ಪಾವಗಡ: ಸ್ವಾಮಿ ಜಪಾನಂದಜೀ ರವರ ಮನಸ್ಸು ಹಾಗೂ ವಿಚಾರ ನಿಜಕ್ಕೂ ವೈವಿದ್ಯಮಯವಾದದ್ದು. ಇದಕ್ಕೆ ಕೈಗನ್ನಡಿಯಂತೆ ದಿನಾಂಕ: 4-2-2021ರಂದು ಸ್ವಾಮಿ ವಿವೇಕಾನಂದರ 159ನೇ ಜನ್ಮದಿನೋತ್ಸವದಂದು ಪಾವಗಡದ ಪ್ರಸಿದ್ಧ ಶ್ರೀ ಶನಿಮಹಾತ್ಮ ದೇವಸ್ಥಾನದ ಮುಂಭಾಗದಲ್ಲಿ ಬಿಸಿಲಿನ ಬೇಗೆಯಲ್ಲೂ ತಮ್ಮ ಜೀವನೋಪಾಯಕ್ಕಾಗಿ ಬೀದಿ ವ್ಯಾಪಾರ ಮಾಡುತ್ತಿರುವ ಬಡ ವ್ಯಾಪಾರಿಗಳಿಗೆ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಗಟ್ಟಿಮುಟ್ಟಾದ ಛತ್ರಿಗಳನ್ನು ನೀಡಲಾಯಿತು.
ಸುಮಾರು ಹದಿನೈದು ಜನರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಭಯಂಕರ ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಈ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಛತ್ರಿಗಳನ್ನು ಶ್ರೀ ಎಂ.ಆರ್.ಗೌತಮ್, ಪೊಲೀಸ್ ಉಪ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಹಾಗೂ ಶ್ರೀ ಎ.ನಂಜುಂಡೇಶ್ವರ, ನಿವೃತ್ತ ಸೈನ್ಯಾಧಿಕಾರಿಗಳು ನೀಡಿದರು.
ಪೂಜ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಈ ವಿತರಣಾ ಕಾರ್ಯವು ಸದರಿ ಬೀದಿ ವ್ಯಾಪಾರಿಗಳ ಮುಖದಲ್ಲಿ ಮಂದಹಾಸವನ್ನು ತಂದಿತು. ಪೂಜ್ಯ ಸ್ವಾಮಿ ಜಪಾನಂದಜೀ ರವರ ಪ್ರಕಾರ ಸ್ವಾಮಿ ವಿವೇಕಾನಂದರ ಅತ್ಯಮೂಲ್ಯವಾದ ಸಂದೇಶ “ಜೀವನಲ್ಲಿ ಶಿವನನ್ನು ಕಂಡು ಸೇವೆ ಸಲ್ಲಿಸುವುದು”. ಅದರ ಅನುಷ್ಠಾನ ರೂಪವೇ ಇದಾಗಿದೆ ಎಂದು ಸೇವೆಯನ್ನು ಸಲ್ಲಿಸಿದ ಸಂತೃಪ್ತಿ ಪೂಜ್ಯ ಸ್ವಾಮೀಜಿಯವರಲ್ಲಿ ಕಂಡು ಬಂದಿತು.