ಸಿಡಿಲು ಬಡಿದು ಹಸು ಮತ್ತು ಕರು ಸಜೀವದಹನ.
ಪಾವಗಡ : ಸಿಡಿಲು ಬಡಿದು ಹಸು ಮತ್ತು ಕರು ಸಜೀವ ದಹನವಾಗಿ ಮೂರು ಹಸುಗಳಿಗೆ ಗಂಭೀರವಾದ ಸುಟ್ಟ ಗಾಯವಾಗಿರುವ ಘಟನೆ ತಾಲ್ಲೂಕಿ y. n ಹೊಸಕೋಟೆ ಹೋಬಳಿಯ ರಂಗಸಮುದ್ರ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ
ರಂಗಸಮುದ್ರ ಗ್ರಾಮದ ಕರಿಯಪ್ಪ ಎಂಬುವರಿಗೆ ಸೇರಿದ ನಾಲ್ಕು ಹಸುಗಳಲ್ಲಿ ಒಂದು ಹಸು ಮತ್ತು ಕರು ಸುಟ್ಟು ಕರಕಲಾಗಿದ
ಗುರುವಾರ ರಾತ್ರಿ ಮಳೆ ಬರುವ ಸಂಭವ ಇದ್ದರಿಂದ ಹೊರಗಡೆ ಕಟ್ಟಿ ಹಾಕಿದ್ದ ನಾಲ್ಕು ಹಸುಗಳನ್ನು, ಕೊಟ್ಟಿಗೆಯೊಳಗೆ ಕಟ್ಟಿ ಹಾಕಿದ್ದಾಗ, ಸಿಡಿಲು ಬಡಿದು ಕೊಟ್ಟಿಗೆಗೆ ಬೆಂಕಿ ಹತ್ತಿ ಕೊಂಡು ಉರಿಯುವಾಗ ಅಲ್ಲಿಯೇ ಇದ್ದ ಕರಿಯಪ್ಪನ ಮಗ ಮಹಾಲಿಂಗ (15) ಎಂಬ ಬಾಲಕ ಮತ್ತು ಆತನ ತಾತ ಹಸುಗಳನ್ನು ರಕ್ಷಣೆ ಮಾಡಲು ಮುಂದಾಗಿದ್ದು ಮೂರು ಹಸುಗಳನ್ನು ಗುಡಿಸಲಿನಿಂದ ಬಿಟ್ಟು ಕಳಿಸಿದ್ದು, ಒಂದು ಹಸು ಮತ್ತು ಕರು ಸಂಪೂರ್ಣವಾಗಿ ಸುಟ್ಟು ಹೋಗಿದೆ.
ಹಸುಗಳನ್ನು ರಕ್ಷಣೆ ಮಾಡುವಾಗ ಮಹಾಲಿಂಗ ಎಂಬ ಬಾಲಕನಿಗೆ ಸುಟ್ಟ ಗಾಯಗಳಾಗಿವೆ.
ವಿಷಯ ತಿಳಿದ ನಂತರ ತಹಶೀಲ್ದಾರ್ ಸಂತೋಷ್ ಕುಮಾರ್, ವಿ.ಎ ರಘುವೀರ್, ಆರ್ ಐ ಕಿರಣ್, ಪಿಡಿಓ ದಾದಲೂರಪ್ಪ, ಪಶು ವೈದ್ಯಕೀಯ ಪರೀಕ್ಷಕ ತಿಪ್ಪೇಸ್ವಾಮಿ, ಡಾಕ್ಟರ್ ಅಶ್ವಥನಾರಾಯಣ, ಪಶುವೈದ್ಯ ಪರೀಕ್ಷಕ ಸತ್ಯನಾರಾಯಣಶೆಟ್ಟಿ, ಮತ್ತು ಸಿಬ್ಬಂದಿ ದಿನೇಶ್ ಭೇಟಿ ನೀಡಿ ಪರಿಶೀಲಿಸಿದರು.
ಪಶು ಇಲಾಖೆಯ ಸಿಬ್ಬಂದಿಗಳು ಗಾಯಗೊಂಡ ಹಸುಗಳಿಗೆ ಚಿಕಿತ್ಸೆ ನೀಡಿದರು.
ಘಟನೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ಸಂತೋಷ್ ಕುಮಾರ್ ಪ್ರತಿಕ್ರಿಯಿಸಿ 32500 ರೂಪಾಯಿಗಳ ಪರಿಹಾರವನ್ನು ಟ್ರಸರಿ ಮೂಲಕ ರೈತನಿಗೆ ನೀಡಲಾಗುವುದು ಎಂದು ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ ಅರಸೀಕೆರೆ ಪೊಲೀಸ್ ಠಾಣಾ ಸಿಬ್ಬಂದಿಗಳು, ಸ್ಥಳ ಪರಿಶೀಲನೆ ನಡೆಸಿ ಕೇಸ್ ದಾಖಲಿಸಿಕೊಂಡಿದ್ದಾರೆ
ವರದಿ. ಶ್ರೀನಿವಾಸಲು. A