20TMK01 scaled

ಸುಸಜ್ಜಿತವಾದ ಮೌಲಾನ ಅಜಾದ್ ಮಾದರಿ ಶಾಲೆಗಳ ನಿರ್ಮಾಣ -ಜಿ.ಬಿ.ಜ್ಯೋತಿಗಣೇಶ್

DISTRICT NEWS ತುಮಕೂರು

ತುಮಕೂರು ನಗರದಲ್ಲಿ ಸುಸಜ್ಜಿತವಾದ ಮೌಲಾನ ಅಜಾದ್ ಮಾದರಿ ಶಾಲೆಗಳ ನಿರ್ಮಾಣಶಾಸಕ ಜಿ.ಬಿ.ಜ್ಯೋತಿಗಣೇಶ್

ತುಮಕೂರು: ನಗರದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೃದಯ ಭಾಗದಲ್ಲಿರುವ ಗುಂಚಿ ಚೌಕದ ಮೌಲಾನ ಅಜಾದ್ ಮಾದರಿ ಶಾಲೆಯ ಕಟ್ಟಡದ ಶಂಕುಸ್ಥಾಪನೆಯನ್ನು ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಇಲಾಖೆಯಡಿ ಸುಮಾರು 2.35 ಕೋಟಿ ರೂಗಳ ವೆಚ್ಚದ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು, ತುಮಕೂರು ನಗರದಲ್ಲಿ ಈಗಾಗಲೇ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಇಲಾಖೆಯಡಿ ಉಪ್ಪಾರಹಳ್ಳಿಯ ಪಿ.ಎನ್.ಕೆ ಲೇಔಟ್‍ನ ಸಿ.ಎ ಸೈಟ್‍ನಲ್ಲಿ, ರಾಜೀವ್‍ಗಾಂಧಿನಗರ ಹೀಗೆ ನಗರದಾದ್ಯಂತ 3 ಕಟ್ಟಡಗಳು ಹಾಗೂ ಮೌಲಾನ ಅಜಾದ್ ಭವನ ಮತ್ತು ಕಾಮನ್ ಸರ್ವೀಸ್ ಸೆಂಟರ್ ಸ್ಥಾಪನೆಯಾಗುತ್ತಿದೆ ಎಂದು ತಿಳಿಸಿದರು.

ಪ್ರಸ್ತುತ ಮಕ್ಕಳು ಉರ್ದು ಶಾಲೆಗೆ ಹೋಗುವ ಸಂದರ್ಭದಲ್ಲಿ ವಾಸ್ತವ ಶಿಕ್ಷಣಕ್ಕೆ ಅಗತ್ಯವಿರುವ ಪಠ್ಯಕ್ರಮದ ಜೊತೆ ಉತ್ತಮವಾದ ಮೂಲಸೌಕರ್ಯವನ್ನು ಮಕ್ಕಳಿಗೆ ನೀಡಿ, ಮಕ್ಕಳನ್ನ ದೇಶದ ಉತ್ತಮ ಪ್ರಜೆಯನ್ನ ನೀಡುವುದಕ್ಕೆ ಈ ಒಂದು ಯೋಜನೆ ಉಪಯುಕ್ತವಾಗಿದೆ ಎಂದು ಶಾಸಕರು ತಿಳಿಸಿದರು.

 ತದನಂತರ ಇತರೆ ಇಲಾಖೆಗಳಿಗೆ ಹೋಲಿಕೆ ಮಾಡಿದರೆ ಅಲ್ಪಸಂಖ್ಯಾತರ ಇಲಾಖೆಯಡಿ ಉತ್ತಮವಾದಂತಹ ಕೆಲಸ ನಡೆಯುತ್ತಿದ್ದು, ಹೆಚ್ಚಿನ ಅನುದಾನ ಒದಗಿ, ಅತ್ಯತ್ತಮವಾದ ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ಓದುವಂತಹ ಮಕ್ಕಳಿಗೆ ಮೂಲಸೌಕರ್ಯವಿರುವಂತಹ ಕಟ್ಟಡ ಹಾಗೂ ಉತ್ತಮವಾದ ಶಿಕ್ಷಕ ವೃಂದದವರೊಂದಿಗೆ ಬೆಳೆದಾಗ ಜಾಗತಿಕ ಮಟ್ಟದಲ್ಲಿ ಸ್ಫರ್ಧಿಸಲು ಅದರಲ್ಲೂ ಆಂಗ್ಲ ಮಾಧ್ಯಮವಾಗಿರುವದರಿಂದ ಈ ಮೌಲಾನ ಅಜಾದ್ ಮಾದರಿ ಶಾಲೆ ಚಾಲ್ತಿಯಲ್ಲಿದ್ದು, ಮಕ್ಕಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಸುಬ್ರನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹನುಮನಾಯಕ್, ಮಹಾನಗರಪಾಲಿಕೆಯ ಸದಸ್ಯರಾದ ಮಹೇಶ್, ಕರೀಂ, ಶಾಲಾ ಸಿಬ್ಬಂಧಿಗಳು ಹಾಗೂ ಮುಂತಾದ ಮುಂಖಂಡರು ಹಾಜರಿದ್ದರು