ಪಾವಗಡ. ಗ್ರಾಮೀಣ ಭಾಗದ ಜಾಡಮಾಲಿ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ವಿತರಣೆ”
ತಮಟೆ ಗ್ರಾಮೀಣ ಸಬಲೀಕರಣ ಕೇಂದ್ರ (ರಿ) ಹಾಗೂ ಸಫಾಯಿ ಕರ್ಮಚಾರಿ ಕಾವಲು ಸಮಿತಿ – ಕರ್ನಾಟಕದ ಸಂಯುಕ್ತ ಆಶ್ರಯದಲ್ಲಿ ಇಂದು ಬೆಳಿಗ್ಗೆ ಪಾವಗಡ ತಮಟೆ ಕಛೇರಿಯ ಆವರಣದಲ್ಲಿ ಗ್ರಾಮೀಣ ಭಾಗದ ಸ್ವಚ್ಚತಾಗಾರರಿಗೆ ಆಹಾರದ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು,
ತಮಟೆ ಸಂಸ್ಥೆಯು ತುಮಕೂರು ಜಿಲ್ಲೆಯಾದ್ಯಂತ ಇರುವ ಮ್ಯಾನುಯಲ್ ಸ್ಕಾವೆಂಜರ್ಸ್ ಗಳು, ಸ್ಯಾನಿಟರಿ ವರ್ಕರ್ಸ್ ಹಾಗೂ ಜಾಡಮಾಲಿ ಕಾರ್ಮಿಕರ ಆರೋಗ್ಯ, ಶಿಕ್ಷಣ, ಹಾಗೂ ಅವರ ಅಭಿವೃದ್ದಿಗಾಗಿ ಸುಮಾರು 15 ವರ್ಷಗಳಿಂದ ದುಡಿಯುತ್ತಿದ್ದು ಪ್ರಸ್ತುತ ದೇಶದಾದ್ಯಂತ ಕೋವಿಡ್ 19 ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಿಂದ ರಾಜ್ಯ ಸರ್ಕಾರ ಲಾಕ್ಡ್ ಡೌನ್ ಮಾಡಿದೆ ಇದರಿಂದ ಗ್ರಾಮೀಣ ಭಾಗದಲ್ಲಿನ ಜಾಡಮಾಲಿಗಳು ಸಮಯಕ್ಕೆ ಸರಿಯಾಗಿ ವೇತನವಿಲ್ಲದೆ ಪರದಾಡುವಂತಹ ಪರಿಸ್ಥಿತಿಯನ್ನು ಗಮನಿಸಿ ಕಳೆದ ವರ್ಷವೂ ಸಹಾ 150 ಕಾರ್ಮಿಕರಿಗೆ ಆಹಾರದ ಸಾಮಗ್ರಿಗಳನ್ನು ಹಂಚಿದ್ದು ಈ ವರ್ಷವೂ ಸಹಾ ತಮಟೆ ಮತ್ತು ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ವತಿಯಿಂದ ಈ ವರ್ಷವೂ ಸಹಾ 100 ಆಹಾರದ ಕಿಟ್ ಗಳನ್ನು ಹಂಚಿಕೆ ಮಾಡಲಾಯಿತು, ಈ ಕಾರ್ಯಕ್ರಮದಲ್ಲಿ ತಮಟೆ ಸಂಸ್ಥೆಯ ಗಂಗರಾಜು, ವೆಂಕಟೇಶ್, ವಳ್ಳೂರು ವಿ ಎಸ್ ನಾಗೇಶ್, ಪಳವಳ್ಳಿ ಮೂರ್ತಿ, ಪ್ರಸಾದ್ ಬಾಬು, ಹಾಗೂ ಗ್ರಾಮೀಣ ಭಾಗದ ಜಾಡಮಾಲಿ ಕಾರ್ಮಿಕರು ಉಪಸ್ಥಿತರಿದ್ದರು.
ವರದಿ- ಬುಲೆಟ್ ವೀರಸೇನಯಾದವ್