*ಕೊರೊನಾ ನಿಯಂತ್ರಿಸುವಲ್ಲಿ ಮಾದರಿಯಾದ ಲಿಂಗದಹಳ್ಳಿಯಲ್ಲಿ*
*ಪಾವಗಡ:* ಕೊರೊನಾ ವೈರಸ್ಸಿನ ಸೋಂಕು ಪಾವಗಡ ತಾಲ್ಲೂಕಿನ ಪ್ರತಿಹಳ್ಳಿಗಳಿಗೂ ದಾಂಗುಡಿ ಇಡಲು ಶುರು ಮಾಡಿದೆ.ಒಂದೇ ಮಾತಲ್ಲೇ ಹೇಳೋದಾದ್ರೆ ಹಳ್ಳಿಗರೇ ಕೊರೊನಾಗೆ ಟಾರ್ಗೆಟ್ ಆದಂತಿದೆ. ಏಕೆಂದರೆ ಈಗಾಗಲೆ ನೆನ್ನೆ ಗೆ ತಾಲ್ಲೂಕಿನಲ್ಲಿ 9 ಪ್ರಕರಣಗಳು ದೃಢವಾಗಿವೆ. ಆ ಪೈಕಿ 7 ಕೇಸುಗಳು ಗ್ರಾಮೀಣ ಭಾಗದವುಗಳೇ ಎಂದು ಹೇಳುವಲ್ಲಿ ಆತಂಕದ ನಡುವೆ ಜೀವದ ಭಯ ಮನೆ ಮಾಡುತ್ತದೆ. ಅಷ್ಟೇ ಅಲ್ಲದೆ ಈ ಹಿಂದೆ ಬೆಂಗಳೂರು ,ಮಂಗಳೂರು ,ಆಂಧ್ರಪ್ರದೇಶ ಅಂತ ಹೋದ ಮಂದಿ ಈಗ ಕೋರೊನಾ ಸಂಖ್ಯೆಯಲ್ಲಿ ಏರಿಕೆ ಯಾದ ಕೂಡಲೆ ಮರಳಿ ಮೂಲ ಗ್ರಾಮೀಣ ಭಾಗ ಗಳಿಗೆ ಧಾವಿಸುತ್ತಿದ್ದಾರೆ. ಪರಿಣಾಮ ಜೊತೆಯಲ್ಲಿಯೇ ಸೋಂಕು ತಂದಿದ್ದಾರೆ, ತರುತ್ತಿದ್ದಾರೆ ಎಂಬ ಭೀತಿ ತಾಲ್ಲೂಕಿನ ಜನರಲ್ಲಿ ಹೆಚ್ಚಾಗುತ್ತಿದೆ. ಇದರ ನಡುವೆ ಪಟ್ಟಣದ ಶಿರಾ ಪ್ರಮುಖ ರಸ್ತೆಗಳಲ್ಲಿ ಜನ ಸಾಮಾನ್ಯರು ಕಿರಾಣಿ ಅಂಗಡಿಗಳಿಗೆ ಮತ್ರು ತರಕಾರಿ ಕೊಳ್ಳಲು ಕಿಕ್ಕಿರಿದು ಸಾಗುತ್ತಿದ್ದರು. ಯಾವುದೇ ಅಂತರ ಕಾಯದೆ ಅಂಗಡಿ ಮುಂಗಟ್ಟುಗಳ ಮುಂದೆ ನಿಲ್ಲುತ್ತಿದ್ದಾರೆ. ಇನ್ನೊಂದು ವಿಚಾರ ಅಂದರೆ ದಪ್ಪ ಚರ್ಮದ ಜನರು ಯಾವುದೇ ಮಾಸ್ಕ್ ಧರಿಸದೆ ನಿರ್ಲಕ್ಷ್ಯ ತನದಿಂದ ಓಡಾಡುತ್ತಿದ್ದದ್ದು ಕಂಡು ಬಂತು. ಹಾಗೆಯೇ ಪಟ್ಟಣದ ಎಸ್.ಬಿ.ಐ ಬ್ಯಾಂಕ್ ಗೆ ಬಂದಂತಹ ಗ್ರಾಹಕರು ಅಂತರ ಕಾಯದೆ ಗುಂಪು ಗುಂಪಾಗಿ ನಿಂತಿರೋದು ನಮ್ಮಲ್ಲಿನ ಬೇಜವಾಬ್ದಾರಿ ಹಾಗೂ ಅರಿವಿನ ಕೊರತೆ ಎದ್ದು ಕಾಣುವಂತಿತ್ತು.ಇನ್ನು ತಾಲ್ಲೂಕು ಕಚೇರಿಯ ಮುಂಭಾಗ ಜನರು ಸುಖಾಸುಮ್ಮನೆ ಮುಖಕ್ಕೆ ಮಾಸ್ಕ್ ಧರಿಸದೇ ಅಲೆದಾಡುತ್ತಿದ್ದರು . ಇವರೆಲ್ಲರನ್ನ ಆ ದೇವರೆ ಕಾಪಾಡಬೇಕು.
ಇದನ್ನ ಮನಗಂಡ ಲಿಂಗದಹಳ್ಳಿಯ ವರ್ತಕರು ಸ್ವಯಂ ಪ್ರೇರಣೆಯಿಂದ ತಮ್ಮ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಲಿಂಗದಹಳ್ಳಿ ಸುತ್ತ ಮುತ್ತಲ ಹಳ್ಳಿಗಳಿಗೆ ದೈನಂದಿನ ವ್ಯಾವಹಾರಿಕ ಕೇಂದ್ರವಾಗಿದೆ. ಇದು ಚಿತ್ರದುರ್ಗ ಮುಖ್ಯರಸ್ತೆ ಆಗಿರೋದ್ರಿಂದ ಜನ ಜಂಗುಳಿ ನೆರೆಯುತ್ತದೆ.
ಇಲ್ಲಿಗೆ ಪ್ರತಿದಿನವೂ ಅರಸೀಕರೆ, ಪ್ರರಶುರಾಮಪುರ, ಪಾವಗಡ, ಆಂಧ್ರದ ಕುಂದುರ್ಪಿ, ಅಮರಾಪುರ,ಕಲ್ಯಾಣದುರ್ಗ ಹೀಗೆ ನಾನಾ ಭಾಗ ಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಸಾಮಾನ್ಯರು ವ್ಯವಹಾರಗಳ ದೃಷ್ಟಿಯಿಂದ ಬಂದು ಹೋಗುತ್ತಾರೆ. ಆಗಾಗಿ ಲಿಂಗದಹಳ್ಳಿಯನ್ನು ಎರಡನೇ ಪಾವಗಡ ಎಂತಲೂ ಸ್ಥಳೀಯವಾಗಿ ಕರೆಯುವುದುಂಟು.
ಈಗಾಗಲೇ ಪಾವಗಡ ಪಟ್ಟಣದಲ್ಲಿ ಮಧ್ಯಾಹ್ನ 2 ಗಂಟೆಯವರೆಗೂ ಮಾತ್ರ ಅಂಗಡಿ ಮುಂಗಟ್ಟುಗಳು ತೆರೆಯಲು ವರ್ತಕರ ಸಂಘದವರು ಮನಸ್ಸು ಮಾಡಿದ ಬೆನ್ನೆಲ್ಲೆ, ಲಿಂಗದಹಳ್ಳಿಯಲ್ಲಿ ಮೆಡಿಕಲ್, ಪೆಟ್ರೋಲ್ ಬಂಕ್, ಮದ್ಯದಂಗಡಿ ಹೊರತುಪಡಿಸಿದರೆ ಉಳಿದೆಲ್ಲಾ ಕಿರಾಣಿ,ಚಿಲ್ಲರೆ ಅಂಗಡಿಗಳು, ಬಟ್ಟೆ ಅಂಗಡಿಗಳು,ಹಣ್ಣಿನ ಗುಡಾರಗಳು, ಜ್ಯೂಸ್,ಪಾತ್ರೆ ಅಂಗಡಿಯವರು ಮತ್ತು ರಸ್ತೆ ಬದಿ ವ್ಯಾಪಾರಿಗಳು ಹೋಟೆಲ್ ಮಾಲೀಕರು ಹೀಗೆ ಸಂಪೂರ್ಣವಾಗಿ ಬೆಳಿಗ್ಗೆಯೇ ಬಂದ್ ಮಾಡಿ ಮಾದರಿಯಾದ ಘಟನೆ ನಡೆದಿದೆ.
ಕೊರೊನಾ ನಿಯಂತ್ರಣಕ್ಕೆ ತರಬೇಕು ಎಂಬ ಧ್ಯೇಯೆಯೊಂದಿಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲೇ ಉಳಿದುಕೊಳ್ಳಬೇಕು ಎಂದು ಸ್ವಯಂ ಪ್ರೇರಣೆಯ ನಿರ್ಣಯದಿಂದ ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಬಂದ್ ಮಾಡಲು ನಿರ್ಧರಿಸಿದ್ದೇವೆ ಎಂದು *ಬಟ್ಟೆ ಶಾಪ್ ಮಾಲೀಕ ಅಶೋಕ್* ತಿಳಿಸುತ್ತಾರೆ.
ಆ ಹಿನ್ನೆಲೆಯಲ್ಲಿ ಲಿಂಗದಹಳ್ಳಿ ಅಂಗಡಿ ಮುಂಗಟ್ಟುಗಳು ಮುಚ್ಚಿರುವ ಕಂಡ ದೃಶ್ಯ ವಿದು.
ವರದಿ: ನವೀನ್ ಕಿಲಾರ್ಲಹಳ್ಳಿ*