ಪಾವಗಡ : ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಹಾಗೂ ನೊಂದವರ ನೆರವಿಗೆ ಸದಾ ಧಾವಿಸುವುದೇ ನಮ್ಮ ಟ್ರಸ್ಟಿನ ಮೂಲ ಉದ್ದೇಶ ಎಂದು ತಾಲ್ಲೂಕು ಸಮಗ್ರ ಸೇವಾ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಬಿಕೆ ಮುನಿಸ್ವಾಮಿಯವರು ತಿಳಿಸಿದರು.
ನಗರದ ಪ್ರಮುಖ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಶಾರದಾ ವಿದ್ಯಾಪೀಠದಲ್ಲಿ ನಮ್ಮ ತಾಲೂಕು ಸಮಗ್ರ ಸೇವಾ ಅಭಿವೃದ್ಧಿ ಟ್ರಸ್ಟಿನ ಅಧ್ಯಕ್ಷರಾದ ಬಿಕೆ ಮುನಿಸ್ವಾಮಿಯವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ನಮ್ಮ ಟ್ರಸ್ಟಿನ ಮೂಲ ಉದ್ದೇಶವೇ ತಾಲೂಕಿನ ಸರ್ವತೋಮುಖ ಅಭಿವೃದ್ಧಿ. ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವಾಮನೋಭಾವದಿಂದ ಎಲ್ಲರೂ ನಮ್ಮ ಟ್ರಸ್ಟ್ ಗೆ ಕೈಜೋಡಿಸಿ ತಾಲ್ಲೂಕನ್ನು ಅಭಿವೃದ್ಧಿಯ ಪಥದ ಕಡೆಗೆ ಕೊಂಡೊಯ್ಯಲು ಶ್ರಮಿಸಬಹುದು.
ಬರಪೀಡಿತ ಹಾಗೂ ತೀರ ಹಿಂದುಳಿದ ಪ್ರದೇಶ ಎಂಬುದನ್ನು ಮನಗಂಡ ನಮ್ಮ ಟ್ರಸ್ಟ್ ಮಾರ್ಗದರ್ಶಕರು ಮತ್ತು ಬೆಂಗಳೂರು ಚಿಕ್ಕಜಾಲ ಸರ್ಕಲ್ ಇನ್ಸ್ಪೆಕ್ಟರ್ ಆದ ಎಸ್ ಅರ್ ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ 13 ನಿರ್ದೇಶಕರನ್ನೋಳಗೊಂಡ ಈ ಟ್ರಸ್ಟ್ ಅನ್ನು ಸ್ಥಾಪಿಸಿ ನೋಂದಣಿಯನ್ನು ಸಹ ಮಾಡಿಸಲಾಗಿದೆ. ಇದರ ಅಡಿಯಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಲಾಗಿದೆ.
ಕೊರೋನ ವೈರಸ್ ತಾಲೂಕಿನಾದ್ಯಂತ ವ್ಯಾಪಕವಾಗಿ ಹರಡುತ್ತಿರುವುದರಿಂದ ತಾಲ್ಲೂಕಿನ ಸಮಗ್ರ ಸೇವಾ ಅಭಿವೃದ್ದಿ ಟ್ರಸ್ಟ್ ಹಾಗೂ ಸುಗರಾಧನ ಸಂಸ್ಥೆಯ ಸಹಭಾಗಿತ್ವದಲ್ಲಿ. ತಮಿಳುನಾಡಿನ ಮಾದರಿಯಲ್ಲಿ ರಾಸಾಯನಿಕ ಮತ್ತು ಆಲ್ಕೋಹಾಲ್ ಮುಕ್ತವಾದ ಆರ್ಗನಿಕ್ ದ್ರಾವಣವನ್ನು ಪ್ರತಿ ಹಳ್ಳಿಗೂ ಡ್ರೋನ್ ಮತ್ತು ಬ್ಲೋವರ್ ಮೂಲಕ ಸ್ಯಾನಿಟೈಜರ್ ಮಾಡುವ ಉದ್ದೇಶದಿಂದ ಮಂಗಳವಾರ ಪಟ್ಟಣದ ಪ್ರಮುಖ ಸ್ಥಳಗಳಿಗೆ ಯಶಸ್ವಿಯಾಗಿ ನೆರವೇರಿಸಲಾಯಿತು.
ಇದಕ್ಕೆ ತಾಲೂಕಿನ ಆಡಳಿತವು ಸಹಾ ಪೂರ್ಣ ಬೆಂಬಲ ವ್ಯಕ್ತಪಡಿಸಿ ಎಲ್ಲಾ ರೀತಿಯ ಸಹಾಯ ನೀಡಿ ಸಹಕರಿಸಿತು. ಆದರೆ ಹಂತಹಂತವಾಗಿ 4 ಹೋಬಳಿಗಳಲ್ಲಿ ಪ್ರತಿ ದಿನವೂ ಒಂದು ಹೋಬಳಿಯನ್ನು ಅಯ್ಕೆ ಮಾಡಿಕೊಂಡು ಎಲ್ಲಾ ಹೋಬಳಿಗಳಿಗೂ 4 ದಿನಗಳಲ್ಲಿ ಸ್ಯಾನಿಟೈಸಾರ್ ಮಾಡಲಾಗುವ ಮುಂದಿನ ನಾಲ್ಕು ದಿನಗಳ ನಮ್ಮ ಈ ಕಾರ್ಯಕ್ಕೆ ತೊಡಕುಂಟಾಗಿ ನಮ್ಮ ಕೆಲಸ ಸ್ಥಗಿತಗೊಂಡಿದೆ.ನಮ್ಮಗೆ ಬೆನ್ನೆಲುಬಾಗಿ ನಿಂತಿದ್ದ ತಾಲ್ಲೂಕು ಆಡಳಿತ ದಿಡೀರನೆ ನಮ್ಮ ಕೆಲಸವನ್ನು ಸ್ಥಗಿತಗೊಳಿಸಲು ಸೂಚಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಕಾಣದ ರಾಜಕೀಯ ಶಕ್ತಿಗಳ ಪ್ರಭಾವಕ್ಕೆ ತಾಲ್ಲೂಕು ಆಡಳಿತ ಒಳಗಾಗಿದೆ. ಎಸಿ ಅವರ ನಿರ್ದೇಶನ ಇರುವುದರಿಂದ ನಿಮ್ಮ ಕಾರ್ಯವನ್ನು ನಿಲ್ಲಿಸಬೇಕೆಂದು ತಾಸಿಲ್ದಾರ್ ನಾಗರಾಜು ಅವರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು. ಇಂತಹ ರಾಜಕೀಯ ಷಡ್ಯಂತರವು ತಾಲೂಕಿನ ಜನತೆಗೆ ಮಾಡಿದ ದ್ರೋಹವೆ ವಿನಹಾ ನಮಗೆ ಯಾವುದೇ ರೀತಿಯ ನಷ್ಟವಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ನರಸೇಗೌಡ, ರವಿ ,ತಿಪ್ಪೇಸ್ವಾಮಿ ಹಾಗೂ ಬಜ್ಜಪ್ಪ ಉಪಸ್ಥಿತರಿದ್ದರು.
ಆಶಾ ಕಾರ್ಯಕರ್ತೆರಿಗೆ ದಿನಸಿ ಕಿಟ್ ವಿತರಣೆ
ಪಾವಗಡ ತಾಲ್ಲೂಕಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಪಾವಗಡ ತಾಲ್ಲೂಕು ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್(ರಿ) ಪಾವಗಡ ರವರು ಉಚಿತವಾಗಿ ನೀಡಿರುವ ದಿನಸಿ ಕಿಟ್,ಮಾಸ್ಕ್, ಸ್ಯಾನಿಟೈಸರ್ ಮತ್ತು ಫೇಶ್ ಶೀಲ್ಡ್ ನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಾಕ್ಟರ್ ಕಿರಣ್ ಕುಮಾರ್ ಇ.ಓ ಶಿವರಾಜಯ್ಯ. ನಮ್ಮ ಹಕ್ಕು ತಾಲೂಕು ಅಧ್ಯಕ್ಷ ಗಿರೀಶ್. ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು
ವರದಿ – ಬುಲೆಟ್ ವೀರಸೇನಯಾದವ್