ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಅಭಿನಂದಿಸಿದ ಪೋಷಕರು.
ಪಾವಗಡ : ಎಸ್ ಎಸ್ ಎಲ್ ಸಿ ಫಲಿತಾಂಶ ಹೊರ ಬಿದ್ದಿದ್ದು, ಶಿಕ್ಷಣ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಈ ಬಾರಿ ಸ್ವಲ್ಪ ಗುಣಮಟ್ಟದ ಫಲಿತಾಂಶ ಬರುವಂತಾಗಿದೆ.
ಸಿ ಸಿ ಕ್ಯಾಮರಾ ಅಳವಡಿಸಿದರೂ ಕೆಲ ಪರೀಕ್ಷಾ ಕೇಂದ್ರ ಗಳಲ್ಲಿ ಕಾಫಿ ಹೊಡೆಸುವ ಕಾಯಕವನ್ನು ಕೆಲ ಶಿಕ್ಷಕರು ಮಾಡಿದ್ದಾರೆ ಎಂಬ ಮಾತುಗಳು ಪರೀಕ್ಷಾ ಸಮಯದಲ್ಲಿ ಕೇಳಿಬಂದಿದ್ದವು.ಅದರಲ್ಲೂ ಕೊಟಗುಡ್ಡ- ವೈ ಎನ್ ಹೊಸಕೋಟೆ ಪರೀಕ್ಷಾ ಕೇಂದ್ರಗಳು ಮಾಸ್ ಕಾಫಿ ಮಾಡಿಸುವ ಮೂಲಕ ಖ್ಯಾತಿ ಗಳಿಸಿದ್ದವು.
ಕಳೆದ ಕೆಲ ವರ್ಷಗಳಿಂದ ಪಾವಗಡ ತಾಲ್ಲೂಕಿನಲ್ಲಿ ಮಾಸ್ ಕಾಫಿ ಮಾಡಿಸುವ ಮೂಲಕ ಕೆಲ ಶಾಲೆಗಳು ಶೇಕಡ 100 ರಷ್ಟು ಫಲಿತಾಂಶ ಬರುವಂತಾಗಿತ್ತು. ಈ ಹಿಂದೆ ಪಾವಗಡ ತಾಲ್ಲೂಕಿನಲ್ಲಿ ಕೆಲಸ ಮಾಡಿದ BEO ಗಳು ಕಟ್ಟು ನಿಟ್ಟಿನ ಕ್ರಮಗಳಿಗೆ ಮುಂದಾಗಿರಲಿಲ್ಲ. ತಾಲ್ಲೂಕಿನಲ್ಲಿ ಮಾಸ್ ಕಾಫಿ ಒಂದು ದೊಡ್ಡ ಮಟ್ಟದ ದಂಧೆ ಯಾಗಿ ಪರಿಣಮಿಸಿತ್ತು.ಇದರಿಂದ ಪ್ರಮಾಣಿಕವಾಗಿ ಹಗಲು- ರಾತ್ರಿ ಕಷ್ಟ ಪಟ್ಟು ಅಭ್ಯಾಸ ಮಾಡಿದ ಮಕ್ಕಳಿಗೆ ತಾಲ್ಲೂಕಿನಲ್ಲಿ ಇಲ್ಲಿಯ ವರೆಗೂ ಬೆಲೆ ಯೆ ಸಿಗುತ್ತಿರಲಿಲ್ಲ. ಈ ಬಾರಿಯ SSLC ಫಲಿತಾಂಶ ಹೊಸ ಬದಲಾವಣೆಗೆ ನಾಂದಿ ಹಾಡಿದೆ. ಇದಕ್ಕೆ ಕಾರಣ ಸರ್ಕಾರದ ನಿರ್ಧಾರ, ಅದನ್ನು ಸಫಲ ಗೊಳಿಸಲು ಶ್ರಮಿಸಿದ ಕೆಲ ಶಿಕ್ಷಣ ಇಲಾಖೆಯ ಸಿಬ್ಬಂದಿವರ್ಗ.
BEO ಗೆ ಅಭಿನಂದನೆ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಿ ಅವರನ್ನು ಭೇಟಿ ಮಾಡಿ ಶಿಕ್ಷಣ ಇಲಾಖೆಯ ಆದೇಶದಂತೆ ಈ ಬಾರಿ ಮಾಸ್ ಕಾಫಿ ತಡೆಯಲು ತಾಲ್ಲೂಕಿನಲ್ಲಿ ಕಟ್ಟುನಿಟ್ಟಿನ ಕ್ರಮವಹಿಸಿ ಪರೀಕ್ಷೆಯನ್ನು ನಕಲು ಮುಕ್ತವಾಗಿ ಸುಸೂತ್ರವಾಗಿ ನಡೆಸಿದ್ದರಿಂದ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಿ ಅವರಿಗೆ ಹೂಗುಚ್ಛಗಳನ್ನು ನೀಡುವ ಮೂಲಕ ಅಭಿನಂದಿಸಿದರು.
ನಂತರ ವಿದ್ಯಾರ್ಥಿಯ ಪೋಷಕ ಭಾಸ್ಕರ್ ರೆಡ್ಡಿ ಮಾತನಾಡಿ, ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಿಕ್ಷಣ ಇಲಾಖೆ ಕ್ಯಾಮೆರಾ ಮತ್ತು ವೆಬ್ ಕ್ಯಾಸ್ಟ್ ಅಳವಡಿಸಿದ್ದರಿಂದ ಪರೀಕ್ಷೆಯಲ್ಲಿ ನಕಲನ್ನು ತಡೆದು ಉತ್ತಮವಾಗಿ ಓದುವ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು ಸಹಕಾರಿಯಾಯಿತು ಎಂದು ತಿಳಿಸಿದರು.
ಈ ವರ್ಷ ನಿರೀಕ್ಷಿತ ಫಲಿತಾಂಶ ಬರದಿದ್ದರೂ, ಗುಣಮಟ್ಟದ ಫಲಿತಾಂಶ ಬಂದಿದೆ ಎಂದರು,
ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತೆ ಓದಿ ಪರೀಕ್ಷೆ 2 ಮತ್ತು 3 ಬರೆಯಲು ಅವಕಾಶ ನೀಡಿದ್ದರಿಂದ ವಿದ್ಯಾರ್ಥಿಗಳು ಮತ್ತೆ ಓದಿ ಪರೀಕ್ಷೆ ಬರೆಯಲು ಹೆಚ್ಚು ಅನುಕೂಲವಾಗಿದೆ ಎಂದರು.
ಈ ರೀತಿ ಪರೀಕ್ಷೆಗಳನ್ನು ನಡೆಸುವುದರಿಂದ ನಿಜವಾಗಲೂ ಉತ್ತಮವಾದ ಅಭ್ಯಾಸ ಮಾಡಿದ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರ್ತಿಸಿ ಅವರಿಗೆ ಉತ್ತೇಜನ ನೀಡಲು ಸಾಧ್ಯವಾಗುತ್ತದೆ ಎಂದರು.
ಈ ರೀತಿಯಾಗಿ ಕ್ರಮ ಕೈಗೊಂಡ ಶಿಕ್ಷಣ ಇಲಾಖೆ, ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳ ಕಚೇರಿಯ ಸಿಬ್ಬಂದಿಗಳಿಗೆ ಎಲ್ಲಾ ಪೋಷಕರ ಪರವಾಗಿ ಅಭಿನಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಪೋಷಕರಾದ, ಸುಜಾತ, ನರಸಿಂಹ ರೆಡ್ಡಿ, ಪ್ರಭಾವತಮ್ಮ, ಜನಾರ್ದನ್ ರೆಡ್ಡಿ ಇನ್ನೂ ಮುಂತಾದವರು ಹಾಜರಿದ್ದರು.