ ಎಸ್‌ ನಾಗಭೂಷಣ್‌  ಪ್ರತಿವಾದಿಗಳಾಗಿರುತ್ತಾರೆ.

ಹೈಕೋರ್ಟ್‌ ತೀರ್ಪು  – (WP 9393/ 2001 9713/ 2001)

 ಸಂಬಂಧಿಸಿದ ಸಿವಿಲ್‌ ನ್ಯಾಯಾಲಯದಲ್ಲಿ ನಿಮ್ಮ  ಜಮೀನಿನ ಹಕ್ಕನ್ನು ಖಾತ್ರಿ ಪಡಿಸಿಕೊಂಡು ನಂತರ ಭೂಪರಿವರ್ತನಗೆ ಹೊಸದಾಗಿ ಅರ್ಜಿ ಸಲ್ಲಿಸಲು ಹೈಕೋರ್ಟ್‌ ತಿಳಿಸಿ ರಿಟ್‌ ಪಿಟಿಷನ್‌ ನ್ನು ವಿಲೇವಾರಿ ಮಾಡುತ್ತದೆ.‌

ಸಿವಿಲ್ ನ್ಯಾಯಾಲಯ :

  ಟಿ.ವಿ ವೆಂಕಟೇಶ್‌, ಎನ್‌ ಆರ್‌ ಅಶ್ವತ್ಥಕುಮಾರ್‌ ಮತ್ತು ಶಂಕರತ್ನಂ ಶೆಟ್ಟಿ ತಂಡ ಹೈಕೋರ್ಟ ತಿಳಿಸಿದಂತೆ ಪಾವಗಡ ಸಿವಿಲ್‌ ನ್ಯಾಯಾಲಯ ಸೇರಿದಂತೆ  ಯಾವ ನ್ಯಾಯಾಲದಲ್ಲೂ  ( 249-250 ಸರ್ವೇನಂಬರ್‌) ಜಮೀನು ಹಕ್ಕು ಪಡೆದಿರುವ ಬಗ್ಗೆ ದಾಖಲೆಗಳು ಮೇಲ್ನೋಟಕ್ಕೆ ಲಭ್ಯವಿಲ್ಲ…..!

ಸರ್ಕಾರಿ ಅಧಿಕಾರಿಗಳ ನಿರ್ಲಕ್ಷೈ ;

 ಹೈಕೋರ್ಟ್‌ ನ ಕೇಸ್‌ ಗಳಲ್ಲಿ ಪ್ರತಿವಾದಿಗಳಾದ1. ಕಾರ್ಯದರ್ಶಿ, ಕಂದಾಯ ಇಲಾಖೆ, 2 ಜಿಲ್ಲಾಧಿಕಾರಿಗಳು ತುಮಕೂರು,3, ಉಪ-ವಿಭಾಗಾದಿಕಾರಿ ಮಧುಗಿರಿ, 4.ತಹಶೀಲ್ದಾರ್ ಪಾವಗಡ ಈ ಎಲ್ಲಾ ಅಧಿಕಾರಿಗಳು ಈ ಕೇಸ್‌ ನ ಅಂತಿಮ ಆದೇಶ ತಿಳಿದಿದ್ದರು. ಇಂದಿನ ವರೆಗೂ ಕೋಟೇಶ್ವರ ಸ್ವಾಮಿ ಗೆ ಸೇರಿದ ಸರ್ಕಾರದ ಜಮೀನನ್ನು ತಮ್ಮ ವಶಕ್ಕೆ ಪಡೆಯದೆ ಟಿ.ವಿ ವೆಂಕಟೇಶ್‌ ಮತ್ತು ಅವರ ತಂಡಕ್ಕೆ ರಾಜಾ ರೋಷ ವಾಗಿ ರಿಯಲ್‌ ಎಸ್ಟೇಟ್‌ ವ್ಯಾಪಾರ ನಡೆಸಲು ಬಿಟ್ಟಿದ್ದಾರೆ ಜೊತೆಗೆ ಈ ಎರಡು ಸರ್ವೇ ನಂಬರ್‌ ಜಮೀನಿನುಗಳ ವಹಿವಾಟು ನೆಡೆಯುತ್ತಲೆ ಇವೆ.

ಇದು ನಮ್ಮ ಆಡಳಿತ ವ್ಯವಸ್ಥೆ ದೌರ್ಭಾಗ್ಯ ಅಲ್ಲವಾ….!

ಈ ಸ್ಟೋರಿ ಓದಿದ ನಿಮಗೆ ಶಿವಪ್ಪನ ಆಸ್ತಿ ಕಬಳಿಸಿದ ಅಸಲಿ ಕಥೆ ಅರ್ಥವಾಗಿದೆ ಅಲ್ಲವಾ….?

ಈ ಜಮೀನು ಸರ್ಕಾರ ವ್ಯಾಪ್ತಿಗೆ ಸೇರಬೇಕು ವೈ ಎನ್‌ ಹೊಸಕೋಟೆಯಲ್ಲಿ ಒಂದು ಆಟದ ಮೈದಾನವಿಲ್ಲ ಇಲ್ಲಿ  ಮಕ್ಕಳು ಆಟ ವಾಡಲು ಒಂದು ಸುಂದರವಾದ ಆಟದ ಮೈದಾನ ನಿರ್ಮಾಣ ವಾಗಬೇಕು ಎಂಬುದು ಸಪ್ತಸ್ವರ ಮಾದ್ಯಮ ದ  ಆಶಯ…..!