ವೈದ್ಯರು ಬಡವರಿಗೆ ಸಮರ್ಪಕವಾದ ಚಿಕಿತ್ಸೆ ನೀಡುತ್ತಿಲ್ಲ
ತುರ್ತು ವಾಹನದ ಸೌಲಭ್ಯಗಳು ಸಿಗದೇ ಬಡಜನರು ಒದ್ದಾಡಿತ್ತಿದ್ದಾರೆ.
ರೋಗಿಗಳನ್ನು ಖಾಸಗಿ ಆಸ್ಪತ್ರೆ ಗೆ ಕಳುಹಿಸುವ ಮೂಲಕ ಕಮೀಷನ್ ದಂದೆ ನಡೆಯುತ್ತಿದೆ.
ಶೀಘ್ರ ದಲ್ಲೆ ಡಿ ಎಚ್ ಒ ಗಮನಕ್ಕೆ
ಪಾವಗಡ: – ಪಟ್ಟಣದ ಅಂಬೇಡ್ಕರ್ ಭವನದಲ್ಲಿ ದಲಿತ ಮಾನವ ಹಕ್ಕುಗಳ ವೇದಿಕೆ, ನ್ಯಾಯ ಆರೋಗ್ಯ ಮತ್ತು ಜನ ವೇದಿಕೆ ಹಾಗೂ ತಮಟೆ ಸಂಸ್ಥೆಯ ವತಿಯಿಂದ ಗರ್ಭಿಣಿ ಬಾಣಂತಿಯರ ಆರೋಗ್ಯ ಹಕ್ಕುಗಳು ಮತ್ತು ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಸಮಾಲೋಚನೆ ಸಭೆಯನ್ನು ಏರ್ಪಡಿಸಿದ್ದರು
ಈ ಕಾರ್ಯಕ್ರಮ ದಲ್ಲಿ ಪಾವಗಡ ತಾಲ್ಲೂಕಿನ ಆರೋಗ್ಯ ಸಮಸ್ಯೆಗಳಾದ ಪ್ರಸವ ಪೂರ್ವ ಆರೈಕೆಗಳು, ಹೆರಿಗೆ, ಪ್ರಸವದ ನಂತರದ ತಾಯಿ ಮಗು ಆರೋಗ್ಯ, ಸರ್ಕಾರದಿಂದ ಸಿಗುವ ಹೆರಿಗೆ ಭತ್ಯೆಗಳು ಹಾಗೂ ತುರ್ತು ವಾಹನದ ಸೌಲಭ್ಯಗಳು ಸಿಗದೇ ಬಡಜನರು ಒದ್ದಾಡಿತ್ತಿದ್ದಾರೆಎಂದು ದಲಿತ ಮಾನವ ಹಕ್ಕುಗಳ ವೇದಿಕೆಯ ರಾಜ್ಯ ಸಂಯೋಜಕರಾದ ಗಂಗರಾಜು ರವರು ಸರ್ಕಾರ ಮತ್ತು ಸ್ಥಳೀಯ ಆಡಳಿತದ ವಿರುದ್ದ ದೂರಿದರು,
ಹೆಲ್ಪ್ ಸೊಸೈಟಿಯ ಅಧ್ಯಕ್ಷರು ಮಾನಂ ಶಶಿಕಿರಣ್ ರವರು ಮಾತನಾಡಿ ತಾಲ್ಲೂಕು ಆಸ್ಪತ್ರೆಯಲ್ಲಿ ತುಂಬಾ ರಾಜಕೀಯ ವಾತಾವರಣವಿದೆ ಇಲ್ಲಿನ ವೈದ್ಯರು ಬಡವರಿಗೆ ಸಮರ್ಪಕವಾದ ಚಿಕಿತ್ಸೆ ನೀಡದೆ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುವುದರ ಮೂಲಕ ಅವರಿಂದ ಕಮೀಷನ್ ಪಡೆಯುತ್ತಿದ್ದಾರೆ, ಇದರ ಬಗ್ಗೆ ಮಾನ್ಯ ಶಾಸಕರಾಗಲಿ ರಾಜಕೀಯ ಮುಖಂಡರಾಗಲಿ, ತಾಲ್ಲೂಕು ಆಡಳಿತವಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ, ಆದ್ದರಿಂದ ಆಸ್ಪತ್ರೆಗೆ ಹೆರಿಗೆಗಾಗಿ ಬರುವ ಬಡ ಜನರು 5 ರಿಂದ 10 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿಕೊಂಡು ಹೋಗಬೇಕಾದಂತಹ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಕಾರ್ಯಕ್ರಮ ದಲ್ಲಿ ಹೆಲ್ಪ್ ಸೊಸೈಟಿಯ ಲೋಕೇಶ, ಸಾಗರ್, ತಮಟೆ ಸಂಸ್ಥೆಯ ವೆಂಕಟೇಶ್, ರಾಮಕೃಷ್ಣ, ಲತಾ, ರೂಪ,ಯಲ್ಲಕ್ಕ ಸಿದ್ದಾರ್ಥ ಟ್ರಸ್ಟ್ ನ ಕಾರ್ಯದರ್ಶಿಗಳಾದ ವಳ್ಳೂರು ನಾಗೇಶ್, ಬೀದಿ ಬದಿ ವ್ಯಾಪಾರಿಗಳ ಸಂಘಟನೆಯ ಅಧ್ಯಕ್ಷರಾದ ಶಶಿಕಲಾ, ಮುಖಂಡರಾದ ತಮಟೆ ಸುಬ್ಬರಾಯಪ್ಪ, ನಲಿಗಾನಹಳ್ಳಿ ಮಂಜುನಾಥ ಮತ್ತು ಸಂಜೀವಪ್ಪನವರು ಉಪಸ್ಥಿತರಿದ್ದರು. ಮತ್ತು ಇದೇ ತಂಡ ದಿನಾಂಕ 09-02-2021 ರಂದು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನು ಬೇಟಿ ಮಾಡಿ ತಾಲ್ಲೂಕಿನಲ್ಲಿನ ಆರೋಗ್ಯದ ಅವ್ಯವಸ್ಥೆಗಳನ್ನು ಮತ್ತು ಸಮಸ್ಯೆಗಳ ಕುರಿತು ಚರ್ಚೆ ಮಾಡಿ ಅವರಿಗೆ ಮನವಿ ಪತ್ರವನ್ನು ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.