ಪಾವಗಡ ಕೊರೋನಾ ಸ್ಫೋಟ
ಪಾವಗಡ ಇಂದು 5 ಕೊರೋನಾ ಕೇಸ್, ತಾಲ್ಲೂಕಿನಲ್ಲಿ 9 ಸೋಂಕಿತರು.
ಪಾವಗಡ:: ಇಂದು ಪಾವಗಡದಲ್ಲಿ 5 ಕೊರೊನಾ ಪಾಸಿಟಿವ್ ಕೇಸ್ಗಳು ದೃಢವಾಗಿರುವ ಪ್ರಕರಣ ದಾಖಲಾಗಿವೆ.ನೆನ್ನೆ ಪಾವಗಡ ತಾಲ್ಲೂಕಿನಲ್ಲಿ 4 ಕೊರೊನಾ ಕೇಸ್ಗಳು ಪತ್ತೆಯಾಗಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಇಂದು ಪಾವಗಡ ತಾಲ್ಲೂಕಿನಲ್ಲಿ ಕೋರೊನಾ ಇನ್ನಷ್ಟು ಶಾಕ್ ನೀಡಿದೆ. ತಾಲ್ಲೂಕಿನ ಕಡಮಲಕುಂಟೆ, ಶ್ರೀರಂಗಪುರ, ಕೆಂಚಗಾನಹಳ್ಳಿ, ಯರಪಾಳ್ಯ, ಭೂಪೂರು ತಾಂಡದಲ್ಲಿ ತಲಾ ಒಂದೊಂದು ಸೋಂಕು ಪತ್ತೆಯಾಗಿರೋದು ದೃಢವಾಗಿದೆ..
ಪಳವಳ್ಳಿಯಲ್ಲಿ 29 ವರ್ಷದ ಓರ್ವ ಯುವತಿ ಆಂಧ್ರ ಮೂಲದಿಂದ ಬಂದು ಇಲ್ಲಿ ಗಂಟಲು ದ್ರವ ಪರೀಕ್ಷೆ ನೀಡಿ ಮರಳಿ ಆಂಧ್ರಕ್ಕೆ ಹೋಗಿದ್ದಳು ಆಕೆಗೂ ಸೋಂಕು ದೃಢವಾಗಿರುವ ಮಾಹಿತಿ ಲಭ್ಯವಿದೆ. ಇನ್ನುಳಿದ ಐದು ಮಂದಿಯೂ ಪುರುಷರೇ ಆಗಿರೋದು ತಾಲ್ಲೂಕಿನೆಲ್ಲೆಡೆ ಮತ್ತಷ್ಟು ಆತಂಕಕ್ಕೆ ದೂಡಿದಂತಾಗಿದೆ.
ಇಲ್ಲಿಯವರೆಗೂ ಯಾವುದೇ ಅಂಜಿಕೆಯಿಲ್ಲದೆ ಹರಾಮಾಗಿದ್ದ ಮಂದಿಗೆ ಈ ರೀತಿ ಕೊರೊನಾ ಸಂಖ್ಯೆಯಲ್ಲಿ ಹೆಚ್ಚಳವನ್ನು ಗಮನಿಸಿ ಭಯಭೀತರಾಗಿದ್ದಾರೆ.
ತಾಲ್ಲೂಕಿನ ಜನರೇ ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲಿಯೂ ಸೋಂಕಿತರು ಸಂಬಂಧ ಇಟ್ಟುಕೊಂಡಿರಬಹುದು ಆಗಾಗಿ ಇನ್ಮುಂದಾದರು ನಾವು ನಮ್ಮ ಬದುಕಿನಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ನಿರ್ಲಕ್ಷ್ಯ ವಹಿಸಿ ವರ್ತಿಸಿದರೆ ತಾಲ್ಲೂಕಿನೆಲ್ಲೆಡೆ ಕೋರೊನಾ ಮಹಾಮಾರಿ ಬಿಸಿ ತಟ್ಟದೇ ಇರದು. ಆಗಾಗಿ ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತ ಎಚ್ಚರವಹಿಸಿ ಕೊರೊನಾ ತಡೆಯುವ ಅಗತ್ಯದ ಜೊತೆಗೆ ಅನಿವಾರ್ಯತೆಯಿದೆ.
ವರದಿ: ನವೀನ್ ಕಿಲಾರ್ಲಹಳ್ಳಿ*