ಸೋಲಾರ್ ಪಾರ್ಕ್ ನಿಂದ ಪಾವಗಡದಲ್ಲಿ ಇತಿಹಾಸ ಸೃಷ್ಟಿ ಯಾಗಿದೆ. ಜಿಲ್ಲಾಧಿಕಾರಿ ಶುಭ ಕಲ್ಯಾಣ್.
ಪಾವಗಡ : ಶೀಘ್ರವಾಗಿ ಪಾವಗಡದ ಸೋಲಾರ್ ಪಾರ್ಕಿಗೆ 8,000 ದ ಎಕರ ಭೂಮಿ ರ್‍ಯಾಪ್ಟೆ
ಪಂಚಾಯಿತಿಯಿಂದ ಸೇರಿಕೊಳ್ಳುವುದರಿಂದ ವಿಶ್ವದಲ್ಲಿ ಪಾವಗಡ ತಾಲ್ಲೂಕಿಗೆ ಒಳ್ಳೆ ಹೆಸರು ಬರುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ತಾಲ್ಲೂಕಿನ ರ್‍ಯಾಪ್ಟೆ ಗ್ರಾಮ ಪಂಚಾಯತಿಯಲ್ಲಿ ಏರ್ಪಡಿಸಿದ್ದ ರೈತರ ಜಮೀನಿಗೆ ಬಾಡಿಗೆ ನಿಗದಿಪಡಿಸುವ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಬಾರಿ ಉತ್ತಮವಾಗಿ ಮಳೆಯಾಗುತ್ತಿದೆ, ರೈತರಿಗೆ ಅಗತ್ಯವಾದ ಉತ್ತಮ ಬಿತ್ತನೆ ಬೀಜಗಳು, ರಸಗೊಬ್ಬರ,
ಲಭ್ಯವಿದ್ದು ತಾಲೂಕಿನ 11 ಕೇಂದ್ರಗಳಲ್ಲಿ ಶೇಂಗಾ ಬೀಜ ವಿತರಣೆ ಮಾಡುತ್ತಿದ್ದು ರೈತರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಪಾವಗಡ ತಾಲೂಕಿನಲ್ಲಿ ಕೇವಲ 500 ಜನ ರೈತರು ಮಾತ್ರ ಇನ್ಸೂರೆನ್ಸ್ ಪ್ರೀಮಿಯಂ ಅನ್ನು ಕಟ್ಟಿದ್ದಾರೆ,
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಶೇಕಡ 98% ರಷ್ಟು ಪ್ರೀಮಿಯಂ ಕಟ್ಟಿದರೆ ರೈತರು ಕೇವಲ 2% ಮಾತ್ರ ಪ್ರೀಮಿಯಂ ಕಟ್ಟಿದರೆ ಸಾಕು, ಎಲ್ಲ ರೈತರು ಇನ್ಸೂರೆನ್ಸ್ ಅನ್ನು ಕಟ್ಟುವಂತೆ ವಿನಂತಿಸಿಕೊಂಡರು.
ಬೆಳೆ ಸಮೀಕ್ಷೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅನೇಕ ರೈತರು ದೂರು ನೀಡುತ್ತಿದ್ದು, ಪ್ರತಿಯೊಬ್ಬರ ಬಳಿಯೂ ಸ್ಮಾರ್ಟ್ ಫೋನ್ ಇದ್ದು ಬೆಳೆ ಸಮೀಕ್ಷೆಯನ್ನು ತಾವೇ ಮಾಡಿಕೊಳ್ಳಬಹುದೆಂದು, ಇದಕ್ಕೆ ಸಂಬಂಧಿಸಿದಂತೆ ಗ್ರಾಮ ಮಟ್ಟದಲ್ಲಿ ತರಬೇತಿ ನೀಡಲಾಗುವುದು ಎಂದರು.
ಕಾರ್ಯಕ್ರಮ ಉದ್ದೇಶಿಸಿ ಶಾಸಕ ಹೆಚ್ಚು ವೆಂಕಟೇಶ್ ಮಾತನಾಡಿ,
ಪ್ರಪಂಚದ ಭೂಪಟದಲ್ಲಿ ಪಾವಗಡ ಸೋಲಾರ್ ಪಾರ್ಕ್ ನ್ನು ಗುರುತಿಸುವಷ್ಟು ಮಟ್ಟಿಗೆ ಹೆಸರು ಪಡೆದಿದೆ ಎಂದರು.
ತಾಲೂಕಿನ ಅಂದಾನಪುರ ಸೇರಿದಂತೆ ಹಲವಾರು ಪ್ರದೇಶಗಳ ರೈತರು ಸೋಲಾರ್ ಪಾರ್ಕಿಗೆ ತಮ್ಮ ಜಮೀನಿ ನೀಡಲು ಮುಂದಾಗಿದ್ದಾರೆ ಎಂದರು.
ರ್‍ಯಾಪ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಜಮೀನು ನೀಡುವ ರೈತರ ಜಮೀನಿಗಳಿಗೆ ಸರ್ಕಾರದಿಂದ ಒಂದು ಎಕರೆಗೆ ವಾರ್ಷಿಕ ₹25,200/- ರೂಪಾಯಿಗಳಂತೆ ನೀಡಲಾಗುವುದೆಂದು ಶಾಸಕ ಹೆಚ್ ವಿ ವೆಂಕಟೇಶ್ ಮತ್ತು ಜಿಲ್ಲಾಧಿಕಾರಿಗಳು ಈ ಸಭೆಯಲ್ಲಿ ತೀರ್ಮಾನಿಸಿದರು..
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೆಂಕಟರಮಣಪ್ಪ,
ಕೆಆರ್ ಈ.ಡಿ.ಯಲ್ ನ ಎಂ ಡಿ ರುದ್ರಪ್ಪಯ್ಯ
ಕೆ ಎಸ್ ಪಿ ಡಿ ಸಿ ಎಲ್, ಅಮರ್ ನಾಥ್, ಈ ಓ ಜಾನಕಿ ರಾಮ್, ತಹಶೀಲ್ದಾರ್ ವರದರಾಜು, ರೈತ ಮುಖಂಡರು ಅಧಿಕಾರಿಗಳು ಭಾಗವಹಿಸಿದ್ದರು.
ವರದಿ. ಶ್ರೀನಿವಾಸಲು. A